
ಟರ್ಕಿ(ಸೆ. 30) ಇದೊಂದು ವಿಚಿತ್ರ ಸುದ್ದಿ. ನಾಪತ್ತೆಯಾಗಿದ್ದ ಕುಡುಕ ತನ್ನನ್ನು ಹುಡುಕಲು ಬಂದವರ ಜತೆ ಸೇರಿಕೊಂಡು ತನ್ನನ್ನೇ ಹುಡುಕಿದ್ದಾನೆ. ತಂಡದ ಜತೆ ಸೇರಿ ಗಂಟೆಗಳ ಕಾಲ ಹುಡುಕಾಟ ಮಾಡಿದ್ದಾನೆ. ಆತನಿಗೆ ತನ್ನನ್ನು ತಾನೇ ಹುಡುಕುತ್ತಿದ್ದೆ ಎನ್ನುವುದು ಗೊತ್ತೆ ಇರಲಿಲ್ಲ.
ಸ್ಥಳೀಯ ಮಾಧ್ಯಮಗಳು ವರದಿ ಮಾಡಿದಂತೆ 50 ವರ್ಷದ ಬಿಯಾನ್ ಮುತ್ಲು ಸ್ನೇಹಿತರೊಂದಿಗೆ ಸೇರಿ ಕಂಠಪೂರ್ತಿ ಮದ್ಯಪಾನ ಮಾಡಿದ್ದಾನೆ. ಬರುತ್ತಾ ದಾರಿಯಲ್ಲಿ ದಿಕ್ಕು ತಪ್ಪು ಅರಣ್ಯದೊಳಕ್ಕೆ ಸೇರಿಕೊಂಡಿದ್ದಾನೆ. ಸ್ನೇಹಿತ ನಾಪತ್ತೆಯಾದ ವಿಚಾರವನ್ನು ಉಳಿದವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಕುಡುಕ ಗಂಡನ ಕರೆಂಟ್ ಶಾಕ್ ಕೊಟ್ಟುನ ಕೊಲ್ಲಲು ಮುಂದಾದಳು
ತಕ್ಷಣಕ್ಕೆ ಕಾರ್ಯಕ್ಕೆ ಇಳಿದ ತಂಡ ಆತನ ಹುಡುಕುವ ಕೆಲಸ ಆರಂಭಿಸಿದೆ. ದೊಡ್ಡ ಸಂಖ್ಯೆಯ ಸ್ವಯಂ ಸೇವಕರು ಕುಡುಕನ ಹುಡುಕಾಟದಲ್ಲಿ ಸೇರಿಕೊಂಡಿದ್ದಾರೆ. ಹುಡುಟಾಕ ಗಂಟೆಗಳ ಕಾಲ ಸಾಗಿದೆ. ಸ್ವಯಂ ಸೇವರಲ್ಲೊಬ್ಬು ಮುತ್ಲು ಹೆಸರನ್ನು ಕೂಗಿದ್ದಾನೆ. ಆಗ ಗುಂಪಿನ ಮಧ್ಯದಿಂದ ಕುಡುಕ ನಾನು ಇಲ್ಲೇ ಇದ್ದೇನೆ ಎಂದಿದ್ದಾನೆ!
ಯಾವ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಕುಡುಕ ಹುಡುಕಾಟದ ಕಾರ್ಯಾಚರಣೆಯಲ್ಲಿ ಸೇರಿಕೊಂಡ.. ಆತನ ಗೆಳೆಯರು ಪತ್ತೆ ಮಾಡಲೇ ಇಲ್ಲವೇ ಎಂಬ ಸಂಗತಿಗಳಿಗೂ ಉತ್ತರ ಸಿಕ್ಕಿಲ್ಲ. ಈ ಹಿಂದೆ ಪ್ರವಾಸಿಗರ ತಂಡ ನಾಪತ್ತೆಯಾಗಿದ್ದಾಗಲೂ ಇಂಥದ್ದೇ ಘಟನೆ ನಡೆದಿತ್ತು. ಒಟ್ಟಿನಲ್ಲಿ ಕುಡುಕನ ತಾಪತ್ರಯಕ್ಕೆ ದೊಡ್ಡ ತಂಡದ ಶ್ರಮ ವ್ಯರ್ಥವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ