ಬುರ್ಖಾ ನಿಷೇಧ, ಸ್ವಿಸ್ ನಿಯಮ ಉಲ್ಲಂಘಿಸಿದರೆ 83,000 ರೂ ದಂಡ!

By Suvarna News  |  First Published Oct 14, 2022, 7:01 PM IST

ಭಾರತದಲ್ಲಿ ಹಿಜಾಬ್ ಬೇಕು ಎಂದು ಹೋರಾಟ, ಇರಾನ್‌ನಲ್ಲಿ ಹಿಜಾಬ್ ಬೇಡ ಎಂದು ಹೋರಾಟ ನಡೆಯುತ್ತಿದೆ. ಇದರ ನಡುವೆ ಸ್ವಿಸ್‌ನಲ್ಲಿ ಬುರ್ಖಾ ಬ್ಯಾನ್ ಮಾಡಲಾಗಿದೆ. ಈ ನಿಯಮ ಉಲ್ಲಂಘಿಸಿದರೆ 83,000 ರೂಪಾಯಿ ದಂಡ ಎಂದಿದೆ.


ಬರ್ನ್(ಅ.14): ಭಾರತದಲ್ಲಿ ಹಿಜಾಬ್ ಬೇಕು, ನಮ್ಮ ಆಯ್ಕೆ, ಇಸ್ಲಾಂ ಅವಿಭಾಜ್ಯ ಅಂಗ ಎಂದು ಹೋರಾಟ ನಡೆಯುತ್ತಿದೆ. ಇರಾನ್‌ನಲ್ಲಿ ಹಿಜಾಬ್ ಮೂಲಕ ಮುಸ್ಲಿಮ್ ಮಹಿಳೆಯರನ್ನು ಬಂಧಿಸಬೇಡಿ ಎಂದು ಪ್ರತಿಭಟನೆ ನಡೆಯುತ್ತಿದೆ. ಹಲವು ಪ್ರತಿಭಟನಾಕಾರರು ಗುಂಡಿಗೆ ಬಲಿಯಾಗಿದ್ದಾರೆ. ಈ ಹೋರಾಟ, ವಾದ ವಿವಾದಗಳ ನಡುವೆ ಸ್ವಿಟ್ಜರ್‌ಲೆಂಡ್‌ನಲ್ಲಿ ಬುರ್ಖಾ ಬ್ಯಾನ್ ಹಾಗೂ ಈ ನಿಯಮ ಉಲ್ಲಂಘಿಸಿದರೆ 82,000 ರೂಪಾಯಿ ದಂಡ ವಿಧಿಸುವ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಅಕ್ಟೋಬರ್ 12 ರಂದು ಸ್ವಿಟ್ಜರ್‌ಲೆಂಡ್ ಸಂಸತ್ತಿನಲ್ಲಿ ಈ ಮಸೂದೆ ಮಂಡಿಸಲಾಗಿದೆ. ಕಳೆದ ವರ್ಷ ಸ್ವಿಟ್ಜರ್‌ಲೆಂಡ್‌ನಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಸುರಕ್ಷತೆ ಹಾಗೂ ಇತರ ಕಾರಣಗಳಿಂದ ಮುಖ ಮುಚ್ಚುವ ವಸ್ತ್ರಗಳನ್ನು ನಿಷೇಧಿಸಲು ಮತದಾನ ಮಾಡಲಾಗಿತ್ತು. ಇದೀಗ ಈ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವ ಪ್ರಸ್ತಾವನೆ ಕರಡು ಮಸೂದೆಯನ್ನು ಸಲ್ಲಿಸಲಾಗಿದೆ. 

ಪ್ರಸ್ತಾವಿತ ನಿಷೇಧವನ್ನು ಸ್ವಿಟ್ಜರ್‌ಲೆಂಡ್‌ನಲ್ಲಿ ಬುರ್ಖಾ ಬ್ಯಾನ್ ಎಂದು ಕರೆದಿದ್ದಾರೆ. ಆದರೆ ಪ್ರಾಸ್ತಾವಿತ ಮಸೂದೆಯಲ್ಲಿ ಮುಖ ಮುಚ್ಚುವ ವಸ್ತ್ರಗಳ ನಿಷೇಧ ಎಂದು ಉಲ್ಲೇಖಿಸಲಾಗಿದೆ. ಈ ನಿಯಮದ ಪ್ರಕಾರ ತಲೆಗೂದಲು ಮುಚ್ಚುವ ಹಿಜಾಬ್ ಧರಿಸಲು ಅವಕಾಶವಿದೆ. ಆದರೆ ಕಣ್ಣು ಮಾತ್ರ ಕಾಣಿಸುವ ಮುಖದ ಇತರ ಭಾಗಗಳು ಮುಚ್ಚುವ ವಸ್ತ್ರಗಳನ್ನು ಧರಿಸುವ ಅವಕಾಶವಿಲ್ಲ. ಕಳೆದ ವರ್ಷ ಈ ಪ್ರಸ್ತಾವನೆಗೆ ಸ್ವಿಟ್ಜರ್‌ಲೆಂಡ್‌ನ ಶೇಕಡಾ 51.2 ಮಂದಿ ಬೆಂಬಲಿಸಿದ್ದರು. ಇದೇ ವೇಳೆ ಇನ್ನುಳಿದ ಕೆಲವರು ಪ್ರಮುಖವಾಗಿ ಮುಸ್ಲಿಮರು ಇದನ್ನು ಟೀಕಿಸಿದ್ದರು.  

Tap to resize

Latest Videos

ಬುರ್ಖಾ ಹಾಕಿ ಸುತ್ತಾಡಿದ ಪೂಜಾರಿ ಪೊಲೀಸ್ ವಶಕ್ಕೆ, ಚಿಕನ್ ಫಾಕ್ಸ್ ಕಾರಣ ನೀಡಿದ ಅರ್ಚಕ

ಕರ್ನಾಟಕದಲ್ಲಿ ಹಿಜಾಬ್ ನಿಷೇಧ ತೀರ್ಪು ನೀಡಿರುವುದು ಕೇವಲ ಶಾಲಾ ತರಗತಿ ಒಳಗೆ ಮಾತ್ರ. ಇನ್ನುಳಿದ ಯಾವುದೇ ಸ್ಥಳ, ಸಾರ್ವಜನಿಕ ಪ್ರದೇಶದಲ್ಲಿ ಹಿಜಾಬ್‌ಗೆ ನಿಷೇಧ ಹೇರಲಾಗಿಲ್ಲ. ಆದರೆ ಸ್ವಿಟ್ಜರ್‌ಲೆಂಡ್ ಬುರ್ಖಾ ಬ್ಯಾನ್ ಪ್ರಸ್ತಾವನೆಯಲ್ಲಿ ಮಹತ್ವದ ಅಂಶವಿದೆ. ಸಾರ್ವಜನಿಕ ಪ್ರದೇಶಗಳಾದ ಸಾರಿಗೆ,  ಸಾರ್ವಜನಿಕ ರಸ್ತೆ, ರೆಸ್ಟೋರೆಂಟ್, ಸಾರ್ವಜನಿಕ ಸ್ಥಳಗಳು ಸೇರಿದಂತೆ ಹಲವು ಕಡೆಗಳಲ್ಲಿ ಬುರ್ಖಾ ಬ್ಯಾನ್ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಮುಖವಾಗಿ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಬುರ್ಖಾ ಇಡೀ ದೇಹ ಮಾತ್ರವಲ್ಲ ಮುಖವನ್ನು ಮುಚ್ಚುತ್ತದೆ. ಕೇವಲ ಕಣ್ಣುಗಳು ಮಾತ್ರ ಕಾಣುತ್ತದೆ. ಈ ರೀತಿ ಮುಖ ಮುಚ್ಚಿಕೊಳ್ಳುವ, ಕಣ್ಣು ಮಾತ್ರ ಕಾಣಿಸುವ ಯಾವುದೇ ವಸ್ತ್ರಕ್ಕೆ ಅವಕಾಶವಿಲ್ಲ. ಆದರೆ ತಮ್ಮ ತಮ್ಮ ಧಾರ್ಮಿಕ ಕೇಂದ್ರಗಳಲ್ಲಿ ಈ ರೀತಿಯ ಉಡುಪು ಹಾಕಿಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ ಸಾರ್ವಜನಿಕ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಅವಕಾಶ ಇಲ್ಲ. ಈ ನಿಯಮ ಉಲ್ಲಂಘಿಸಿದರೆ 82,000 ರೂಪಾಯಿ ದಂಡ ವಿಧಿಸಲು ಪ್ರಸ್ತಾವನೆಯಲ್ಲಿ ಹೇಳಲಾಗಿದೆ. 

 

Mahsa Amini Death: ಪ್ರತಿಭಟನೆ ನಡೆಸುತ್ತಿದ್ದ ನಾಲ್ವರು ಮಹಿಳೆಯರ ಗುಂಡಿಕ್ಕಿ ಹತ್ಯೆ!

ಈಗಾಗಲೇ ಸ್ವಿಟ್ಜರ್‌ಲೆಂಡ್‌ನಲ್ಲಿ ಬುರ್ಖಾ ನಿಷೇಧದ ಪರ ಜನರು ಮತ ಚಲಾಯಿಸಿದ್ದಾರೆ. ಹೀಗಾಗಿ ಈ ಪ್ರಸ್ತಾವನೆಗೆ ಸುಲಭಾಗಿ ಅಂಕಿತ ಬೀಳುವ ಸಾಧ್ಯತೆ ಇದೆ. ಈಗರ್‌ಕಿಂಗರ್ ಕೊಮಿಟಿ, ರಾಜಕೀಯ ನಾಯಕರನ್ನೊಳಗೊಂಡ ತಂಡ, ಸ್ವಿಸ್ ಬಲಪಂಥೀಯರ ಸದಸ್ಯರನ್ನೊಳಗೊಂಡ ಸಮಿತಿ ಈ ಪ್ರಸ್ತಾವನೆ ಸಲ್ಲಿಸಿದೆ.

click me!