Haqqani Network ಜಗತ್ತಿಗೆ ಮೊದಲ ಬಾರಿ ಮುಖ ತೋರಿಸಿದ ಸಿರಾಜುದ್ದೀನ್ ಹಕ್ಕಾನಿ, ಕುರಾನ್ ಓದಲು ಕಷ್ಟಪಟ್ಟ!

Suvarna News   | Asianet News
Published : Mar 06, 2022, 11:37 PM IST
Haqqani Network ಜಗತ್ತಿಗೆ ಮೊದಲ ಬಾರಿ ಮುಖ ತೋರಿಸಿದ ಸಿರಾಜುದ್ದೀನ್ ಹಕ್ಕಾನಿ, ಕುರಾನ್ ಓದಲು ಕಷ್ಟಪಟ್ಟ!

ಸಾರಾಂಶ

ಜಗತ್ತಿಗೆ ಮೊದಲ ಬಾರಿಗೆ ಮುಖ ತೋರಿಸಿದ ಸಿರಾಜುದ್ದೀನ್ ಹಕ್ಕಾನಿ ಹಕ್ಕಾನಿ ನೆಟ್ ವರ್ಕ್ ಸಂಸ್ಥಾಪಕ ಜಲಾಲುದ್ದೀನ್ ಹಕ್ಕಾನಿಯ ಪುತ್ರ ಜಗತ್ತಿನ ಮುಂದೆ ಅಮೆರಿಕಕ್ಕೆ ಅವಮಾನ ತಂದಿದ್ದ ಉಗ್ರ ನಾಯಕ

ನವದೆಹಲಿ (ಮಾ.6): ಅದೆಷ್ಟೋ ಕೋಟಿ ಮೊತ್ತದ ಹಣ, ಲೆಕ್ಕವಿಲ್ಲದಷ್ಟು ಸೈನಿಕರು, ದಶಕಗಳ ಕಾಲ ನಡೆದ ರಹಸ್ಯ ಕಾರ್ಯಾಚರಣೆಯ ಬಳಿಕವೂ ಅಮೆರಿಕ (United States) ಪಾಲಿಗೆ ಅಸಾಧ್ಯವಾಗಿ ಉಳಿದಿದ್ದ ಹಕ್ಕಾನಿ ನೆಟ್ ವರ್ಕ್ ನ (Haqqani Network) ಹಾಲಿ ಮುಖ್ಯಸ್ಥ ಸಿರಾಜುದ್ದೀನ್ ಹಕ್ಕಾನಿಯ (Sirajuddin Haqqani) ಮುಖ ಇದೇ ಮೊದಲ ಬಾರಿಗೆ ಜಗತ್ತಿಗೆ ಪರಿಚಯವಾಗಿದೆ. ವಿಶ್ವಸಂಸ್ಥೆಯ (United Nations) ಘೋಷಿತ ಭಯೋತ್ಪಾದಕ ಸಿರಾಜುದ್ದೀನ್ ಹಕ್ಕಾನಿಯ ಚಿತ್ರವನ್ನು ಪಡೆಯುವ ನಿಟ್ಟಿನಲ್ಲಿ ಅಮೆರಿಕ ಮಾಡಿದ್ದ ಎಲ್ಲಾ ಪ್ರಯತ್ನಗಳೂ ನೀರಿನಲ್ಲಿ ಹೋಮ ಮಾಡಿದಂತಾಗಿದ್ದವು. ಈತನ್ನು ಸೆರೆಹಿಡಿಯುವ, ಹತ್ಯೆ ಮಾಡುವ ಪ್ರಯತ್ನವಾಗಲಿ, ಕನಿಷ್ಠ ಚಿತ್ರವನ್ನು ಪಡೆಯಲಾಗದ ಅಮೆರಿಕದ ರಕ್ಷಣಾ ಏಜೆನ್ಸಿಗಳ ದೌರ್ಬಲ್ಯದ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆದಿದ್ದವು.

ತಾಲಿಬಾನ್‌ನ ಅತ್ಯಂತ ರಹಸ್ಯ ನಾಯಕರಲ್ಲಿ ಒಬ್ಬ. ಅಮೆರಿಕದ "ಮೋಸ್ಟ್ ವಾಂಟೆಡ್" (Most Wanted) ಪಟ್ಟಿಗಳಲ್ಲಿ ಇದ್ದ ಸಿರಾಜುದ್ದೀನ್ ಹಕ್ಕಾನಿಯ ಏಕೈಕ ಚಿತ್ರ ಹೇಗಿತ್ತೆಂದರೆ, ಆತನ ಮುಖವನ್ನು ಶಾಲ್ ನಿಂದ ಬಹುತೇಕವಾಗಿ ಮುಚ್ಚಲಾಗಿತ್ತು. ಮುಖದ ಕೆಲವೇ ಕೆಲವು ಭಾಗಗಳು ಮಾತ್ರವೇ ಕಾಣುತ್ತಿದ್ದವು. ಆದರೆ, ಹೊಸ ಅಫ್ಘಾನ್ ಪೋಲೀಸ್ ನೇಮಕಾತಿಗಳಿಗಾಗಿ ಶನಿವಾರ ನಡೆದ ಪಾಸಿಂಗ್-ಔಟ್ ಪರೇಡ್‌ನಲ್ಲಿ ಮೊದಲ ಬಾರಿಗೆ ಬಹಿರಂಗವಾಗಿ ಅತನ ಚಿತ್ರ ಸೆರೆಯಾಗಿದ್ದು, ವಿಶ್ವದ ಮಾಧ್ಯಮಗಳಲ್ಲಿ ಹರಿದಾಡಿದೆ. ಅದರೊಂದಿಗೆ ಅಮೆರಿಕದ ವೈಫಲ್ಯವೂ ಜಗತ್ತಿಗೆ ಬಟಾಬಯಲಾಗಿದೆ.

ಕಳೆದ ಆಗಸ್ಟ್ ನಲ್ಲಿ ತಾಲಿಬಾನ್ (Taliban) ಇಸ್ಲಾಮಿಸ್ಟ್ ಗಳು ಅಧಿಕಾರವನ್ನು ವಶಪಡಿಸಿಕೊಂಡ ಬಳಿಕ, ಉಗ್ರಕೃತ್ಯಗಳಲ್ಲಿ ನೇರವಾಗಿ ಭಾಗಿಯಾಗುವ ಹಕ್ಕಾನಿ ನೆಟ್‌ವರ್ಕ್‌ನ ಮುಖ್ಯಸ್ಥನಾಗಿರುವ ಆಂತರಿಕ ಸಚಿವ ( Interior Minister)ಸಿರಾಜುದ್ದೀನ್ ಹಕ್ಕಾನಿ  ಚಿತ್ರವನ್ನು ತೆಗೆದುಕೊಳ್ಳಲಾಗಿತ್ತಾದರೂ ಅದು ಹೆಚ್ಚಾಗಿ ಗುರುತು ಹಿಡಿಯುವಂತಿರಲಿಲ್ಲ.  "ನಿಮ್ಮ ತೃಪ್ತಿಗಾಗಿ ಮತ್ತು ನಿಮ್ಮ ನಂಬಿಕೆಯನ್ನು ಬೆಳೆಸುವುದಕ್ಕಾಗಿ... ನಾನು ನಿಮ್ಮೊಂದಿಗೆ ಸಾರ್ವಜನಿಕ ಸಭೆಯಲ್ಲಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ" ಎಂದು ಆತ ಪರೇಡ್‌ನಲ್ಲಿ ಭಾಷಣ ಮಾಡಿದ್ದಾನೆ. ಭಾಷಣದ ವೇಳೆ ಕುರಾನ್ ಅನ್ನು ಓದಲೂ ಕೂಡ ಸಿರಾಜುದ್ದೀನ್ ಹಕ್ಕಾನಿ ಕಷ್ಟಪಟ್ಟಿದ್ದಾನೆ.

ತಾಲಿಬಾನ್ ಅಧಿಕಾರಕ್ಕೆ ಮರಳುವ ಮೊದಲು, ಹಕ್ಕಾನಿ ನಾಯಕ ಹಿಬತುಲ್ಲಾ ಅಖುಂದ್ಜಾದಾ ಅವರ ಮೂವರು ನಿಯೋಗಿಗಳಲ್ಲಿ ಅತ್ಯಂತ ಹಿರಿಯರಾಗಿ ಸಿರಾಜುದ್ದೀನ್ ಹಕ್ಕಾನಿ ಕಾರ್ಯನಿರ್ವಹಿಸಿದ್ದ. ಅಖುಂದ್‌ಜಾದಾ ಸ್ವತಃ ಸಾರ್ವಜನಿಕವಾಗಿ ವರ್ಷಗಳವರೆಗೆ ಕಾಣಿಸಿಕೊಂಡಿಲ್ಲ, ಅನೇಕ ಅಫ್ಘನ್ ವಿಶ್ಲೇಷಕರ ಪ್ರಕಾರ, ಈತ ಜೀವಂತವಾಗಿರುವುದೇ ಅನುಮಾನ ಎಂದ್ದಾರೆ.
ತಾಲಿಬಾನ್‌ ಗ್ಯಾಂಗ್‌ನಲ್ಲೇ ವಾರ್; ಡೆಪ್ಯುಟಿ ಮುಲ್ಲಾ ಬರಾದರ್ ನಾಪತ್ತೆ ಹಿಂದಿದೆಯಾ ಕರಾಮತ್ತು.?
ತಾಲಿಬಾನ್ ಕಳೆದ 20 ವರ್ಷಗಳಲ್ಲಿ ನಡೆಸಿರುವ ವಿಶ್ವದ ಅತ್ಯಂತ ಕೆಲ ಘೋರ ದುರಂತಗಳಿಗೆ ತಾಲಿಬಾನ್ ನ ಉಪವಿಭಾಗವಾಗಿದ್ದ ಹಕ್ಕಾನಿ ನೆಟ್ ವರ್ಕ್ ನೇರವಾಗಿ ಕಾರಣವಾಗಿತ್ತು. ಈತನ ಬಂಧನಕ್ಕೆ ಕಾರಣವಾಗುವ ಮಾಹಿತಿಗಾಗಿ ಯುನೈಟೆಡ್ ಸ್ಟೇಟ್ಸ್ 10 ಮಿಲಿಯನ್ ಡಾಲರ್ ವರೆಗೆ ಬಹುಮಾನವನ್ನು ಘೋಷಣೆ ಮಾಡಿತ್ತಲ್ಲದೆ, ವಿಶ್ವದಲ್ಲಿನ ಸರಣಿ ಭಯೋತ್ಪಾದಕ ದಾಳಿಗಳಿಗೆ ಈತನೇ ಹೊಣೆಗಾರ ಎಂದು ಹೇಳಿತ್ತು. ಹಕ್ಕಾನಿಯ ಚಿತ್ರಗಳನ್ನು ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ತಾಲಿಬಾನ್ ಅಧಿಕಾರಿಗಳು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ. ಈ ಹಿಂದ ಸ್ವತಃ ತಾಲಿಬಾಲ್ ಇವರ ಫೋಟೋಗಳನ್ನು ಹಂಚಿತ್ತಾದರೂ, ಮುಖವನ್ನು ಬ್ಲರ್ ಮಾಡಿತ್ತು.

ಹಕ್ಕಾನಿ ಬಣದ ಜತೆ ಘರ್ಷ​ಣೆ: ಆಫ್ಘನ್‌ ಭಾವಿ ಅಧ್ಯಕ್ಷ ಬರಾದರ್‌ಗೆ ಗಾಯ!
ಶನಿವಾರದ ಪೊಲೀಸ್ ಪರೇಡ್‌ನಲ್ಲಿ, ಹಕ್ಕಾನಿ ಅನೇಕ ಹಿರಿಯ ತಾಲಿಬಾನ್ ಅಧಿಕಾರಿಗಳಂತೆ ವೇಷಭೂಷಣ ಮಾಡಿಕೊಂಡಿದ್ದರು. ಉದ್ದನೆಯ ಗಡ್ಡ, ಕಪ್ಪು ಪೇಟ ಮತ್ತು ಬಿಳಿ ಶಾಲು ಧರಿಸಿದ್ದರು. ತನ್ನ ಮುಖವನ್ನು ತೋರಿದ ಬಳಿಕ ಹೇಳಿದ ಆತ, "ನಮ್ಮ ನಾಯಕತ್ವದೊಂದಿಗೆ ನಾವು ಎಷ್ಟು ಮೌಲ್ಯವನ್ನು ಹೊಂದಿದ್ದೇವೆ ಎಂಬುದನ್ನು ನೀವು ಇದರಿಂದ ತಿಳಿಯಬಹುದು" ಎಂದಿದ್ದಾನೆ. ಅಮೆರಿಕದಿಂದ ಹಲವಾರು ಬಾರು ಡ್ರೋನ್ ದಾಳಿಗೆ ತುತ್ತಾಗಿದ್ದ ಸಿರಾಜುದ್ದೀನ್ ಹಕ್ಕಾನಿ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಹಕ್ಕಾನಿ ನೆಟ್‌ವರ್ಕ್‌ನ ಹೃದಯಭಾಗವಾಗಿರುವ ಕಲ್ಲುಗಳ ನಡುವಿನ ಒರಟಾದ ಭೂಪ್ರದೇಶದಲ್ಲಿ ವಾಸವಿದ್ದರು ಎಂದು ಹೇಳಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!