
ಕಾಬೂಲ್(ಸೆ.02): ವಿದೇಶಿ ಪಡೆಗಳು ದೇಶಬಿಟ್ಟು ಹೋದ ಬೆನ್ನಲ್ಲೇ, ಆ ದೇಶಗಳ ಸೇನಾಪಡೆಗಳು ಬಿಟ್ಟುಹೋದ ಸೇನಾ ವಾಹನ, ಶಸ್ತ್ರಾಸ್ತ್ರಗಳನ್ನು ತಾಲಿಬಾನಿ ಉಗ್ರರು ಬುಧವಾರ ಪರೇಡ್ ಮಾಡಿದ್ದಾರೆ. ಕಾಬೂಲ್‌ನಿಂದ ತೆರಳುವ ಮುನ್ನ ಅಮೆರಿಕ ತನ್ನ ವಿಮಾನ, ಕಾಪ್ಟರ್, ಯುದ್ಧ ವಾಹನಗಳನ್ನು ನಾಶ ಮಾಡಿತ್ತಾದರೂ, ದೇಶದ ಇತರೆ ಭಾಗಗಳಲ್ಲಿ ಮತ್ತು ಆಫ್ಘನ್ ಸೇನೆಗೆ ನೀಡಿದ್ದ ಯುದ್ಧ ವಾಹನಗಳು ಸುಸ್ಥಿತಿಯಲ್ಲೇ ಇದ್ದವು.
ಇದನ್ನು ಕಳೆದೊಂದು ತಿಂಗಳನಿಂದ ಹಂತಹಂತವಾಗಿ ತಮ್ಮ ವಶಕ್ಕೆ ಪಡೆಯುತ್ತಾ ಬಂದಿದ್ದ ಉಗ್ರರು ಬುಧವಾರ ಕಂದಹಾರ್‌ನಲ್ಲಿ ಅಮೆರಿಕ ಮತ್ತು ನ್ಯಾಟೋ ಪಡೆಗಳು ಬಿಟ್ಟುಹೋದ ವಾಹನಗಳನ್ನು ರಸ್ತೆಯಲ್ಲಿ ಸಾಲಾಗಿ ನಿಲ್ಲಿಸಿ, ಚಲಾಯಿಸಿ, ಆಗಸದಲ್ಲಿ ಕಾಪ್ಟರ್ ಹಾರಿಸಿ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ.
ಕಾಬೂಲ್ ಆಫ್ಘನ್ ರಾಜಧಾನಿಯಾದರೂ, ಕಂದಹಾರ್ ತಾಲಿಬಾನ್ ಜನ್ಮತಾಳಿದ ಸ್ಥಳ. ಹೀಗಾಗಿ ಆ ಪ್ರದೇಶವನ್ನು ಉಗ್ರರು ಹೆಚ್ಚು ಇಷ್ಟಪಡುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ