ಸ್ವಿಸ್‌ಬ್ಯಾಂಕಲ್ಲಿ ಭಾರತೀಯರ 30,500 ಕೋಟಿ ರು. ಹಣ!!

Published : Jun 17, 2022, 07:21 AM IST
ಸ್ವಿಸ್‌ಬ್ಯಾಂಕಲ್ಲಿ ಭಾರತೀಯರ 30,500 ಕೋಟಿ ರು. ಹಣ!!

ಸಾರಾಂಶ

* ಗೌಪ್ಯತೆಗೆ ಹೆಸರಾಗಿರುವ ಭಾರತದಲ್ಲಿನ ಸ್ವಿಜರ್ಲೆಂಡ್‌ ಮೂಲದ ಬ್ಯಾಂಕ್‌ಗ ಸ್ವಿಸ್‌ಬ್ಯಾಂಕಲ್ಲಿ ಭಾರತೀಯರ 30500 ಕೋಟಿ ರು. ಹಣ! * 14 ವರ್ಷಗಳಲ್ಲೇ ಗರಿಷ್ಠ ಪ್ರಮಾಣ

ನವದೆಹಲಿ(ಜೂ.17): ಗೌಪ್ಯತೆಗೆ ಹೆಸರಾಗಿರುವ ಭಾರತದಲ್ಲಿನ ಸ್ವಿಜರ್ಲೆಂಡ್‌ ಮೂಲದ ಬ್ಯಾಂಕ್‌ಗಳು ಮತ್ತು ಸ್ವಿಜರ್ಲೆಂಡಿನಲ್ಲಿರುವ ಬ್ಯಾಂಕ್‌ಗಳಲ್ಲಿ ಭಾರತೀಯರು ಮತ್ತು ಭಾರತೀಯ ಮೂಲದ ಸಂಸ್ಥೆಗಳು ಇಟ್ಟಿರುವ ಹಣದ ಮೊತ್ತ 30500 ಕೋಟಿ ರು.ಗೆ ಏರಿಕೆಯಾಗಿದೆ. ಇದು ಕಳೆದ 14 ವರ್ಷಗಳಲ್ಲೇ ಗರಿಷ್ಠ. ಎಂದು ಸ್ವಿಸ್‌ ಸೆಂಟ್ರಲ್‌ ಬ್ಯಾಂಕಿನ ವಾರ್ಷಿಕ ವರದಿಯು ತಿಳಿಸಿದೆ. 2020ರಲ್ಲಿ ಭಾರತೀಯರ ನಿಧಿಯ ಮೌಲ್ಯ 20,700 ಕೋಟಿ ರು.ಗಳಷ್ಟಿತ್ತು. 2006ರಲ್ಲಿ ಭಾರತೀಯರ ಸ್ವಿಸ್‌ ಖಾತೆಗಳಲ್ಲಿ 50,000 ಕೋಟಿ ರು.ಗಳಷ್ಟುಹಣ ಠೇವಣಿಗಳ ರೂಪದಲ್ಲಿತ್ತು. ನಂತರ ಇದರ ಪ್ರಮಾಣದಲ್ಲಿ ಸತತ ಇಳಿಕೆ ಕಂಡುಬಂದಿತ್ತು.

ಇದೇ ವೇಳೆ ಭಾರತೀಯರ ಉಳಿತಾಯ ಖಾತೆಯ ಠೇವಣಿ 4,800 ಕೋಟಿ ರು.ಗಳಿಗೆ ಏರಿಕೆಯಾಗಿದೆ. ಇದು ಕಳೆದ 7 ವರ್ಷಗಳ ಗರಿಷ್ಠ. 15.61 ಸಾವಿರ ಕೋಟಿ ರು.ಗಳಷ್ಟುಮೌಲ್ಯದ ಬಾಂಡ್‌, ಭದ್ರತೆಗಳನ್ನು ಭಾರತೀಯರ ಗ್ರಾಹಕರ ಹೆಸರಿನಲ್ಲಿ ಸ್ವಿಸ್‌ ಬ್ಯಾಂಕಿನಲ್ಲಿಡಲಾಗಿದೆ ಎಂದು ವರದಿ ತಿಳಿಸಿದೆ.

‘ಈ ಮೌಲ್ಯವನ್ನು ಭಾರತೀಯರು ಸ್ವಿಸ್‌ ಬ್ಯಾಂಕುಗಳಲ್ಲಿಟ್ಟಕಪ್ಪುಹಣದ ಪ್ರಮಾಣ ಎಂಬಂತೆ ಬಿಂಬಿಸಬಾರದು. ಜೊತೆಗೆ ಅನಿವಾಸಿ ಭಾರತೀಯರು ಹಾಗೂ ಇನ್ನೊಂದು ದೇಶದ ನಿವಾಸಿಯ ಹೆಸರಿನಲ್ಲಿ ಭಾರತೀಯರು ಠೇವಣಿ ಮಾಡಿದ ಹಣವನ್ನು ಇದು ಒಳಗೊಂಡಿಲ್ಲ. ಭಾರತದಲ್ಲಿರುವ ಸ್ವಿಸ್‌ ಬ್ಯಾಂಕ್‌ ಶಾಖೆ ಹಾಗೂ ಭಾರತೀಯ ಬ್ಯಾಂಕ್‌ ಹಾಗೂ ಸ್ವಿಸ್‌ ಬ್ಯಾಂಕ್‌ ನಡುವಿನ ವ್ಯವಹಾರ ಹೆಚ್ಚಳವಾದ ಕಾರಣದಿಂದ ಠೇವಣಿಯಲ್ಲಿ ಏರಿಕೆಯಾಗಿದೆ ಎಂದು ವರದಿ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ