ಸಿರಿಯಾ ಅಧ್ಯಕ್ಷ ಪಲಾಯನದ ಬೆನ್ನಲ್ಲೇ ಫೆರಾರಿ, ಲ್ಯಾಂಬೋರ್ಗಿನಿ ಸೇರಿ ದುಬಾರಿ ಕಾರು ಲೂಟಿ!

By Chethan Kumar  |  First Published Dec 9, 2024, 12:16 PM IST

ಸಿರಿಯಾದಲ್ಲಿ ಬಂಡುಕೋರರ ದಂಗೆ ತೀವ್ರಗೊಂಡಿದೆ. ಬಂಡುಕೋರರ ಆಕ್ರಮಣದಿಂದ ಅಧ್ಯಕ್ಷ ಬಷರ್ ಅಲ್ ಅಸಾದ್ ಪಲಾಯನ ಮಾಡಿದ್ದಾರೆ. ಇದೀಗ ಅಧ್ಯಕ್ಷರ ಮನೆಗೆ ನುಗ್ಗಿರುವ ಬಂಡುಕೋರರು ದುಬಾರಿ ಮೌಲ್ಯದ ಐಷಾರಾಮಿ ಕಾರುಗಳನ್ನು ಹೊತ್ತೊಯ್ದಿದ್ದಾರೆ. ಅಸಾದ್ ಬಳಿ ಇದ್ದ ಕಾರುಗೆಷ್ಟು  ಗೊತ್ತಾ?


ಸಿರಿಯಾ(ಡಿ.09) ಸಿರಿಯಾದಲ್ಲಿ ಆಡಳಿತ ನೆಲಕಚ್ಚಿದೆ. ಬಂಡುಕೋರರು ಡಮಾಸ್ಕಸ್ ಸೇರಿದಂತೆ ಬಹುತೇಕ ಪ್ರದೇಶವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಸರ್ವಾಧಿಕಾರಿ ಸಿರಿಯಾ ಅಧ್ಯಕ್ಷ ಬಷರ್‌ ಅಲ್‌ ಅಸಾದ್‌ ಈ ದಂಗೆಗೆ ಬೆದರಿ ದೇಶದಿಂದ ಪಲಾಯನ ಮಾಡಿದ್ದಾರೆ. ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಗುಂಪು ಆಡಳಿತ ಹಿಡಿದಂತೆ, ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರ ಪತನಗೊಳಿಸಿದ ರೀತಿಯಲ್ಲೇ ಇದೀಗ ಸಿರಿಯಾದಲ್ಲಿ ಬಂಡುಕೋರರ ಗುಂಪು ಸರ್ವಾಧಿಕಾರಿ ಬಷರ್‌ ಅಲ್‌ ಅಸಾದ್‌ ಸರ್ಕಾರ ಉರುಳಿಸಿ ಆಕ್ರಮಣಕಾರಿ ರೀತಿಯಲ್ಲಿ ಆಡಳಿತ ಹಿಡಿದ್ದಾರೆ. ಇತ್ತ ಬಷರ್‌ ಅಲ್‌ ಅಸಾದ್‌ ಮನೆಗೆ ನುಗ್ಗಿರುವ ಬಂಡುಕೋರರು ಹಾಗೂ ಲೂಟಿಕೂರರು ಎಲ್ಲಾ ವಸ್ತುಗಳನ್ನು ದೋಚಿದ್ದಾರೆ. ಈ ವೇಳೆ ದುಬಾರಿ ಮೌಲ್ಯದ ಐಷಾರಾಮಿ ಕಾರುಗಳನ್ನು ದೋಚಿದ್ದಾರೆ. 

ಕಳೆದ 14 ವರ್ಷದಿಂದ ಬಷರ್‌ ಅಲ್‌ ಅಸಾದ್‌ ಆಡಳಿತ ವಿರುದ್ದ ದಂಗೆ ನಡೆಯುತ್ತಲೇ ಇತ್ತು. ಆದರೆ ಪ್ರತಿ ಬಾರಿ ಈ ರೀತಿಯ ದಂಗೆಯನ್ನು ಹತ್ತಿಕ್ಕುವಲ್ಲಿ ಬಷರ್‌ ಅಲ್‌ ಅಸಾದ್‌ ಯಶಸ್ವಿಯಾಗಿದ್ದರು. ಈ ರೀತಿ ಪ್ರತಿಭಟನೆ, ದಂಗೆ ಹತ್ತಿಕುವ ವೇಳೆ ಸುಮಾರು 5 ಲಕ್ಷಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಈ ಬಾರಿ ಈ ದಂಗೆ ಊಹೆಗೂ ನಿಲುಕದ ರೀತಿಯಲ್ಲಿ ಸಂಘಟನೆಗೊಂಡಿತ್ತು. ಡಾಮಸ್ಕಸ್ ಪ್ರದೇಶವನ್ನು ಉಗ್ರರು ಸುತ್ತುವರಿಯುತ್ತಿದ್ದಂತೆ ಬಷರ್‌ ಅಲ್‌ ಅಸಾದ್‌ ಕುಟುಂಬ ಜೊತೆ ವಿದೇಶಕ್ಕೆ ಪಲಾಯನ ಮಾಡಿದ್ದಾರೆ. ಬಷರ್‌ ಅಲ್‌ ಅಸಾದ್‌ ಅರಮನೆಗೆ ನುಗ್ಗಿದ ಜನರು  ಕಾರುಗಳನ್ನು ಕದ್ದಿದ್ದಾರೆ. ಲೂಟಿ ಮಾಡಿದ್ದಾರೆ.

Tap to resize

Latest Videos

ದೇಶದಲ್ಲಿನ ದಂಗೆಯಿಂದ ಅಧಿಕಾರ ಕಳೆದುಕೊಂಡ ವಿಶ್ವದ ಪ್ರಮುಖ ನಾಯಕರು

ಬರೋಬ್ಬರಿ 31,500 ಚದರ ಅಡಿ ವಿಸ್ತೀರ್ಣದ ಅರಮನೆಯಲ್ಲಿ ಅತೀ ದೊಡ್ಡ ಸ್ಥಳವನ್ನು ಕಾರುಗಳ ಪಾರ್ಕಿಂಗ್‌ಗೆ ನೀಡಲಾಗಿದೆ. ಈ ಮನೆಗೆ ನುಗ್ಗಿ ಸಿಕ್ಕ ಕಾರು ಕೀಗಳನ್ನು ತೆಗೆದುಕೊಂಡು ಫೆರಾರಿ, ಮರ್ಸಿಡೀಸ್ ಬೆಂಜ್, ಹಮ್ಮರ್, ಲೆಕ್ಸಸ್, ಟೋಯೋಟಾ ಸೇರಿದಂತೆ ಹಲವು ಕಾರುಗಳನ್ನು ದೋಚಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಕಾರುಗಳನ್ನು ಸೀಟು, ಚಕ್ರ ಸೇರಿದಂತೆ ಹಲವು ಆ್ಯಕ್ಸಸರಿ ದೋಚಿದ್ದಾರೆ. ಕೆಲ ಕಾರುಗಳನ್ನು ಪುಡಿ ಮಾಡಿದ್ದಾರೆ. 

ಕಾರುಗಳ ಕಲ್ಲುಗಳಿಂದ ಗುದ್ದಿ ಪುಡಿ ಮಾಡಿದ್ದಾರೆ. ಕಾರಿನ ಗಾಜುಗಳು ಪುಡಿ ಪುಡಿಯಾಗಿದೆ. ಚಕ್ರಗಳು ಚೆಲ್ಲಾಪಿಲ್ಲಯಾಗಿದೆ. ಮೂಲಗಳ ಪ್ರಕಾರ ಬಷರ್‌ ಅಲ್‌ ಅಸಾದ್‌ ಬಳಿ 100ಕ್ಕೂ ಹೆಚ್ಚು ಐಷಾರಾಮಿ ಕಾರುಗಳಿವೆ ಅನ್ನೋದು ಬಹಿರಂಗವಾಗಿದೆ. ಬಷರ್‌ ಅಲ್‌ ಅಸಾದ್‌ ಕಾರು ಗ್ಯಾರೇಜ್ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಐಷಾರಾಮಿ ಕಾರುಗಳನ್ನು ಪಾರ್ಕ್ ಮಾಡಿರುವುದು ಸ್ಪಷ್ಟವಾಗಿದೆ. ಲೂಟಿಕೂರರು ಕಾರುಗಳನ್ನು ಪುಡಿ ಮಾಡಿರುವ ದೃಶ್ಯವೂ ಸ್ಪಷ್ಟವಾಗಿದೆ.

2011ರಿಂದ ಬಂಡುಕೋರ ನಾಯಕ ಗೋಲಾನಿ ಈ ಪ್ರತಿಭಟನೆಯನ್ನು ಸಂಘಟಿಸಿ ಇದೀಗ ಸರ್ಕಾರ ಉರುಳಿಸಿ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ. ಬಂಡುಕೋರರು ಎಲ್ಲೆಡೆ ಸಂಭ್ರಮ ಆಚರಣೆಯಲ್ಲಿ ತೊಡಗಿದ್ದಾರೆ. ಡಮಾಸ್ಕಸ್‌ನಲ್ಲಿ ಭಾರಿ ಸಂಭ್ರಮಾಚರಣೆ ನಡೆದಿದೆ. ಬಷರ್‌ ಅಲ್‌ ಅಸಾದ್‌ ಮನೆಯಿಂದ ಹಲವು ವಸ್ತುಗಳನ್ನು ಜನರು ಲೂಟಿ ಮಾಡಿದ್ದಾರೆ. ಉಡುಪುಗಳು, ಅಲಂಕಾರಿಗ ವಸ್ತು, ಅಡುಗೆ ಕೋಣೆಯಲ್ಲಿದ್ದ ಪಾತ್ರೆಗಳು, ಆಹಾರ ವಸ್ತುಗಳು, ಹಣ್ಣು, ತರಕಾರಿ, ಆಹಾರ ಧಾನ್ಯ ಸೇರಿದಂತೆ ಬಹುತೇಕ ವಸ್ತುಗಳನ್ನು ಜನರು ಲೂಟಿ ಮಾಡಿದ್ದಾರೆ. ಸಿರಿಯಾ ಅಧ್ಯಕ್ಷ ಬಷರ್‌ ಅಲ್ ಅಸಾದ್‌, ದೇಶ ಬಿಟ್ಟು ಓಡಿ ಹೋದ ಕಾರಣ ದೇಶದಲ್ಲಿ ಮುಂದೆ ಯಾರು ಅಧಿಕಾರ ನಡೆಸುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ.
 

click me!