'ಜ್ಞಾನ ಪ್ರಸಾರಕ್ಕೆಂದು' ಪೋರ್ನ್ ಹಬ್‌ಗೆ  ಇನ್ನೂರು ವಿಡಿಯೋ ಅಪ್ ಮಾಡಿದ ಗಣಿತ ಶಿಕ್ಷಕ!

By Suvarna News  |  First Published Oct 25, 2021, 12:16 AM IST

* ಪೋರ್ನ್ ಹಬ್ ಗೆ ಗಣಿತ ಶಿಕ್ಷಣದ ವಿಡಿಯೋ ಅಪ್ ಲೋಡ್ ಮಾಡಿದ ಶಿಕ್ಷಕ
* ಅತಿ  ಜನಪ್ರಿಯ ತಾನವಾಗಿರುವುದರಿಂದ ಅಪ್ ಮಾಡಿದ್ದೇನೆ
* ತೈವಾನ್ ಶಿಕ್ಷಕನ ವಿಶಿಷ್ಟ ಆಲೋಚನೆ!


ಥೈವಾನ್(ಅ. 25) ಕೊರೋನಾ  (Coronavirus) ಕಾರಣಕ್ಕೆ ಆಮೆ ಗತಿಗೆ ಇಳಿದಿದ್ದ ಶಿಕ್ಷಣ (Education) ವ್ಯವಸ್ಥೆ ನಿಧಾನವಾಗಿ ಟ್ರ್ಯಾಕ್ ಗೆ ಬರುತ್ತಿದೆ. ಆನ್ ಲೈನ್ ಶಿಕ್ಷಣ ಇಂದು ಅವಿಭಾಜ್ಯ ಅಂಗವೇ ಆಗಿಹೋಗಿದೆ. ನಮ್ಮ ದೇಶ.. ಹೊರ ದೇಶ ಎಂಬ ತಾರತಮ್ಯ ಇಲ್ಲಿಲ್ಲ. 

ಜೂಮ್ (Zoom) ಸೇರಿದಂದೆ ವಿವಿಧ ಅಪ್ಲಿಕೇಶನ್ ಗಳ ಮೂಲಕ ಆನ್ ಲೈನ್ ಲರ್ನಿಂಗ್ ಸರಳ ಮತ್ತು ಸಂದರ್ಭ ಉಚಿತವಾಗಿಯೇ ಇದೆ.  ಅತ್ಯುತ್ತಮವಾಗಿ  ಕಲಿಸುವ ಶಿಕ್ಷಕರ ಆನ್ ಲೈನ್ ಕ್ಲಾಸಿಗೆ ಮಕ್ಕಳು ದೊಡ್ಡ ಸಂಖ್ಯೆಯಲ್ಲಿಯೇ ಹಾಜರಿ  ಹಾಕುತ್ತಾರೆ. 

Tap to resize

Latest Videos

ಆದರೆ ತೈವಾನ್ ನ ಗಣಿತ (mathematics) ಶಿಕ್ಷಕನೊಬ್ಬ (Teacher) ಮಾಡಿದ ಕೆಲಸ ವೈರಲ್ ಆಗಿದೆ. ಅಶ್ಲೀಲ ವೆಬ್ ತಾಣ ಪೋರ್ನ್ ಹಬ್ (Porn Hub) ನಲ್ಲಿ ಈ ಶಿಕ್ಷಕ ಗಣಿತಕ್ಕೆ ಸಂಬಂಧಿಸಿದ ಇನ್ನೂರಕ್ಕೂ ಅಧಿಕ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾನೆ.   ಗಣಿತದಲ್ಲಿ ಮಾಸ್ಟರ್ ಮಾಡಿಕೊಂಡಿರುವ ಶಿಕ್ಷಕ ಕಳೆದ ಹದಿನೈದು ವರ್ಷಗಳಿಂದ ಶಿಕ್ಷಕನಾಗಿ ಕೆಲಸ ಮಾಡಿಕೊಂಡು ಬಂದಿದ್ದಾನೆ.

ಹವಾಮಾನ ವರದಿ ಓದುತ್ತಿದ್ದ ಆಂಕರ್, ಪ್ಲೇ ಆಗಿದ್ದು ಮಾತ್ರ ಪೋರ್ನ್‌ ವಿಡಿಯೋ!

ಮೊದಲು ಯು ಟ್ಯೂಬ್ ನಲ್ಲಿ  ಗಣಿತದ ಪಾಠ ಅಪ್ ಲೋಡ್ ಮಾಡಿದ್ದ ಶಿಕ್ಷಕ ನಂತರ ಪೋರ್ನ್ ಹಬ್ ಗೂ ಅಪ್ ಲೋಡ್ ಮಾಡಿದ್ದಾನೆ.  ಪೋರ್ನ್ ಹಬ್ ಸಿಕ್ಕಾಪಟ್ಟೆ ಜನಪ್ರಿಯವಾಗಿರುವ ಕಾರಣ ಅಲ್ಲಿ ಜ್ಞಾನ ಪ್ರಸಾರವಾಗಲಿ ಎಂಬ ಕಾರಣಕ್ಕೆ ವಿಡಿಯೋ ಅಪ್ ಲೋಡ್ ಮಾಡಿರುವುದಾಗಿ  34  ವರ್ಷದ ಶಿಕ್ಷಕ ತಿಳಿಸಿದ್ದಾರೆ.

ಸಾಕ್ಷ್ಟು ಜನರು ಪೋರ್ನ ಹಬ್ ಮೂಲಕವೇ ಗಣಿತದ ವಿಡಿಯೋಗಳನ್ನು ನೋಡಿದ್ದಾರೆ. ಇದೇ ಕಾರಣಕ್ಕೆ ನನ್ನ ವಿಡಿಯೋಗಳಿಗೆ  1.6 ಮಿಲಿಯನ್ ವೀವ್ಸ್ ಲಭ್ಯವಾಗಿವೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಬ್ಯಾನ್: ಕೇಂದ್ರ ಸರ್ಕಾರ ಸುಮಾರು ಎರಡು ವರ್ಷಗಳ ಹಿಂದೆಯೇ ಭಾರದಲ್ಲಿ ಸುಮಾರು ಎಂಟು ನೂರಕ್ಕೂ ಅಧಿಕ ಅಶ್ಲೀಲ ವೆಬ್ ತಾಣಗಳಿಗೆ ನಿಷೇಧ ಹೇರಿದೆ.  ಕಳ್ಳ ದಾರಿಗಳ ಮೂಲಕ  ಓಪನ್ ಮಾಡುವವರ ಮೇಲೆಯೂ ಕ್ರಮ ಜರುಗಿಸಲಾಗುತ್ತದೆ. 

 

 

click me!