ಕಾಬೂಲ್(ಅ.05): ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಮುಂದುವರಿದಿದೆ. ಒಂದೆಡೆ ತಾಲಿಬಾನ್ ಉಗ್ರರು ದಾಳಿ ಹಾಗೂ ಕಟ್ಟು ನಿಟ್ಟಾದ ಷರಿಯಾ ನಿಯಮ, ಮತ್ತೊಂದೊಡೆ ಬಾಂಂಬ್ ಸ್ಫೋಟಗಳಿಂದ ಜನರು ಅಕ್ಷರಶಃ ನರಕದಲ್ಲಿ ದಿನದೂಡುತ್ತಿದ್ದಾರೆ. ತಾವು ಬದಲಾಗಿದ್ದೇವೆ, ಇತರ ಧರ್ಮ ಅದರಲ್ಲೂ ಸಿಖ್‌ರಿಗೆ, ಗುರುದ್ವಾರಕ್ಕೆ ಯಾವುದೇ ಹಾನಿ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದ ತಾಲಿಬಾನ್ ಉಗ್ರರು ಇದೀಗ ಉಲ್ಟಾ ಹೊಡೆದಿದ್ದಾರೆ
ಚೀನಾ ಗಡಿಯಲ್ಲಿ ಆತ್ಮಾಹುತಿ ದಾಳಿ: ಮಹಾನರಬಲಿಗೆ ತಾಲೀಬಾನ್ ಸಿದ್ಧತೆ
undefined
ಕಾಬೂಲ್‌ನ ಗುರುದ್ವಾರ ಕರ್ತೆ ಪರ್ವಾನ್ ಮೇಲೆ ಶಸ್ತ್ರಸಜ್ಜಿತ ತಾಲಿಬಾನ್ ಉಗ್ರರು ದಾಳಿ ಮಾಡಿದ್ದಾರೆ. ಈ ವೇಳೆ ಗುರುದ್ವಾರದ ಶಿಖರ್ ಸೇರಿದಂತೆ ಹಲವು ಭಾಗಗಳನ್ನು ಉಗ್ರರು ಧ್ವಂಸಗೊಳಿಸಿದ್ದಾರೆ. ಈ ದಾಳಿಯಲ್ಲಿ ಗುರುದ್ವಾರದಲ್ಲಿದ್ದ ಸಿಖ್‌ರನ್ನು ತಾಲಿಬಾನ್ ಉಗ್ರರು ವಶಕ್ಕೆ ಪಡೆದಿದ್ದಾರೆ.
ತಾಲಿಬಾನ್ ಉಗ್ರರು ಗುರುದ್ವಾರದ ಮೇಲೆ ದಾಳಿ ಮಾಡಿರುವ ಕುರಿತು ನಮಗೆ ಎಚ್ಚರಿಕೆ ಸಂದೇಶ ಬಂದಿದೆ. ಈ ದಾಳಿಯಲ್ಲಿ ಗುರುದ್ವಾರಕ್ಕೆ ಹಾನಿಯಾಗಿದೆ. ಹಲವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಸಿಖ್ ಸಮುದಾಯದ ಇಂಡಿಯನ್ ವರ್ಲ್ಡ್ ಫೋರಮ್ ಅಧ್ಯಕ್ಷ ಪುನೀತ್ ಸಿಂಗ್ ಚಂದೋಕ್ ಹೇಳಿದ್ದಾರೆ.
ಕಾಬೂಲ್ ಮಸೀದಿ ಬಳಿ ಬಾಂಬ್ ಸ್ಫೋಟ, ಉಗ್ರರ ಆಡಳಿತದಲ್ಲಿ ಇನ್ನೇನು ನಿರೀಕ್ಷಿಸಲು ಸಾಧ್ಯ?
ಸದ್ಯ ಗುರುದ್ವಾರ ಕರ್ತೆ ಪರ್ವಾನ್ ತಾಲಿಬಾನ್ ಉಗ್ರರ ವಶದಲ್ಲಿದೆ. ಪವಿತ್ರ ಗುರುದ್ವಾರದಲ್ಲಿ ತಾಲಿಬಾನ್ ಉಗ್ರರು ಠಿಕಾಣಿ ಹೂಡಿದ್ದಾರೆ. ಇಲ್ಲಿನ ಸಿಸಿಟಿವಿಗಳನ್ನು ಧ್ವಂಸಗೊಳಿಸಿದ್ದಾರೆ. ಗುರುದ್ವಾರದಲ್ಲಿರುವ ಪವಿತ್ರ ನಿಶಾನ್ ಸಾಹಿಬಿ ಕಿತ್ತೆಸೆದಿದ್ದಾರೆ.
ಸಿಖ್ ಸಮುದಾಯಕ್ಕೆ ಆಫ್ಘಾನಿಸ್ತಾನದ ಪಕ್ತಿಯಾ ಪ್ರಾಂತ್ಯದಲ್ಲಿರುವ ಈ ಗುರುದ್ವಾರ ಪವಿತ್ರ ಕ್ಷೇತ್ರವಾಗಿದೆ. ಒಂದು ಬಾರಿ ಗುರುನಾನಕ್ ಇಲ್ಲಿಗೆ ಭೇಟಿ ನೀಡಿದ್ದಾರೆ ಎಂಬುದು ಇತಿಹಾಸ. ತಾಲಿಬಾನ್ ಉಗ್ರರು ಇದೀಗ ಸಿಖ್ ಸಮುದಾಯ ಹಾಗೂ ಗುರುದ್ವಾರಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ಇದರಿಂದ ಆಫ್ಘಾನಿಸ್ತಾನದಲ್ಲಿ ಸಿಖ್ ಸಮುದಾಯ ಹೆಚ್ಚು ಅಪಾಯದಲ್ಲಿದೆ ಎಂದು ಪುನೀತ್ ಸಿಂಗ್ ಚಂದೋಕ್ ಹೇಳಿದ್ದಾರೆ.
ಆಫ್ಘಾನಿಸ್ತಾನವನ್ನು ತಾಲಿಬಾನ್ ಕೈವಶ ಮಾಡಿದ ಬಳಿಕ ಭಾರತ ರಾಯಭಾರ ಅಧಿಕಾರಿ ದೋಹದಲ್ಲಿ ತಾಲಿಬಾನ್ ಉಗ್ರರ ಪ್ರತಿನಿದಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಮಾತುಕತೆಯಲ್ಲಿ ಆಫ್ಘಾನಿಸ್ತಾನ ನೆಲವನ್ನು ಭಾರತ ವಿರೋಧಿ ಚಟುವಚಿಕೆಗೆ ಬಳಸಿಕೊಳ್ಳಬಾರದು. ಭಾರತೀಯರು, ಭಾರತದ ಸಮದಾಯದ ಜನರಿಗೆ ರಕ್ಷಣೆ ನೀಡಬೇಕು ಎಂದು ಸೂಚಿಸಿದ್ದರು. ಭಾರತದ ಬೇಡಿಕೆಗೆ ತಾಲಿಬಾನ್ ಸಮ್ಮತಿಸಿತ್ತು.
ಇದೀಗ ತಾಲಿಬಾನ್ ತಾವೇ ಭರವಸೆ ನೀಡಿದ ಮಾತನ್ನೇ ಉಲ್ಲಂಘಿಸಿ ಸಿಖ್ ಸಮುದಾಯದ ಮೇಲೆ , ಗುರುದ್ವಾರದ ಮೇಲೆ ದಾಳಿ ಮಾಡಿದ್ದಾರೆ.