ತಪ್ಪಿಸಿಕೊಳ್ತಿದ್ದ ಜನರ ತಡೆದು ಓಡಬೇಡಿ ಇದು ನಿಮ್ಮ ದೇಶ ಎಂದ ತಾಲೀಬಾನ್

By Suvarna NewsFirst Published Oct 1, 2021, 9:49 AM IST
Highlights
  • ಓಡಿ ತಪ್ಪಿಸಿಕೊಳ್ಳುತ್ತಿದ್ದ ಜನರನ್ನು ತಡೆದ ತಾಲೀಬಾನ್
  • ಓಡ್ಬೇಡಿ, ಇದು ನಿಮ್ಮದೇ ದೇಶ ಎಂದು ಆಶ್ವಾಸನೆ

ಅಫ್ಘಾನಿಸ್ತಾನದಿಂದ ಜನರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ತಾಲೀಬಾನಿಗಳು(Taliban) ಬಿಡುತ್ತಿಲ್ಲ. ಸರ್ಕಾರ ರಚಿಸಿ ಆಗಿದೆ, ಖಜಾನೆ ಖಾಲಿ. ಜನರಿಗೆ ನೀಡುವುದು ಬಿಟ್ಟು ತಮಗೆ ತಿನ್ನುವುದಕ್ಕೂ ಏನೂ ಇಲ್ಲ. ಹೀಗಿದ್ದರೂ ತಪ್ಪಿಸಿಕೊಳ್ಳೋ ಜನರನ್ನು ಮಾತ್ರ ಬಿಡುತ್ತಿಲ್ಲ ತಾಲೀಬಾನ್. ಓಡಿ ಹೋಗುವ ಜನರನ್ನು ತಡೆದು ನಿಲ್ಲಿಸಿ ಓಡ್ಬೇಡಿ, ಇದು ನಿಮ್ಮದೇಶ ಎಂದು ಹೇಳುತ್ತಿದೆ.

ಪಾಕಿಸ್ಥಾನದಿಂದ(Pakistan) ನೂರು ಮೀಟರ್ ದೂರದಲ್ಲಿರುವ ಸ್ಪಿನ್ ಬೋಲ್ಡಾಕ್ ಪಟ್ಟಣದ ರಸ್ತೆಯಲ್ಲಿ ಕುಳಿತಿರುವ ಜಕರಿಯುಲ್ಲಾ ಅರ್ಧ ಡಜನ್‌ಗಿಂತಲೂ ಹೆಚ್ಚು ಜನರನ್ನು ಮರಳಿ ಕಳಿಸಿದ್ದಾಗಿ ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ಉದ್ಯೋಗವಿರದ ಕಾರಣ ಜನ ಗಡಿ ದಾಟಲು ಬಯಸುತ್ತಾರೆ ಎನ್ನಲಾಗಿದೆ. ಹೊಸ ತಾಲಿಬಾನ್ ಆಡಳಿತಗಾರರು ಆಫ್ಘನ್ನರು ತಮ್ಮ ಸಂಘರ್ಷ ಇರುವ ದೇಶವನ್ನು ಉಳಿಸಿಕೊಳ್ಳಬೇಕು ಮತ್ತು ಪುನರ್ನಿರ್ಮಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಗಡಿ ದಾಟಲು ಬಿಡುತ್ತಿಲ್ಲ ಎನ್ನಲಾಗುತ್ತಿದೆ.

ಅಮೆರಿಕದ Exclusive ವರದಿ, ಪಾಕಿಸ್ತಾನ ಉಗ್ರರ ಮುಂದಿನ ಗುರಿಯೇ ಭಾರತ!

ಇದು ನಿಮ್ಮ ದೇಶ. ನೀವು ದೇಶ ಬಿಡಬಾರದು ಎಂದು ತಾಲೀಬಾನಿಗಳು ಜನರಿಗೆ ಹೇಳುತ್ತಾರೆ ಎಂದು 25 ವರ್ಷದ ರಹಮದೀನ್ ವಾರ್ಡಕ್ ಹೇಳಿದ್ದಾರೆ. ಚಾಮನ್‌ನಲ್ಲಿರುವ ಅವರ ಪಾಕಿಸ್ತಾನಿ ಸಹವರ್ತಿಗಳು ಗಡಿ ದಾಟಲು ಪ್ರಯತ್ನಿಸುತ್ತಿದ್ದವರನ್ನು ತಡೆಯುತ್ತಿದ್ದರು.

ಪ್ರತಿದಿನ, 8,000 ರಿಂದ 9,000 ಜನರು ಕಾಗದಪತ್ರಗಳಿಲ್ಲದೆ ಗಡಿಯನ್ನು ದಾಟಲು ಪ್ರಯತ್ನಿಸುತ್ತಾರೆ. ಅವರನ್ನು ಮರಳಿ ಕಳುಹಿಸಲಾಗುತ್ತದೆ ಎಂದು ಒಬ್ಬ ತಾಲಿಬಾನ್ ಗಡಿ ಕಾವಲುಗಾರ ಮುಲ್ಲಾ ಮೌಲ್ವಿ ಹಕ್ಯಾರ್ ತಿಳಿಸಿದ್ದಾರೆ.

ಕಂದಹಾರ್ ಪ್ರಾಂತ್ಯದ ತಾಲಿಬಾನ್ ಅಧಿಕಾರಿ ಮೌಲ್ವಿ ನೂರ್ ಮೊಹಮ್ಮದ್ ಸಯೀದ್, ಅಧಿಕಾರಿಗಳು ಜನರು ದೇಶವನ್ನು ತೊರೆಯದಂತೆ ಕೇಳುತ್ತಿದ್ದಾರೆ ಎಂದು ದೃಢಪಡಿಸಿದ್ದಾರೆ. ಹಾಗೆ ಮಾಡುವುದರಿಂದ ಅಫ್ಘಾನ್ ಸಂಸ್ಕೃತಿಯ ಗೌರವವನ್ನು ಕಳೆದಂತಾಗುತ್ತದೆ ಎಂದು ಅಧಿಕಾರಿಗಳು ಮನವೊಲಿಸುತ್ತಿದ್ದಾರೆ.

click me!