ವ್ಯಾಟಿಕನ್‌ನಲ್ಲಿ ಪೋಪ್‌ ಫ್ರಾನ್ಸಿಸ್‌, ಪ್ರಧಾನಿ ಮೋದಿ ಭೇಟಿ?

By Suvarna NewsFirst Published Oct 24, 2021, 6:17 PM IST
Highlights

*ಜಿ20 ಶೃಂಗದಲ್ಲಿ ಭಾಗಿಯಾಗಲಿರುವ ನರೇಂದ್ರ ಮೋದಿ
*ಇದೇ ಅವಧಿಯಲ್ಲಿ ಕ್ರೈಸ್ತರ ಪರಮೋಚ್ಚ ಗುರು ಪೋಪ್‌ ಫ್ರಾನ್ಸಿಸ್‌ ಭೇಟಿ ಸಾಧ್ಯತೆ
*ಹವಾಮಾನ ಬದಲಾವಣೆ ಕುರಿತ ಸಮ್ಮೇಳನದಲ್ಲೂ ಭಾಗವಹಿಸಲಿರುವ ಪ್ರಧಾನಿ

ನವದೆಹಲಿ (ಅ. 24) :  ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಇದೇ ಅವಧಿಯಲ್ಲಿ ವ್ಯಾಟಿಕನ್‌ ಸಿಟಿಯಲ್ಲಿ ಕ್ರೈಸ್ತರ ಪರಮೋಚ್ಚ ಗುರು ಪೋಪ್‌ ಫ್ರಾನ್ಸಿಸ್‌ (Pope Francis) ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಮೋದಿ ಅ.30-31ರಂದು ಇಟಲಿಯ ರೋಮ್‌ನಲ್ಲಿ(Italy's Rome) ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ (G-20 Summit) ಭಾಗಿಯಾಗಲಿದ್ದು, ಪೋಪ್‌ ಭೇಟಿಯ ಹಿನ್ನೆಲೆಯಲ್ಲಿ ಅ.28ರ ರಾತ್ರಿಯೇ ಪ್ರಧಾನಿ ಭಾರತದಿಂದ ಪ್ರಯಾಣ ಬೆಳೆಸಲಿದ್ದಾರೆ. ಅ.29ರಂದು ಪೋಪ್‌ ಅವರನ್ನು ಮೋದಿ ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸವೆ. ಇನ್ನು ಜಿ 20 ಶೃಂಗಸಭೆಯ ಬಳಿಕ ನವೆಂಬರ್‌ 1ರಂದು ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಹವಾಮಾನ ಬದಲಾವಣೆ ಕುರಿತ ಸಮ್ಮೇಳನ(COP-26) ನಡೆಯಲಿದ್ದು ಪ್ರಧಾನಿ ಭಾಗಿಯಾಗಲಿದ್ದಾರೆ.

ಅ.25ಕ್ಕೆ ಪ್ರಧಾನಿ ಮೋದಿ ಯುಪಿಗೆ ಭೇಟಿ, 9 ಮೆಡಿಕಲ್ ಕಾಲೇಜು ಸೇರಿ ಹಲವು ಯೋಜನೆಗಳ ಉದ್ಘಾಟನೆ!

ಜಿ -20 ಶೃಂಗದಲ್ಲಿ, ತಾಲಿಬಾನ್(Taliban) ಆಡಳಿತದಲ್ಲಿರುವ ಅಫ್ಘಾನಿಸ್ತಾನವನ್ನು ಸ್ಥಿರಗೊಳಿಸುವ  ಮತ್ತು ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ತೈವಾನ್‌ನ (Taiwan) ಮೇಲೆ ಚೀನಾದ ಆಕ್ರಮಣಕಾರಿ  ನಿಲುವಿನ ಬಗ್ಗೆ ಚರ್ಚೆಯಾಗಲಿದೆ. ಇದಲ್ಲದೆ ಹಲವಾರು ಅಂತಾರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಜಿ -20 ಶೃಂಗದಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ. ಅಫ್ಘಾನಿಸ್ತಾನ ಈಗ ಬರಗಾಲದಂತಹ ಪರಿಸ್ಥಿತಿಗಳನ್ನು ಎದುರಿಸುತ್ತಿದೆ. ಅಲ್ಲಿ ಆಡಳಿತ ಚುಕ್ಕಾಣಿಗಾಗಿ ತಾಲಿಬಾನ್ ನಾಯಕರ ಮಧ್ಯೆ ಅಸಮಾಧಾನ ಇದೆ ಎಂದು ಹೇಳಲಾಗಿದೆ. ಹಾಗಾಗಿ ಸಭೆಯಲ್ಲಿ ಆಫ್ಘಾನಿಸ್ತಾನದ ಬಗೆಗಿನ ಚರ್ಚೆ ಪ್ರಾಮುಖ್ಯತೆ ಪಡೆಯಲಿದೆ.

ದೀಪಾವಳಿ ಪ್ರಯುಕ್ತ ಶಾರುಖ್ ಹೊಸ ಜಾಹೀರಾತು : ಸಾಮಾಜಿಕ ಜಾಲತಾಣದಲ್ಲಿ ವೈರಲ್!

ಪ್ರಧಾನಿ ಮೋದಿ ಹವಾಮಾನ ಬದಲಾವಣೆ (Climate Change) ಕುರಿತ ಸಮ್ಮೇಳನದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಲಿದ್ದಾರೆ.  ಈ ಸಂದರ್ಭದಲ್ಲಿ ಭಾರತವು ಹವಾಮಾನ ಬದಲಾವಣೆ, ಹಣಕಾಸು, ಕಾರ್ಬನ್ ವ್ಯಾಪಾರದ ಕಾರ್ಯವಿಧಾನಗಳ ಬಗ್ಗೆ ಮಾತನಾಡಲಿದ್ದು ಹವಾಮಾನ ಬದಲಾವಣೆಯಿಂದ ಪ್ರಭಾವಿತವಾಗಿರುವ ಭಾರತ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಪರಿಹಾರ ನೀಡುವಂತೆ  ಒತ್ತಾಯಿಸುವ ನಿರೀಕ್ಷೆಯಿದೆ. 

G-20 Summit ಎಂದರೇನು?

ಅತ್ಯಂತ ಬಲಿಷ್ಟ ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯುಳ್ಳ ದೇಶಗಳ ಮುಖಂಡರು ನಡೆಸುವ ಶೃಂಗಸಭೆ ಜಿ-20. ಆಸ್ಟ್ರೇಲಿಯಾ, ಕೆನಡಾ, ಸೌದಿ ಅರೇಬಿಯಾ, ಅಮೆರಿಕ, ಭಾರತ, ರಷ್ಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಅರ್ಜೆಂಟೀನಾ, ಜಪಾನ್, ಬ್ರೆಜಿಲ್, ಮೆಕ್ಸಿಕೋ, ಫ್ರಾನ್ಸ್, ಬ್ರಿಟನ್ ಇಂಡೋನೇಷ್ಯಾ, ಜರ್ಮನಿ, ಇಟಲಿ,  ಚೀನಾ, ಸೌಥ್ ಕೋರಿಯಾ ಮತ್ತು ಯುರೋಪಿಯನ್ ಒಕ್ಕೂಟ ಜಿ20 ಗುಂಪಿನ ಸದಸ್ಯ ರಾಷ್ಟ್ರಗಳಾಗಿವೆ. ಈ ರಾಷ್ಟ್ರಗಳ ಮುಖ್ಯಸ್ಥರು, ವಿದೇಶಾಂಗ ಸಚಿವರು, ಬ್ಯಾಂಕ್ ಗವರ್ನರ್​ಗಳು, ಹಣಕಾಸು ಸಚಿವರು  ದೇಶದ ಪ್ರತಿನಿಧಿಗಳಾಗಿ  ಜಿ -20 ಶೃಂಗದಲ್ಲಿ ಭಾಗವಹಿಸುತ್ತಾರೆ. ಈ ಶೃಂಗದಲ್ಲಿ ಜಾಗತಿಕ ಮಟ್ಟದ ಸಮಸ್ಯೆಗಳು, ಆರ್ಥಿಕತೆ, ಹೂಡಿಕೆ, ವ್ಯಾಪಾರ, ಹವಾಮಾನ, ಉದ್ಯೋಗ, ಮಹಿಳಾ ಸಬಲೀಕರಣ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ. ವಿವಧ ದೇಶಗಳ ಪ್ರತಿನಿಧಿಗಳು ಒಂದೆಡೆ ಸೇರಿ ವಿಚಾರ ವಿನಿಮಯ ಮಾಡಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ.

ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿವಿಯ ಇಬ್ಬರು

click me!