2,000 ವರ್ಷ ಹಳೆಯ ಪುರಾತನ ಚಿನ್ನ ಪತ್ತೆ ಹಚ್ಚಿ ಸಂರಕ್ಷಣೆ: ತಾಲಿಬಾನ್‌

By Suvarna NewsFirst Published Sep 19, 2021, 8:27 AM IST
Highlights

* ಶೆರ್ಬರ್ಗಾನ್‌ ಜಿಲ್ಲೆಯಲ್ಲಿ ನಾಲ್ಕು ದಶಕಗಳ ಹಿಂದಿನ ಬ್ಯಾಕ್ಟ್ರಿಯನ್‌ ಗೋಲ್ಡ್‌

* 2000 ವರ್ಷ ಹಳೆಯ ಪುರಾತನ ಚಿನ್ನ ಪತ್ತೆ ಹಚ್ಚಿ ಸಂರಕ್ಷಣೆ: ತಾಲಿಬಾನ್‌

ಕಾಬೂಲ್‌(ಸೆ.19): ಅಫ್ಘಾನಿಸ್ತಾನದ ಉತ್ತರ ಜಾವ್ಜಾನ್‌ ಪ್ರಾಂತ್ಯದ ಶೆರ್ಬರ್ಗಾನ್‌ ಜಿಲ್ಲೆಯಲ್ಲಿ ನಾಲ್ಕು ದಶಕಗಳ ಹಿಂದೆ ಪತ್ತೆಯಾಗಿದ್ದ 2000 ವರ್ಷ ಹಳೆಯದಾದ ಬ್ಯಾಕ್ಟ್ರಿಯನ್‌ ಗೋಲ್ಡ್‌ ಅಥವಾ ನಿಧಿಯನ್ನು ಪತ್ತೆ ಹಚ್ಚಿ ಅದನ್ನು ಸಂರಕ್ಷಿಸುವುದಾಗಿ ತಾಲಿಬಾನ್‌ ಸರ್ಕಾರದ ಮಾಹಿತಿ ಮತ್ತು ಸಂಸ್ಕೃತಿ ಸಚಿವಾಲಯ ತಿಳಿಸಿದೆ.

ಇದೇ ವೇಳೆ ಬ್ಯಾಕ್ಟ್ರಿಯನ್‌ ಚಿನ್ನ ಅಥವಾ ಇತರೆ ಪುರಾತನ ವಸ್ತುಗಳನ್ನು ದೇಶದಿಂದ ಹೊರಗೆ ಸಾಗಿಸುವ ಪ್ರಯತ್ನ ಮಾಡಿದರೆ ಆಫ್ಘನ್‌ ಸರ್ಕಾರವು ಗಂಭೀರ ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಸಿದೆ. ಬ್ಯಾಕ್ಟ್ರಿಯನ್‌ ಚಿನ್ನವು ಪ್ರಪಂಚದಾದ್ಯಂತ ಇರುವ ಪ್ರಾಚೀನ ಚಿನ್ನದ ತುಣುಕುಗಳನ್ನು ಒಳಗೊಂಡಿದೆ.

ಚಿನ್ನದ ಉಂಗುರ, ನಾಣ್ಯ, ಶಸ್ತಾ್ರಸ್ತ್ರ, ಕಿವಿಯೋಲೆ, ಸರ, ಕಿರೀಟ ಸೇರಿದಂತೆ 2000 ವಿಧದ ಚಿನ್ನದ ಆಭರಣಗಳನ್ನು ಒಳಗೊಂಡಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಬ್ಯಾಕ್ಟ್ರಿಯನ್‌ ನಿಧಿಯನ್ನು ಅರಮನೆಗೆ ತಂದು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿತ್ತು. ಆದರೆ ಸರ್ಕಾರದ ಪತನದ ನಂತರ ಅದರ ಸುರಕ್ಷತೆಯ ಪ್ರಶ್ನೆ ಎದುರಾಗಿದ್ದವು.

click me!