
ಬ್ರಿಟನ್(ಸೆ.12): ಸೋಶಿಯಲ್ ಮೀಡಿಯಾದಲ್ಲಿ ಶಾಕಿಂಗ್ ಫೋಟೋ ಒಂದು ವೈರಲ್ ಆಗುತ್ತಿದೆ. ಸನ್ಯಾಸಿನಿಯ ಉಡುಪಿನಲ್ಲಿ ಸ್ಮಶಾನದ ಬಳಿ, ಮಹಿಳೆಯೊಬ್ಬಳು ನಾಯಿ ಮತ್ತು ಮನುಷ್ಯನ ಅಸ್ಥಿಪಂಜರಗದೊಂದಿಗೆ ನೃತ್ಯ ಮಾಡುತ್ತಿರುವುದು ಚಿತ್ರದಲ್ಲಿ ಕಾಣಬಹುದು. ಡೈಲಿ ಸ್ಟಾರ್ ಪ್ರಕಾರ, ಈ ಚಿತ್ರವು ಇಂಗ್ಲೆಂಡಿನ ಸ್ಮಶಾನದ ಬಳಿ ಕಂಡು ಬಂದ ದೃಶ್ಯವಾಗಿದೆ. ಇಲ್ಲಿನ ಸ್ಮಶಾನದಲ್ಲಿ ಮಹಿಳೆಯೊಬ್ಬರು ಹೀಗೆ ವರ್ತಿಸುತ್ತಾರೆಂದು ಅನೇಕ ಮಂದಿ ಹೇಳಿದ್ದರು. ಆದರೀಗ ಆ ಮಹಿಳೆಯ ಫೋಟೋ ಕೂಡಾ ಬಹಿರಂಗೊಂಡಿದ್ದು, ನೋಡುಗರನ್ನು ಅಚ್ಚರಿಗೀಡು ಮಾಡಿದೆ.
ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಆಘಾತಕಾರಿ ಕಥೆ
ಇದನ್ನು ಕಂಡ ಪ್ರತ್ಯಕ್ಷದರ್ಶಿಯೊಬ್ಬರು"ಹಳೆಯ ಹಲ್ ಜನರಲ್ ಸ್ಮಶಾನದ ಬಳಿ ಹಾದುಹೋಗುವಾಗ, ಈ ದೃಶ್ಯ ನೋಡಿ ಆಚ್ಚರಿಗೀಡಾಗಿದ್ದಾನೆ. ಅಲ್ಲದೇ ಅಲ್ಲಿಂದ ಓಡಾಡುತ್ತಿದ್ದ ವಾಹನಗಳೂ ವೇಗ ಕಡಿಮೆ ಮಾಡಿ ಅಲ್ಲೇನಾಗುತ್ತಿದೆ ಎಂದು ತಿಳಿದುಕೊಳ್ಳುವ ಕುತೂಹಲದಲ್ಲಿದ್ದರು.
ಹಲ್ ಲೈವ್ ನ ವರದಿಯ ಪ್ರಕಾರ, ತಲೆಗೆ ಸ್ಕಾರ್ಪ್ ಧರಿಸಿ, ಸನ್ಯಾಸಿನಿಯಂತೆ ಕಾಣುತ್ತಿದ್ದ ಮಹಿಳೆ ಮಾನವ ಅಸ್ಥಿಪಂಜರದೊಂದಿಗೆ ಸಂತೋಷದಿಂದ ನೃತ್ಯ ಮಾಡುತ್ತಿದ್ದಳು, ಅತ್ತ ನಾಯಿ ಕೂಡಾ ಆಕೆ ಜೊತೆ ಆಟವಾಡುತ್ತಿತ್ತು. ಇನ್ನು ಈ ದೃಶ್ಯದ ಬಗ್ಗೆ ಮಾಹಿತಿ ಕೊಟ್ಟ ವ್ಯಕ್ತಿ ಖುದ್ದು ತಾನೇ ಈ ಫೋಟೋ ಸೆರೆ ಹಿಡಿದಿದ್ದಾನೆ. ಅಲ್ಲದೇ ಆ ಮಹಿಳೆ ಸ್ಮಶಾನ ಬಳಿ ಇದ್ದ ಹೈಮರ್ಸ್ ಶಾಲೆಗೆ ತಿರುವಿಲ್ಲಿ ನಿಂತು ಅಸ್ಥಿಪಂಜರದೊಂದಿಗೆ ನೃತ್ಯ ಮಾಡುತ್ತಿದ್ದಳು ಎಂದಿದ್ದಾನೆ.
50 ವರ್ಷದಿಂದ ಈ ಸ್ಮಶಾನಕ್ಕೆ ಬೀಗ
ಇನ್ನು ಅದೇ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಇನ್ನೂ ಕೆಲವರು ಈ ಫೋಟೋ ಸೆರೆ ಹಿಡಿದಿದ್ದು, ಸೆಪ್ಟೆಂಬರ್ 11 ರ ಶನಿವಾರ ಮಧ್ಯಾಹ್ನ ಈ ದೃಶ್ಯ ಕಂಡು ಬಂದಿರುವುದಾಗಿ ವಿವರಿಸಿದ್ದಾರೆ. ಹಲ್ ಜನರಲ್ ಸ್ಮಶಾನವನ್ನು ಸುಮಾರು 50 ವರ್ಷಗಳಿಂದ ಬಳಸಲಾಗುತ್ತಿಲ್ಲ. ಆದರೂ ಇದು ನಗರದ ಅತ್ಯಂತ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದೆ. 1847 ರಲ್ಲಿ ನಿರ್ಮಿಸಲಾದ ಈ ಸ್ಮಶಾನವನ್ನು 1972 ರಲ್ಲಿ ಮುಚ್ಚಲಾಗಿತ್ತು. ಅಲ್ಲಿ ಕಾಲರಾದಿಂದ ಮೃತಪಟ್ಟ ಸುಮಾರು 1,800 ಮಂದಿಯನ್ನು ಸಮಾಧಿ ಮಾಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ