
ಕಾಬೂಲ್(ಸೆ.06): ಅಪ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬೆನ್ನಲ್ಲೇ, ಬರ್ಬರ ಹತ್ಯೆಯ ಘಟನೆಗಳು ಬೆಳಕಿಗೆ ಬರಲಾರಂಭಿಸಿವೆ. ಅಫ್ಘಾನಿಸ್ತಾನದ ಘೋರ್ ಪ್ರಾಂತ್ಯದಲ್ಲಿ, ತಾಲಿಬಾನ್ ಉಗ್ರರು ಗರ್ಣಿಣಿ ಪೊಲೀಸ್ ಪೊಲೀಸ್ ಅಧಿಕಾರಿಯನ್ನು ಆಕೆಯ ಕುಟುಂಬಸ್ಥರ ಕಣ್ಣೆದುರೇ ರಕ್ತಸಿಕ್ತವಾಗಿ ಕೊಂದು ಹಾಕಿರುವ ಘಟನೆ ಘೋರ್ ಪ್ರಾಂತ್ಯದಲ್ಲಿ ನಡೆದಿದೆ. ಅಫ್ಘಾನಿಸ್ತಾನದ ಪತ್ರಕರ್ತ ಟ್ವೀಟ್ ಮಾಡಿ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಈ ಟ್ವೀಟ್‌ನಲ್ಲಿ ನಿಗಾರಾ 6 ತಿಂಗಳ ಗರ್ಭಿಣಿ ಎಂಬ ಮಾಹಿತಿಯನ್ನೂ ನಿಡಲಾಗಿದೆ. ಆದರೆ ತಾಲಿಬಾನ್ ಉಗ್ರರು ಯಾವುದೇ ಕರುಣೆ ತೋರಿಸದೆ, ಆಕೆಯ ಪತಿ ಮತ್ತು ಮಕ್ಕಳೆದುರೇ ಆಕೆಯನ್ನು ಕೊಂದು ಹಾಕಿದ್ದಾರೆ ಎಂದೂ ಬರೆದಿದ್ದಾರೆ.
ಬಿಬಿಸಿ ವಿಶ್ವಾಸಾರ್ಹತೆಗೆ ಕಪ್ಪುಚುಕ್ಕೆ: ಅಪ್ಘಾನಿಸ್ತಾನದಲ್ಲಿ ಪಾಕ್ ಕುತಂತ್ರ ಹೊಗಳಿದ ನಿರೂಪಕಿ!
ಹೀಗಿದ್ದರೂ ಆ ಮಹಿಳಾ ಪೊಲೀಸ್ ಅಧಿಕಾರಿಯನ್ನು ತಾಲಿಬಾನ್ ಉಗ್ರರು ಏಕೆ ಗುಂಡಿಕ್ಕಿ ಕೊಂದಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಇನ್ನು ಅತ್ತ ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ಹೇಳುವಂತೆ ತಾಲಿಬಾನಿಯರ ಭಯದಿಂದ, ಹಿಜಾಬ್ ಮತ್ತು ಬುರ್ಖಾ ಖರೀದಿಸಲು ಮಹಿಳೆಯರ ಸ್ಪರ್ಧೆ ಏರ್ಪಟ್ಟಿದೆ. ಹಿಜಾಬ್ ಮತ್ತು ಬುರ್ಖಾ ಖರೀದಿಸಲು ಜನರು ಮಾರುಕಟ್ಟೆಗೆ ಧಾವಿಸುತ್ತಿದ್ದಾರೆ. 1990 ರ ದಶಕದಲ್ಲಿ ತಾಲಿಬಾನ್ ಆಕ್ರಮಣದ ನಂತರ ಇದೇ ರೀತಿಯ ಘಟನೆ ಕಂಡುಬಂದಿತ್ತು ಎಂದು ವರದಿ ಮಾಡಿದೆ.
ಇನ್ನು ಈ ಹತ್ಯೆಯ ಘಟನೆ ಹೆರಾತ್‌ನಲ್ಲಿ ಮಹಿಳೆಯರು ಪ್ರತಿಭಟಿಸಿದ ಸಂದರ್ಭದಲ್ಲೇ ವರದಿಯಾಗಿದೆ ಎಂಬುವುದು ಉಲ್ಲೇಖನೀಯ. ಯುದ್ಧ ಪೀಡಿತ ಅಫ್ಘಾನಿಸ್ತಾನದಲ್ಲಿ ಹೊಸ ತಾಲಿಬಾನ್ ಸರ್ಕಾರದಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ನೀಡಬೇಕು ಎಂದು ಈ ಮಹಿಳೆಯರು ಒತ್ತಾಯಿಸಿದರು. ಇದರೊಂದಿಗೆ, ಈ ಮಹಿಳೆಯರು ಕೂಡ ಮಹಿಳೆಯರಿಗೆ ಪುರುಷರ ಸಮಾನ ಹಕ್ಕುಗಳ ಬೇಡಿಕೆಗಾಗಿ ತಮ್ಮ ಧ್ವನಿಯನ್ನು ಎತ್ತಿದ್ದರು. ಹೆರಾತ್‌ನಲ್ಲಿ ಮಹಿಳಾ ಪ್ರತಿಭಟನಾಕಾರರು ಬ್ಯಾನರ್‌ಗಳು ಮತ್ತು ಫಲಕಗಳನ್ನು ಹಿಡಿದಿದ್ದರು. ದೇಶದ ರಾಜಕೀಯ ವ್ಯವಸ್ಥೆಯಿಂದ ಮಹಿಳೆಯರನ್ನು ಹೊರಗಿಡುವುದನ್ನು ಅವರು ವಿರೋಧಿಸುತ್ತಿದ್ದರು.
ಶರಣಾಗುವ ಸ್ಥಿತಿ ಬಂದರೆ ತಲೆಗೆ ಗುಂಡು ಹಾರಿಸು: ಅಂಗರಕ್ಷಕನಿಗೆ ಸಲೇಹ್ ಸೂಚನೆ!
ತಾಲಿಬಾನ್ ಕಾಬೂಲ್‌ನಲ್ಲಿ ಅಧಿಕಾರ ವಹಿಸಿಕೊಂಡ ನಂತರ, ಮಾನವ ಹಕ್ಕುಗಳು ಮತ್ತು ಮಹಿಳಾ ಹಕ್ಕುಗಳ ವಿಷಯಗಳಲ್ಲಿ ಅಫ್ಘಾನಿಸ್ತಾನ ಕಳೆದ 20 ವರ್ಷಗಳಲ್ಲಿ ಕಂಡ ಪ್ರಗತಿ ಇನ್ನು ಉಳಿಯುವುದಿಲ್ಲ ಎಂದು ತಜ್ಞರು ಭಯಪಟ್ಟಿದ್ದಾರೆ. ತಾಲಿಬಾನ್ ಆಳ್ವಿಕೆಯಲ್ಲಿ ಮಹಿಳೆಯರು ಅನಿಶ್ಚಿತ ಭವಿಷ್ಯವನ್ನು ಎದುರಿಸಬೇಕಾಗುತ್ತದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ