ತಾಲಿಬಾನ್ ಫೈಟರ್‌ಗಳಿಗಾಗಿ 15 ವರ್ಷ ಮೇಲ್ಪಟ್ಟ ಹೆಣ್ಮಕ್ಕಳ ಲಿಸ್ಟ್ ಮಾಡಲು ಸೂಚನೆ..!

By Suvarna NewsFirst Published Jul 16, 2021, 4:53 PM IST
Highlights
  • ತಾಲೀಬಾನ್ ಫೈಟರ್ಸ್‌ಗೆ ಹೆಣ್ಮಕ್ಕಳನ್ನು ನೀಡಲು ತಯಾರಿ
  • 15 ವರ್ಷ ಮೇಲ್ಪಟ್ಟ ಹಾಗೂ 45ಕ್ಕಿಂತ ಕೆಳಗಿನ ವಿಧವೆಯರ ಲಿಸ್ಟ್ ಕೊಡಲು ಸೂಚನೆ

ತಾಲೀಬಾನ್ ಫೈಟರ್ಸ್ ಮತ್ತು ಅಫ್ಘಾನಿಸ್ತಾನದ ಸೈನಿಕರ ನಡುವಿನ ಯುದ್ಧದಲ್ಲಿ ಈಗ ಹೆಣ್ಮಕ್ಕಳು ಬಡವಾಗಲಿದ್ದಾರೆ. ಫೈಟರ್‌ಗಳಿಗೆ ಹೆಣ್ಣನ್ನು ನೀಡುವ ನೀಡುವ ಕೆಲಸಕ್ಕೆ ಸಿದ್ಧತೆ ನಡೆದಿದೆ.

ಯುದ್ಧ ಪೀಡಿತ ದೇಶದ ಹೆಚ್ಚಿನ ಭಾಗದ ಮೇಲೆ ಹಿಡಿತ ಸಾಧಿಸಲು ಅಫ್ಘಾನಿಸ್ತಾನ ಪಡೆಗಳೊಂದಿಗೆ ಹೋರಾಡುತ್ತಿರುವ ತಾಲಿಬಾನ್, ಸ್ಥಳೀಯ ಧಾರ್ಮಿಕ ಮುಖಂಡರಿಗೆ 15 ವರ್ಷಕ್ಕಿಂತ ಮೇಲ್ಪಟ್ಟ ಬಾಲಕಿಯರ ಪಟ್ಟಿಯನ್ನು ಮತ್ತು 45 ವರ್ಷದೊಳಗಿನ ವಿಧವೆಯರ ಲಿಸ್ಟ್ ನೀಡುವಂತೆ ಆದೇಶ ಹೊರಡಿಸಿದೆ.

ತಾಲಿಬಾನಿಯರ ಅಟ್ಟಹಾಸ: ಭಾರತೀಯ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಬಲಿ!

ತಾಲಿಬಾನ್ ತಮ್ಮ ಹೋರಾಟಗಾರರನ್ನು ಮದುವೆಯ ನಂತರ ಪಾಕಿಸ್ತಾನದ ವಾಜಿರಿಸ್ತಾನಕ್ಕೆ ಕರೆದೊಯ್ಯುವುದಾಗಿ ಭರವಸೆ ನೀಡಿದ್ದು, ಅಲ್ಲಿ ಅವರನ್ನು ಇಸ್ಲಾಂಗೆ ಮತಾಂತರಗೊಳಿಸಿ ಪುನರ್ಜೋಡಿಸಲಾಗುವುದು ಎಂದು ಹೇಳಿದೆ. ವಶಪಡಿಸಿಕೊಂಡ ಪ್ರದೇಶಗಳ ಎಲ್ಲಾ ಇಮಾಮ್‌ಗಳು ಮತ್ತು ಮುಲ್ಲಾಗಳು ತಾಲಿಬಾನಿಗೆ 15 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯರ ಮತ್ತು 45 ವರ್ಷದೊಳಗಿನ ವಿಧವೆಯರನ್ನು ತಾಲಿಬಾನ್ ಹೋರಾಟಗಾರರನ್ನು ಮದುವೆಯಾಗಲು ಒದಗಿಸಬೇಕು ಎಂದು ತಾಲಿಬಾನ್‌ನ ಸಾಂಸ್ಕೃತಿಕ ಆಯೋಗದ ಹೆಸರಿನಲ್ಲಿ ಹೊರಡಿಸಲಾದ ಪತ್ರದಲ್ಲಿ ತಿಳಿಸಲಾಗಿದೆ.

ಯುಎಸ್ ಮತ್ತು ನ್ಯಾಟೋ ಪಡೆಗಳು ಸುಮಾರು 20 ವರ್ಷಗಳ ನಂತರ ಅಫ್ಘಾನಿಸ್ತಾನದಿಂದ ಹೊರಗೆ ಹೋಗಿದ್ದು ತಾಲಿಬಾನ್ ಇರಾನ್, ಪಾಕಿಸ್ತಾನ, ಉಜ್ಬೇಕಿಸ್ತಾನ್ ಮತ್ತು ತಜಿಕಿಸ್ತಾನ್ ಜೊತೆಗಿನ ಹಲವು ಪ್ರಮುಖ ಜಿಲ್ಲೆಗಳು ಮತ್ತು ಗಡಿ ಪೋಸ್ಟ್‌ಗಳ ಮೇಲೆ ಹಿಡಿತ ಸಾಧಿಸಿರುವುದರಿಂದ ಇತ್ತೀಚಿನ ಆದೇಶಗಳು ಬಂದಿವೆ.

ಈ ಹಿಂದೆ ತಾಲಿಬಾನ್ ತಮ್ಮ ನಿಯಮಗಳನ್ನು ಹೇರಲು ಅಫ್ಘಾನಿಸ್ತಾನದ ಈಶಾನ್ಯ ಪ್ರಾಂತ್ಯದ ತಖಾರ್‌ನಲ್ಲಿರುವ ಮಹಿಳೆಯರನ್ನು ತಮ್ಮ ಮನೆಗಳಿಂದ ಮಾತ್ರ ಹೊರಗೆ ಹೋಗದಂತೆ ಕೇಳಿತ್ತು. ಪುರುಷರು ಗಡ್ಡವನ್ನು ಬೆಳೆಸಲು ಕೇಳಿಕೊಂಡಿದ್ದರು.

ಶರಣಾದ 22 ಆಫ್ಘಾನಿಸ್ತಾನ ಯೋಧರ ಮೇಲೆ ಗುಂಡಿನ ಸುರಿಮಳೆಗೈದ ತಾಲಿಬಾನ್ ಉಗ್ರರು!

2001 ರಲ್ಲಿ ಯುಎಸ್ ನೇತೃತ್ವದ ಆಕ್ರಮಣದ ನಂತರ ತಾಲಿಬಾನ್ ಆಳ್ವಿಕೆಯಲ್ಲಿ, ಮಹಿಳೆಯರಿಗೆ ಶಾಲೆಗೆ ಹೋಗುವುದು, ಮನೆಯ ಹೊರಗೆ ಕೆಲಸ ಮಾಡುವುದು ಅಥವಾ ಅಫ್ಘಾನಿಸ್ತಾನದಲ್ಲಿ ಒಂಟಿಯಾಗಿ ಪುರುಷ ಜೊತೆಗಿಲ್ಲದೆ ಮನೆ ಬಿಟ್ಟು ಹೋಗುವುದನ್ನು ನಿರ್ಬಂಧಿಸಲಾಯಿತು. ಉಲ್ಲಂಘಿಸುವವರನ್ನು ಸಾರ್ವಜನಿಕವಾಗಿ ಅವಮಾನಿಸಲಾಗಿತ್ತು. ತಾಲಿಬಾನ್‌ನ ಧಾರ್ಮಿಕ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದರು.

ಈಗ ಅಫ್ಘಾನಿಸ್ತಾನದ ಹಿರಿಯರು ತಾಲಿಬಾನ್ ತಮ್ಮ ಹೆಣ್ಣುಮಕ್ಕಳನ್ನು ಕರೆದುಕೊಂಡು ಹೋಗಿ ಬಲವಂತವಾಗಿ ಮದುವೆಯಾಗಿ ಗುಲಾಮರನ್ನಾಗಿ ಮಾಡುತ್ತಾರೆ ಎಂದು ಹೇಳುತ್ತಿದ್ದಾರೆ. "ತಾಲಿಬಾನ್ ಅಧಿಕಾರ ವಹಿಸಿಕೊಂಡಾಗಿನಿಂದ, ನಾವು ಖಿನ್ನತೆಗೆ ಒಳಗಾಗಿದ್ದೇವೆ. ಮನೆಯಲ್ಲಿ, ನಾವು ಜೋರಾಗಿ ಮಾತನಾಡಲು ಸಾಧ್ಯವಿಲ್ಲ, ಸಂಗೀತವನ್ನು ಕೇಳಲು ಸಾಧ್ಯವಿಲ್ಲ. ಮಹಿಳೆಯರು ಶುಕ್ರವಾರ ಮಾರುಕಟ್ಟೆಗೆ ಹೋಗುವಂತಿಲ್ಲ ಎನ್ನಲಾಗಿದೆ. ತಾಲಿಬಾನ್ ಉಪ -ಕಮಾಂಡರ್ ಜನರಲ್ಲಿ ನೀವು 18 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯರನ್ನು ಇಟ್ಟುಕೊಳ್ಳಬಾರದು. ಅವರು ಮದುವೆಯಾಗಬೇಕು ಎಂದು ಅಫಘಾನ್ ಹಿರಿಯ ಹಾಜಿ ರೋಜಿ ಬೇಗ್ ಹೇಳಿದ್ದಾರೆ.

click me!