9 ವರ್ಷಗಳ ಕಾಲ ರಹಸ್ಯವಾಗಿಟ್ಟಿದ್ದ ತಾಲಿಬಾನ್ ಸಂಸ್ಥಾಪಕ ಒಮರ್ ಸಮಾಧಿ ಸ್ಥಳ ಬಹಿರಂಗ

By Gowthami KFirst Published Nov 7, 2022, 9:15 PM IST
Highlights

ತಾಲಿಬಾನ್ ಸಂಸ್ಥಾಪಕ ಮುಲ್ಲಾ ಒಮರ್ ಅವರ ಸಮಾಧಿ ಸ್ಥಳವನ್ನು ತಾಲಿಬಾನ್ ಭಾನುವಾರ ಬಹಿರಂಗಪಡಿಸಿದೆ. ಮುಖ್ಯಸ್ಥ ಸತ್ತು ಬರೋಬ್ಬರಿ 9ವರ್ಷಗಳ ಕಾಲ  ಸಮಾಧಿಯನ್ನು ರಹಸ್ಯವಾಗಿಡಲಾಗಿತ್ತು.

ಅಫ್ಘಾನಿಸ್ತಾನ (ನ.7): ತಾಲಿಬಾನ್ ಸಂಸ್ಥಾಪಕ ಮುಲ್ಲಾ ಒಮರ್ ಅವರ ಸಮಾಧಿ ಸ್ಥಳವನ್ನು ತಾಲಿಬಾನ್ ಭಾನುವಾರ ಬಹಿರಂಗಪಡಿಸಿದೆ. ಮುಖ್ಯಸ್ಥ ಸತ್ತು ಬರೋಬ್ಬರಿ 9ವರ್ಷಗಳ ಕಾಲ  ಸಮಾಧಿಯನ್ನು ರಹಸ್ಯವಾಗಿಟ್ಟಿತ್ತು ತಾಲಿಬಾನ್. 2001 ರಲ್ಲಿ US ನೇತೃತ್ವದ ಆಕ್ರಮಣದಿಂದ ತಾಲಿಬಾನಿಗಳು ಅಧಿಕಾರ ಕಳೆದುಕೊಂಡ ಬಳಿಕ ಒಮರ್ ಅವರ ಆರೋಗ್ಯ ಮತ್ತು ಆತ ಎಲ್ಲಿದ್ದಾನೆ ಎಂಬ ಬಗ್ಗೆ ವದಂತಿಗಳು ಹಬ್ಬಿತ್ತು.   ಏಪ್ರಿಲ್ 2015 ರಲ್ಲಿ ಮುಲ್ಲಾ ಓಮರ್‌ 2 ವರ್ಷಗಳ ಹಿಂದೆಯೇ ಮೃತನಾಗಿದ್ದಾನೆ ಎಂದು ತಾಲಿಬಾನ್ ಜಗತ್ತಿಗೆ ತಿಳಿಸಿತ್ತು. ಆದರೆ ಆತನ ಸಮಾಧಿ ಸ್ಥಳವನ್ನು ಇಲ್ಲಿವರೆಗೂ ಗೌಪ್ಯವಾಗಿ ಇಡಲಾಗಿತ್ತು. ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಭಾನುವಾರ ಈ ಬಗ್ಗೆ  ಮಾಹಿತಿ ನೀಡಿದ್ದು, ಚಳವಳಿಯ ಹಿರಿಯ ನಾಯಕರಾದ ಝಬುಲ್ ಪ್ರಾಂತ್ಯದ ಸೂರಿ ಜಿಲ್ಲೆಯ ಒಮರ್ಜೋ ಬಳಿ  ಮುಲ್ಲಾ  ಸಮಾಧಿ ಇದೆ.  ಸುತ್ತಲೂ ಸಾಕಷ್ಟು ಶತ್ರುಗಳು ಇರುವುದರಿಂದ ಮತ್ತು ದೇಶವನ್ನು ಆಕ್ರಮಿಸಿಕೊಂಡಿದ್ದರಿಂದ, ಸಮಾಧಿಗೆ ಹಾನಿಯಾಗದಂತೆ ಅದನ್ನು ರಹಸ್ಯವಾಗಿಡಲಾಗಿತ್ತು ಜೊತೆಗೆ ಹತ್ತಿರದ ಕುಟುಂಬದ ಸದಸ್ಯರಿಗೆ ಮಾತ್ರ ಸ್ಥಳದ ಬಗ್ಗೆ ತಿಳಿದಿತ್ತು .  ಸಮಾಧಿಗೆ ಭೇಟಿ ನೀಡಲು ಜನರಿಗೆ ಯಾವುದೇ ಸಮಸ್ಯೆಗಳಿಲ್ಲ ಇಲ್ಲಿಗೆ ಭೇಟಿ ನೀಡಲು ಸಾಮಾನ್ಯರಿಗೂ ಅವಕಾಶ ನೀಡಲು ಈಗ ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ. ಅಲ್ಲಿ ನಡೆದ ಸಮಾರಂಭದಲ್ಲಿ  ವಕ್ತಾರ  ಭಾಗವಹಿಸಿದ್ದಾರೆ.

2021 ಆಗಸ್ಟ್‌ನಲ್ಲಿ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಮರಳಿತು,  ಯುಎಸ್ ನೇತೃತ್ವದ ಮಿಲಿಟರಿ 20 ವರ್ಷಗಳ ನಂತರ ತನ್ನ ಸೇನೆಯನ್ನು ಹಿಂದಕ್ಕೆ ಪಡೆಯಿತು. ಹೀಗಾಗಿ ಅಲ್ಲಿನ ಸರ್ಕಾರಿ ಸೇನೆಯನ್ನು ತಾಲಿಬಾನ್   ಸೋಲಿಸಿ ಮತ್ತೆ ಅಧಿಕಾರಕ್ಕೆ ಬಂತು. 

 

ಓಮರ್ ಅವರು ಸಾಯುವಾಗ ಆತನಿಗೆ ಸುಮಾರು 55 ವರ್ಷ ವಯಸ್ಸಾಗಿತ್ತು. ಈತ 1994 ರಲ್ಲಿ ತಾಲಿಬಾನ್ ಅನ್ನು ಸ್ಥಾಪಿಸಿದ , ಇದು ದಶಕದ ಸುದೀರ್ಘ ಸೋವಿಯತ್ ಆಕ್ರಮಣದ ನಂತರ ಸ್ಫೋಟಗೊಂಡ ಆಂತರಿಕ ಅಂತರ್ಯುದ್ಧಕ್ಕೆ ಪ್ರತಿಯಾಗಿ ಹುಟ್ಟಿಕೊಂಡಿತ್ತು.

ತಾಲಿಬಾನ್ ಉಗ್ರರು ಕಲ್ಲೆಸೆದು ಕೊಲ್ಲೋ ಮೊದಲು ಸಾವಿಗೆ ಶರಣಾದ ಮಹಿಳೆ

ಇಸ್ಲಾಮಿಕ್ ಶರಿಯಾ ಕಾನೂನಿನ ವ್ಯಾಖ್ಯಾನವನ್ನು ಕಠಿಣವಾಗಿ ಜಾರಿಗೊಳಿಸಿದ್ದಕ್ಕಾಗಿ ತಾಲಿಬಾನ್‌ ಅನ್ನು ಅಂತಾರಾಷ್ಟ್ರೀಯವಾಗಿ ಖಂಡಿಸಲಾಗಿದೆ, ಇದು ಅನೇಕ ಅಫ್ಘನ್ನರ ಕ್ರೂರ ವರ್ತನೆಗೆ ಕಾರಣವಾಗಿದೆ. 1996ರಲ್ಲಿ ತಾಲಿಬಾನ್ ಮೊದಲ ಬಾರಿಗೆ ಅಧಿಕಾರ ಹಿಡಿದಾಗ ಅಫ್ಘಾನ್‌ನಲ್ಲಿ ಷರಿಯಾ ಕಾನೂನು ಜಾರಿಗೆ ತಂದಿತ್ತು. ಷರಿಯಾ ಕಾನೂನು ಮಹಿಳೆಯರ ಮೇಲೆ ಸಾಕಷ್ಟು ನಿರ್ಬಂಧ ಹೇರಿತ್ತು. ಮಹಿಳೆಯರು ಕೆಲಸ ಮಾಡುವುದು, ಅಧ್ಯಯನ ಮಾಡುವುದಾಗಲಿ ಅಥವಾ ಒಬ್ಬರೇ ಮನೆಯಿಂದ ಹೊರ ಬರುವುದನ್ನು ಷರಿಯಾ ಕಾನೂನು ನಿರ್ಬಂಧಿಸಿತ್ತು. ಇಷ್ಟೇ ಅಲ್ಲದೆ ತಪ್ಪು ಮಾಡಿದವರಿಗೆ ಮರಣದಂಡನೆ ಮತ್ತು ಚಾಟಿ ಏಟಿನಂತಹ ಕಠಿಣ ಶಿಕ್ಷೆಗಳು ಮಾಮೂಲಿಯಾಗಿದೆ.

 ತಾಲಿಬಾನ್‌ ಆರ್ಡರ್‌, ಹೆಣ್ಣುಮಕ್ಕಳು ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವಂತಿಲ್ಲ!

ಕಳೆದ ಜುಲೈನಲ್ಲಿ ಸಿಕ್ಕಿತ್ತು ಓಮರ್ ಕಾರು: ಸುಮಾರು 20 ವರ್ಷಗಳಿಂದ ಭೂಮಿಯಲ್ಲಿ ಹೂತುಹೋಗಿದ್ದ ತಾಲಿಬಾನ್‌ ಸಂಸ್ಥಾಪಕ ಮುಲ್ಲಾ ಒಮರ್‌ನ ಕಾರನ್ನು ಪೂರ್ವ ಅಷ್ಘಾನಿಸ್ತಾನ ಭಾಗದಲ್ಲಿ ಕಳೆದ ಜುಲೈನಲ್ಲಿ ಉತ್ಖನನ ಮಾಡಲಾಗಿತ್ತು.   ಈ ಕಾರನ್ನು ಅಷ್ಘಾನಿಸ್ತಾನದ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ತಾಲಿಬಾನ್ ಪ್ರದರ್ಶನಕ್ಕಿಟ್ಟಿದೆ. ಅಲ್ಲದೇ ಇದನ್ನು ‘ಐತಿಹಾಸಿಕ ಸ್ಮಾರಕ’ ಎಂದು ಘೋಷಿಸಿದೆ.

9/11  ವಾಣಿಜ್ಯ ಕಟ್ಟಡಗಳ ಮೇಲಿನ ದಾಳಿಯ  ಹಿನ್ನೆಲೆಯಲ್ಲಿ ಅಮೆರಿಕ ಸೇನೆ ದಾಳಿ ಮಾಡಿದಾಗ ತಪ್ಪಿಸಿಕೊಳ್ಳಲು ಮಲ್ಲಾ ಒಮರ್‌ ಈ ‘ಟೊಯೋಟಾ ಕರೋಲಾ’ ಕಾರು ಬಳಸಿದ್ದ. ನಂತರ ಈ ಕಾರನ್ನು ಯಾರಾದರೂ ಬಳಸಿ ಹಾಳು ಮಾಡಬಹುದು ಎಂಬ ಆತಂಕದಿಂದ ಹಾಗೂ ಒಮರ್‌ ನೆನಪಿಗಾಗಿ 2001ರಲ್ಲೇ ಕಾರನ್ನು ಝಾಬುಲ್‌ ಪ್ರಾಂತ್ಯದ ಒಂದು ಗ್ರಾಮದ ಉದ್ಯಾನವನದಲ್ಲಿ ‘ಸುರಕ್ಷಿತವಾಗಿ’ ಹೂಳಲಾಗಿತ್ತು.

click me!