ಮಹಿಳಾ ಸಚಿವಾಲಯಕ್ಕೆ ಮಹಿಳೆಯರಿಗೇ ನೋ ಎಂಟ್ರಿ..! ಇದು ತಾಲೀಬಾನ್ ಆಡಳಿತ

By Suvarna NewsFirst Published Sep 17, 2021, 12:58 PM IST
Highlights
  • ತಾಲೀಬಾನ್ ಆಡಳಿತ ಹೇಗಿದೆ ಅಂತೀರಾ ?
  • ಮಹಿಳಾ ಸಚಿವಾಲಯಕ್ಕೆ ಮಹಿಳೆಯರಿಗೇ ಎಂಟ್ರಿ ಇಲ್ಲ
  • ಹೀಗಿದೆ ನೋಡಿ ತಾಲೀಬಾನ್ ಸರ್ಕಾರದ ಆಡಳಿತ

ಕಾಬುಲ್(ಸೆ.17): ತಾಲೀಬಾನಿಗಳು ಸರ್ಕಾರ ರಚಿಸಿ ಆಡಳಿತ ಶುರು ಮಾಡಿದ್ದೇನೋ ಆಯಿತು. ಆದರೆ ಅಸಲಿಗೆ ಅಲ್ಲಿ ಆಡಳಿತ ಹೇಗಿದೆ ? ನಿಜಕ್ಕೂ ಸರ್ಕಾರ ರಚಿಸಿ ಜನಪರ ಆಡಳಿತ ನೀಡುತ್ತಿದ್ದೆಯಾ ತಾಲೀಬಾನ್ ? ಅಥವಾ ಸರ್ಕಾರ ರಚಿಸಿ ಹಿಂದಿನಂತೆಯೇ ಗನ್ ಹಿಡಿದು ಸುತ್ತುತ್ತಿದ್ದಾರಾ ತಾಲೀಬಾನಿಗಳು ?

ಈ ರೀತಿ ಅಫ್ಘಾನಿಸ್ತಾನದ ಆಡಳಿತದ ಬಗ್ಗೆ ಎಲ್ಲರಿಗೂ ಭಾರೀ ಕುತೂಹಲ ಇದೆ. ಏನು ಹೊಡೆದಾಡಿಕೊಂಡ್ರೂ ಕನಿಷ್ಠ ತಮ್ಮ ದೇಶ ತಮ್ಮ ಆಡಳಿತವನ್ನಾದ್ರೂ ಸುಸೂತ್ರವಾಗಿ ಮಾಡ್ತಿದ್ದಾರಾ ಎಂದು ಕೇಳಿದ್ರೆ ಖಂಡಿತಾ ಇಲ್ಲ. ಹಿಂದಿನದ್ದೇ ವ್ಯವಸ್ಥೆ, ಚಿಕ್ಕಪುಟ್ಟ ಬದಲಾವಣೆ ಅಷ್ಟೆ.

ಅನೈತಿಕ ಸಂಬಂಧ, ಅಕ್ರಮ ಸಂಭೋಗಕ್ಕೆ ತಾಲೀಬಾನ್ ಕಠಿಣ ಶಿಕ್ಷೆ

ತಾಲೀಬಾನಿಗಳ ಆಡಳಿತಕ್ಕೆ ಸಿಂಪಲ್ ಆಗಿರೋ ಒಂದು ಉದಾಹರಣೆ ಈಗ ಸುದ್ದಿಯಾಗಿದೆ. ಅಫ್ಘಾನಿಸ್ತಾನದ ಮಹಿಳಾ ಸಚಿವಾಲಯದಲ್ಲಿ ಮಹಿಳೆಯರಿಗೆ ಎಂಟ್ರಿಗೆ ಅವಕಾಶವಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆಂದೇ ರಚಿಸಲಾಗೋ ಇಲಾಖೆಯಲ್ಲಿ ಮಹಿಳೆಯರಿಗೇ ಅವಕಾಶ ಇಲ್ಲ ಅಂದ್ರೆ ಹೇಗಿರಬಹುದು ಹೇಳಿ ? ಇದು ತಾಲೀಬಾನ್ ಆಡಳಿತ.

ತಾಲಿಬಾನ್ ಮಹಿಳಾ ಉದ್ಯೋಗಿಗಳನ್ನು ಕಾಬೂಲ್‌ನ ಮಹಿಳಾ ವ್ಯವಹಾರಗಳ ಸಚಿವಾಲಯಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿದೆ. ಪುರುಷರಿಗೆ ಮಾತ್ರ ಕಟ್ಟಡದೊಳಗೆ ಪ್ರವೇಶ ಅವಕಾಶ ನೀಡಿದೆ ಎಂದು ಸಚಿವಾಲಯದ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ.
ಕಟ್ಟಡವನ್ನು ಪ್ರವೇಶಿಸಲು ನಾಲ್ಕು ಮಹಿಳೆಯರಿಗೆ ಅವಕಾಶವಿಲ್ಲ ಎನ್ನಲಾಗಿದೆ.

20 ವರ್ಷಗಳ ನಂತರ ತಾಲಿಬಾನ್ ಮತ್ತೊಮ್ಮೆ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದಂತೆ, ಭಯೋತ್ಪಾದಕ ಗುಂಪಿನ ಆಡಳಿತದ ಅಡಿಯಲ್ಲಿ ಅಫ್ಘಾನ್ ಮಹಿಳೆಯರು ಅತ್ಯಂತ ಕೆಟ್ಟ ದಿನಗಳನ್ನು ಕಳೆಯುತ್ತಿದ್ದಾರೆ. ತಾಲಿಬಾನ್ ಅಡಿಯಲ್ಲಿ, ಇಸ್ಲಾಮಿಕ್ ಕಾನೂನಿನ ಕಠಿಣ ವ್ಯಾಖ್ಯಾನಕ್ಕೆ ಅನುಸಾರವಾಗಿ ಮಹಿಳೆಯರು ಹೆಚ್ಚಾಗಿ ತಮ್ಮ ಮನೆಗಳಿಗೆ ಸೀಮಿತರಾಗಿದ್ದರು. ಯುಎಸ್ ಅಫ್ಘಾನಿಸ್ತಾನದಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಂಡ ಬೆನ್ನಲ್ಲೇ ಅಫ್ಘಾನ್ ತಾಲೀಬಾನ್ ತೆಕ್ಕೆಗೆ ಸೇರಿದೆ.

click me!