ಉಗ್ರರಿಗೂ ಖಾತೆ ಹಂಚಿಕೆ ಬಿಕ್ಕಟ್ಟು: ತಾಲಿಬಾನ್‌-ಹಕ್ಕಾನಿ ಬಣಗಳ ಮಧ್ಯೆ ಪೈಪೋಟಿ!

By Suvarna NewsFirst Published Sep 2, 2021, 7:46 AM IST
Highlights

* ಆಫ್ಘನ್‌ನಲ್ಲೂ ಖಾತೆ ಹಂಚಿಕೆ ಬಿಕ್ಕಟ್ಟು

* ತಾಲಿಬಾನ್‌-ಹಕ್ಕಾನಿ ಬಣಗಳ ಮಧ್ಯೆ ಪ್ರಮುಖ ಖಾತೆಗೆ ಪೈಪೋಟಿ

* ಮಿಲಿಟರಿ ಸರ್ಕಾರ ರಚನೆಗೆ ಮುಲ್ಲಾ ಯಾಕೂಬ್‌ ಬಣ ಒಲವು

* ರಾಜಕೀಯ ನಾಯಕತ್ವದ ಸರ್ಕಾರಕ್ಕೆ ಬಾರದಾರ್‌ ಗುಂಪಿನ ಬೇಡಿಕೆ

ಕಾಬೂಲ್‌(ಸೆ.02): ಅಷ್ಘಾನಿಸ್ತಾನದಲ್ಲಿ ಸರ್ಕಾರ ರಚನೆಗೆ ಹೆಣಗಾಡುತ್ತಿರುವ ತಾಲಿಬಾನಿಗಳಿಗೆ ಈಗ ಪ್ರಮುಖ ಖಾತೆಗಳನ್ನು ಯಾರಿಗೆ ನೀಡಬೇಕು ಎನ್ನುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸರ್ಕಾರ ರಚನೆ ಮತ್ತು ಪ್ರಮುಖ ಸ್ಥಾನಗಳ ವಿಚಾರದಲ್ಲಿ ತಾಲಿಬಾನ್‌ ಮತ್ತು ಹಕ್ಕಾನಿ ಬಣಗಳ ಮಧ್ಯೆ ಮನಸ್ತಾಪ ಏರ್ಪಟ್ಟಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಿಕ್ಕಟ್ಟು ಪರಿಹಾರದ ನಿಟ್ಟಿನಲ್ಲಿ ತಾಲಿಬಾನ್‌ ಮತ್ತು ಹಕ್ಕಾನಿ ಬಣಗಳ ನಾಯಕತ್ವದ ಮಧ್ಯೆ ತಾಲಿಬಾನ್‌ ಮುಖ್ಯಸ್ಥ ಹೈಬತುಲ್ಲಾ ಅಖುಂಜಾದಾ ನೇತೃತ್ವದಲ್ಲಿ ಮಾತುಕತೆ ನಡೆದಿದೆ ಎನ್ನಲಾಗಿದೆ.

ತಾಲಿಬಾನ್‌ ಉಗ್ರ ಸಂಘಟನೆಗೆ ಕಂದಹಾರ್‌ ಮೇಲೆ ಹಿಡಿತವಿದೆ. ಆದರೆ ಕಾಬೂಲ್‌ ಮೇಲೆ ಹಕ್ಕಾನಿ ನೆಟ್‌ವರ್ಕ್ ಪಾರುಪತ್ಯವಿದೆ. ತಾಲಿಬಾನ್‌ ಆಫ್ಘನ್‌ ಪರವಾಗಿದ್ದರೆ, ಹಕ್ಕಾನಿ ನೆಟ್‌ವರ್ಕ್ ಪಾಕಿಸ್ತಾನದ ಪರವಾಗಿದೆ.

ಅಲ್ಲದೆ ಅಖುಂಜಾದಾ ಅವರ ಇಬ್ಬರು ಸಹಾಯಕರ ಪೈಕಿ ಮುಲ್ಲಾ ಯಾಕೂಬ್‌ ಮಿಲಿಟರಿ ನೇತೃತ್ವದ ಸರ್ಕಾರ ರಚನೆ ಪರ ಒಲವು ವ್ಯಕ್ತಪಡಿಸಿದರೆ, ಮತ್ತೊಬ್ಬ ಸಹಾಯಕ ಮುಲ್ಲಾ ಬರಾದರ್‌ಗೆ ರಾಜಕೀಯ ನಾಯಕತ್ವದ ಸರ್ಕಾರದ ಪರ ಒಲವಿದೆ ಎನ್ನಲಾಗಿದೆ. ಒಟ್ಟಾರೆ ಆಫ್ಘನ್‌ ಸರ್ಕಾರದಲ್ಲಿ ತಮಗೇನು ಲಾಭ ಎಂಬುದರ ಬಗ್ಗೆಯೇ ತಾಲಿಬಾನ್‌ ಮತ್ತು ಹಕ್ಕಾನಿ ನೆಟ್‌ವರ್ಕ್ ಮಧ್ಯೆ ಪೈಪೋಟಿ ಆರಂಭವಾಗಿದೆ ಎಂದು ವರದಿಗಳು ತಿಳಿಸಿವೆ.

click me!