ತಾಲಿಬಾನ್ ಸರ್ಕಾರದ ನಿರ್ಧಾರಕ್ಕೆ ಇಡೀ ವಿಶ್ವವೇ ಶಾಕ್!

By Suvarna NewsFirst Published Sep 19, 2021, 11:42 AM IST
Highlights

* ತಾಲಿಬಾನ್‌ ಸರ್ಕಾರದಿಂದ ಮಹಿಳಾ ಸಚಿವಾಲಯವೇ ರದ್ದು

* ಅದರ ಬದಲು ಎಲ್ಲಾ ಪುರುಷರೇ ಇರುವ ಹೊಸ ಸಚಿವಾಲಯ ರಚನೆ

ಕಾಬೂಲ್‌(ಸೆ.19): ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಿರುವ ತಾಲಿಬಾನ್‌ ಇದೀಗ ಮಹಿಳಾ ಸಚಿವಾಲಯವನ್ನೇ ಸ್ಥಗಿತಗೊಳಿಸಿದೆ. ಅದನ್ನು ಎಲ್ಲಾ ಪುರುಷರೇ ಇರುವ ‘ದುರಭ್ಯಾಸ ಮತ್ತು ಸದ್ಗುಣ’ ಸಚಿವಾಲಯವನ್ನಾಗಿ ಬದಲಾಯಿಸಿದೆ. ಇದು 20 ವರ್ಷಗಳ ಹಿಂದಿನ ತಾಲಿಬಾನ್‌ ಆಡಳಿತವನ್ನು ಮತ್ತೊಮ್ಮೆ ನೆನಪಿಸುವಂತೆ ಮಾಡಿದೆ.

ತಾಲಿಬಾನಿಗಳು ತಮ್ಮ ಸರ್ಕಾರದಲ್ಲಿ ಮಹಿಳೆಯರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ. ಮುಚ್ಚಲಾಗಿರುವ ಸಚಿವಾಲಯದ ಬದಲು ಮಹಿಳೆಯರಿಗೆ ಬೇರೆ ಯಾವುದಾದರೂ ಸಚಿವಾಲಯ ರಚಿಸುವ ಬಗ್ಗೆ ಉದ್ದೇಶಿಸಲಾಗಿದೇಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಇದೇ ವೇಳೆ ವಿಶ್ವ ಬ್ಯಾಂಕಿನ 740 ಕೋಟಿ ರು. ಮೊತ್ತದ ಮಹಿಳಾ ಆರ್ಥಿಕ ಸಬಲೀಕರಣ ಮತ್ತು ಗ್ರಾಮೀಣ ಅಭಿವೃದ್ಧಿ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಕೂಡ ತಾಲಿಬಾನ್‌ ಸರ್ಕಾರ ಮನೆಗೆ ಕಳುಹಿಸಿದೆ. ಹೀಗಾಗಿ ಈ ನೂರಾರು ಕೋಟಿ ರು. ಮೊತ್ತದ ಈ ಯೋಜನೆಯೂ ಅಂತ್ರಂತ್ರಗೊಂಡಿದೆ.

click me!