ಆಫ್ಘನ್‌ ಸರ್ಕಾರದ ಸ್ವರೂ​ಪ​ದ ಬಗ್ಗೆ ಭಾರತದ ಕಳವಳ!

By Suvarna NewsFirst Published Sep 12, 2021, 9:19 AM IST
Highlights

* ನೂತನ ಆಫ್ಘನ್‌ ಸರ್ಕಾರದ ಬಗ್ಗೆ ಭಾರತದ ಮೊದಲ ಪ್ರತಿಕ್ರಿಯೆ

* ಆಫ್ಘನ್‌ ಸರ್ಕಾರದ ಸ್ವರೂ​ಪ​ದ ಬಗ್ಗೆ ಭಾರತದ ಕಳವಳ

ನವದೆಹಲಿ(ಸೆ.12): ಅಷ್ಘಾನಿಸ್ತಾನದಲ್ಲಿ ನೂತನವಾಗಿ ರಚನೆಯಾದ ಸರ್ಕಾರದ ಸಮಗ್ರ ಒಳಗೊಳ್ಳುವಿಕೆ ಬಗ್ಗೆ ಭಾರತಕ್ಕೆ ಕಳವಳವಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ. ಇದು ನೆರೆಯ ದೇಶದಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ ಭಾರತ ನೀಡಿದ ಮೊದಲ ಪ್ರತಿಕ್ರಿಯೆಯಾಗಿದ್ದು, ಇದಕ್ಕೆ ಆಸ್ಪ್ರೇಲಿಯಾ ಕೂಡಾ ಧ್ವನಿಗೂಡಿಸಿದೆ.

ಉಭಯ ದೇಶಗಳ ನಡುವಿನ ಮೊದಲ 2+2 ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌.ಜೈಶಂಕರ್‌, ‘ಅಷ್ಘಾನಿಸ್ತಾನದ ಹೊಸ ಸರ್ಕಾರದಲ್ಲಿನ ಸಮಗ್ರ ಒಳಗೊಳ್ಳುವಿಕೆ ಬಗ್ಗೆ ಭಾರತ ಕಳವಳ ಹೊಂದಿದೆ ಎಂದರು. ಜೈಶಂಕರ್‌ ಅವರ ಈ ಮಾತಿಗೆ ಆಸ್ಪ್ರೇಲಿಯಾ ವಿದೇಶಾಂಗ ಸಚಿವೆ ಮರೈಸ್‌ ಪೈನೆ ಕೂಡಾ ಧ್ವನಿಗೂಡಿಸಿ, ‘ಅಷ್ಘಾನಿಸ್ತಾನದಲ್ಲಿನ ಮಹಿಳೆಯರ ಸ್ಥಿತಿಗತಿ ಬಗ್ಗೆ ನಾವು ಕೂಡಾ ಕಳವಳ ಹೊಂದಿದ್ದೇವೆ’ ಎಂದು ಹೇಳಿದ್ದರು.

ಅಷ್ಘಾನಿಸ್ತಾನದಲ್ಲಿ ಚುನಾಯಿತ ಸರ್ಕಾರ ಪದಚ್ಯುತವಾದ ಬೆನ್ನಲ್ಲೇ, ಮಹಿಳೆಯರನ್ನು ಹಲವು ಹುದ್ದೆಗಳಿಂದ ತೆಗೆದು ಹಾಕಲಾಗಿತ್ತು. ಸಾರ್ವಜನಿಕ ಸ್ಥಳಗಳಿಂದ ಅವರ ಫೋಟೋಗಳನ್ನು ತೆಗೆದುಹಾಕಲಾಗಿತ್ತು. ಶಾಲಾ-ಕಾಲೇಜುಗಳಲ್ಲಿ ಸಹ ಶಿಕ್ಷಣಕ್ಕೆ ಬ್ರೇಕ್‌ ಹಾಕಲಾಗಿತ್ತು. ಜೊತೆಗೆ ಇತ್ತೀಚೆಗೆ ರಚನೆಯಾದ ಹಂಗಾಮಿ ಸರ್ಕಾರದಲ್ಲಿ ಯಾವುದೇ ಮಹಿಳೆಯರಿಗೂ ಸ್ಥಾನ ಕಲ್ಪಿಸಿರಲಿಲ್ಲ. ಅದರ ಬೆನ್ನಲ್ಲೇ ಭಾರತ ಮತ್ತು ಆಸ್ಪ್ರೇಲಿಯಾ ದೇಶಗಳು ಅಷ್ಘಾನಿಸ್ತಾನದಲ್ಲಿ ಮತ್ತು ಅಲ್ಲಿನ ಸರ್ಕಾರದಲ್ಲಿ ಮಹಿಳೆಯರ ಕಡೆಗಣನೆ ಬಗ್ಗೆ ಪರೋಕ್ಷವಾಗಿ ಕಳವಳ ವ್ಯಕ್ತಪಡಿಸಿವೆ

click me!