Asianet Suvarna News Asianet Suvarna News

ಪಂಜಶೀರ್‌ ಮೇಲೆ ತಾಲಿಬಾನ್ ದಾಳಿ; ಮಾಜಿ ಅಧ್ಯಕ್ಷ ಅಮರುಲ್ಲಾ ಸಲೇಹ್ ಸಹೋದರನ ಹತ್ಯೆ!

  • ಪಂಜಶೀರ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿಲು ದಾಳಿ ನಡೆಸಿದ ತಾಲಿಬಾನ್
  • ದಾಳಿಯಲ್ಲಿ ಆಫ್ಘಾನ್ ಮಾಜಿ ಅಧ್ಯಕ್ಷ ಅಮರುಲ್ಲಾ ಸಲೇಹ್ ಸಹೋದರ ಹತ್ಯೆ ವರದಿ
  • ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ರೊಹುಲ್ಲಾಗೆ ಹಿಂಸೆ ನೀಡಿ ಹತ್ಯೆ
Afghanistan Crisis former vice president Amrullah Saleh Brother reportedly tortured killed by Taliban ckm
Author
Bengaluru, First Published Sep 10, 2021, 9:17 PM IST
  • Facebook
  • Twitter
  • Whatsapp

ಕಾಬೂಲ್(ಸೆ.10): ಆಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಿರುವ ತಾಲಿಬಾನ್ ಉಗ್ರರು ಮತ್ತೊಂದೆಡೆ ಕ್ರೌರ್ಯ ಮುಂದುವರಿಸಿದ್ದಾರೆ. ಪಂಜಶೀರ್ ಸಂಪೂರ್ಣ ವಶಪಡಿಸಲು ತಾಲಿಬಾನ್ ಉಗ್ರರು ಭಾರಿ ಶಸ್ತ್ರಾಸ್ತ್ರ ಜೊತೆ ದಾಳಿ ಮಾಡಿದ್ದಾರೆ. ಸೆಪ್ಟೆಂಬರ್ 9ರ ರಾತ್ರಿ ಪಂಜಶೀರ್ ಮೇಲೆ ದಾಳಿ ಮಾಡಿದ ತಾಲಿಬಾನ್ ಉಗ್ರರು, ಆಫ್ಘಾನಿಸ್ತಾನ ಮಾಜಿ ಅಧ್ಯಕ್ಷ, ತಾಲಿಬಾನ್ ವಿರುದ್ದ ಯುದ್ಧ ಸಾರಿದ ಅಮರುಲ್ಲಾ ಸಲೇಹ್ ಸಹೋದರನ ಸೆರೆ ಹಿಡಿದು ಹತ್ಯೆ ಮಾಡಿದ್ದಾರೆ ಎಂದು ರಾಯ್‌ಟರ್ಸ್ ವರದಿ ಮಾಡಿದೆ.

9/11 ಉಗ್ರ ದಾಳಿಯ 20ನೇ ವರ್ಷಾಚರಣೆ ದಿನ ತಾಲಿಬಾನ್ ಸಚಿವರ ಪ್ರಮಾಣ ವಚನ!

ಪಂಜಶೀರ್ ಕಣಿವೆಯ ಸಂಪೂರ್ಣ ಭಾಗ ತಾಲಿಬಾನ್ ಕೈವಶವಾಗಿಲ್ಲ. ಒಂದು ಭಾಗದಲ್ಲಿ ಅಮರುಲ್ಲಾ ಸಲೇಹ್, ಅಹಮ್ಮದ್ ಮಸೂದ್ ತಾಲಿಬಾನ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈ ಪ್ರದೇಶಗಳ ಮೇಲೆ ನಿನ್ನೆ ರಾತ್ರಿ ತಾಲಿಬಾನ್ ಉಗ್ರರು ಅಮೆರಿಕ ಬಿಟ್ಟು ಹೋದ ಶಸ್ತ್ರಾಸ್ತ್ರ ಹಿಡಿದು ಪಂಜಶೀರ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಅಮರುಲ್ಲಾ ಸಲೇಹ್ ಸಹೋದರ ರೊಹುಲ್ಲಾ ಸಲೇಹ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

 

ಗಾಯಗೊಂಡ ರೊಹುಲ್ಲಾ ಸಲೇಹ್ ಸೆರೆ ಹಿಡಿದ ತಾಲಿಬಾನ್ ಉಗ್ರರು ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ ಎಂದು ರಾಯ್‌ಟರ್ಸ್ ವರದಿ ಮಾಡಿದೆ. ಅಮರುಲ್ಲಾ ಸಲೇಹ್ ಸಹೋದರ ಎಂದು ತಿಳಿದ ಉಗ್ರರು ರೊಹುಲ್ಲಾ ಸಲೇಹ್ ಸೆರೆ ಹಿಡಿದು ಹತ್ಯೆ ಮಾಡಿದ್ದಾರೆ. ತಾವು ಬದಲಾಗಿದ್ದೇವೆ ಎಂದ ತಾಲಿಬಾನ್ ಉಗ್ರರು ಕ್ರೌರ್ಯ ಮುಂದುವರಿಸುತ್ತಲೇ ಇದ್ದಾರೆ.

ಅಂಗಾಂಗ ಪ್ರದರ್ಶನವಾಗುವ ನೆಪ: ಮಹಿಳೆಯರ ಕ್ರೀಡೆಗೆ ತಾಲಿಬಾನ್‌ ನಿಷೇಧ!

ದೇ ವೇಳೆ ಅಮರುಲ್ಲಾ ಸಲೇಹ್ ಹಾಗೂ ಅಹಮ್ಮದ್ ಶಾ ಮಸೂದ್ ತಜಕಿಸ್ತಾನಕ್ಕೆ ಹಾರಿಲ್ಲ. ಪಂಜಶೀರ್‌ನಲ್ಲಿದ್ದಾರೆ. ಅಲ್ಲಿಂದಲೆ ತಾಲಿಬಾನ್ ವಿರುದ್ಧ ಹೋರಾಡುತ್ತಿದ್ದಾರೆ ಎಂದು ತಜಕಿಸ್ತಾನ ರಾಯಭಾರ ಕಚೇರಿ ಹೇಳಿದೆ.

ಆಗಸ್ಟ್ 15 ರಂದು ತಾಲಿಬಾನ್ ಉಗ್ರರು ಕಾಬೂಲ್ ಕೈವಶ ಮಾಡಿ ಅರಾಜಕತೆ ಸೃಷ್ಟಿಸಿದ್ದಾರೆ. ಗುಂಡಿನ ದಾಳಿ ಮೂಲಕ ಪ್ರತಿ ದಿನ ಹೆಣಗಳ ರಾಶಿ ಹಾಕುತ್ತಿದ್ದಾರೆ. ಕಾಬೂಲ್ ಕೈವಶವಾಗುತ್ತಿದ್ದಂತೆ ಅಧ್ಯಕ್ಷ ಅಶ್ರಫ್ ಘನಿ ಯುಎಇಗೆ ಹಾರಿದ್ದಾರೆ. ಆದರೆ ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್ ತಾಲಿಬಾನ್ ವಿರುದ್ಧ ಹೋರಾಟ ಮುಂದುವರಿಸಿದ್ದಾರೆ. ಕೊನೆಯ ಉಸಿರಿನವರೆಗೂ ಹೋರಾಡುತ್ತೇನೆ ಎಂದಿದ್ದ ಅಮರುಲ್ಲಾ ಸಲೇಹ್ ಕುಟುಂಬ ಸದಸ್ಯರನ್ನು ಕಳೆದುಕೊಳ್ಳುತ್ತಿದ್ದಾರೆ.

ಅಧಿಕಾರಕ್ಕೇರುತ್ತಲೇ ಕ್ರೌರ್ಯ ಮೆರೆದ ತಾಲಿಬಾನ್, ಬದಲಾಗಿದ್ದೇವೆ ಎಂದಿದ್ದೆಲ್ಲಾ ಬರೀ ಸುಳ್ಳು

Follow Us:
Download App:
  • android
  • ios