
ಸ್ವೀಡನ್ (ಸೆ.08) ಸಚಿವ ಸಂಪುಟದಲ್ಲಿ ಕೆಲ ಬದಲಾವಣೆ ಮಾಡಲಾಗಿತ್ತು. ಈ ಪೈಕಿ ಹೊಸ ಆರೋಗ್ಯ ಸಚಿವರ ಆಯ್ಕೆ ಮಾಡಲಾಗಿತ್ತು. ಆರೋಗ್ಯ ಸಚಿವರು ಆಯ್ಕೆಯಾದ ಕೆಲವೇ ಗಂಟೆಗಳಲ್ಲಿ ಆಯೋಜನೆಗೊಂಡ ಸುದ್ದಿಗೋಷ್ಠಿಯಲ್ಲಿ ಅಸ್ವಸ್ಥಗೊಂಡ ಆರೋಗ್ಯ ಸಚಿವೆ ದಿಢೀರ್ ವೇದಿಕೆಯಲ್ಲಿ ಕುಸಿದು ಬಿದ್ದ ಘಟನೆ ಸ್ವೀಡನ್‌ನಲ್ಲಿ ನಡೆದಿದೆ. ತಕ್ಷಣವೇ ಆರೋಗ್ಯ ಸಚಿವೆಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆ ದಾಖಲಿಸಲಾಗಿದೆ. ಸ್ವೀಡನ್ ಪ್ರಧಾನಿ ಸೇರಿದಂತೆ ಪ್ರಮುಖ ನಾಯಕರ ಜೊತೆಗಿನ ಸುದ್ದಿಗೋಷ್ಠಿಯಲ್ಲಿ ಆತಂಕದ ಪರಿಸ್ಥಿತಿ ಎದುರಾಗಿತ್ತು.
ಸ್ವೀಡನ್ ಸರ್ಕಾರದ ಆರೋಗ್ಯ ಸಚಿವೆಯಾಗಿ ಎಲಿಜಬೆತ್ ಲ್ಯಾನ್ ನೇಮಕಗೊಂಡಿದ್ದರು. ಎಲಿಜಬೆತ್ ಆಯ್ಕೆ ಬಳಿಕ ಕೆಲವೇ ಗಂಟೆಗಳಲ್ಲಿ ಸ್ವೀಡನ್ ಪ್ರಧಾನಿ ಉಲ್ಫ್ ಕ್ರಿಸ್ಟರೆನ್ಸನ್ ಹಾಗೂ ಡೆಮಾಕ್ರಟಿಕ್ ಪಾರ್ಟಿಯ ಎಬ್ಬಾ ಬುಶ್ ಜೊತೆಗೆ ಎಲಿಜಬೆತ್ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಎಲ್ಲಾ ಸುದ್ದಿ ಮಾಧ್ಯಮಗಳು ಈ ಸುದ್ದಿಗೋಷ್ಠಿ ವರದಿಗೆ ಹಾಜರಿತ್ತು. ಹಲವು ಟಿವಿ ಸುದ್ದಿ ವಾಹನಿಗಳು ನೇರ ಪ್ರಸಾರ ಮಾಡಿತ್ತು. ಇನ್ನು ಯೂಟ್ಯೂಬ್ ಸೇರಿದಂತೆ ಹಲವು ಇತರ ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿಗೋಷ್ಠಿ ಲೈವ್ ಪ್ರಸಾರವಾಗಿತ್ತು. ಇದೀಗ ಆರೋಗ್ಯ ಸಚಿವೆ ಕುಸಿದು ಬೀಳುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಆತಂಕ ಹೆಚ್ಚಿಸಿದೆ.
ಸುದ್ದಿಗೋಷ್ಠಿ ಆರಂಭಗೊಂಡಿತ್ತು. ನಾಯಕರ ಮಾತನ್ನು ಕೇಳಿಸಿಕೊಳ್ಳುತ್ತಿದ್ದ ಎಲಿಜಬೆತ್ ಲ್ಯಾನ್ ಅಸ್ವಸ್ಥಗೊಂಡಿದ್ದಾರೆ. ನಿಧಾನವಾಗಿ ಕುಸಿಯುತ್ತಿರುವುದು ಸೆರೆಯಾಗಿದೆ. ಡಯಾಜ್ ಮೇಲೆ ಬಿದ್ದು ಬಳಿಕ ವೇದಿಕೆಯಲ್ಲಿ ನೆಲಕ್ಕೆ ಬಿದ್ದಿದ್ದಾರೆ. ತಕ್ಷಣವೇ ಪಕ್ಕದಲ್ಲಿದ್ದ ನಾಯಕರು ಲ್ಯಾನ್ ನೆರವಿಗೆ ಆಗಮಿಸಿದ್ದಾರೆ. ಇತ್ತ ಪತ್ರಕರ್ತರು ಆರೋಗ್ಯ ಸಚಿವರ ನೆರವಿಗೆ ಧಾವಿಸಿದ್ದಾರೆ.
ಆರೋಗ್ಯ ಸಚಿವೆ ಎಲಿಜಬೆತ್ ಲ್ಯಾನ್ ಬಿಪಿ ಸಮಸ್ಯೆ ಎದುರಿಸಿದ್ದಾರೆ. ವೇದಿಕೆಯಲ್ಲಿ ನಿಂತಿರುವಾಗ ಲೋ ಬಿಪಿ ಸಮಸ್ಯೆಯಾಗಿದೆ. ಹೀಗಾಗಿ ಲ್ಯಾನ್ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆಯಿಂದ ಲ್ಯಾನ್ ಚೇತರಿಸಿಕೊಂಡಿದ್ದಾರೆ. ಡಯಾಜ್ ಮೇಲೆ ಕುಸಿದು ಬಳಿಕ ವೇದಿಕೆಯಲ್ಲಿ ಕುಸಿದು ಬಿದ್ದ ಕಾರಣ ಸಣ್ಣ ಪುಟ್ಟ ಗಾಯಗಳಾಗಿದೆ. ಚಿಕಿತ್ಸೆಯಿಂದ ಲ್ಯಾನ್ ಚೇತರಿಸಿಕೊಂಡಿದ್ದಾರೆ.
ಬೀಳ್ಕೊಡುಗೆಯಲ್ಲಿ ವಿದಾಯ ಭಾಷಣ ಮಾಡುತ್ತಿದ್ದಂತೆ ಕುಸಿದು ಬಿದ್ದು ಮೃತಪಟ್ಟ ವಿದ್ಯಾರ್ಥಿನಿ
ಬಿಪಿ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆದ ಎಲಿಜಬೆತ್ ಲ್ಯಾನ್ ಚೇತರಿಸಿಕೊಂಡು ಬಳಿಕ ನೇರವಾಗಿ ಆರೋಗ್ಯ ಸಚಿವಾಲಯದ ತಮ್ಮ ಕಚೇರಿಗೆ ತೆರಳಿದ್ದಾರೆ. ನಡೆದ ಘಟನೆ ಕುರಿತು ವಿವರಿಸಿದ್ದಾರೆ. ಬಿಪಿ ಸಮಸ್ಯೆಯಿಂದ ಹೀಗೆ ಆಗಿದೆ. ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಸುದ್ದಿಗೋಷ್ಠಿ ನಡುವೆ ಲ್ಯಾನ್ ಕುಸಿದು ಬಿದ್ದ ಕಾರಣ ಇತ್ತ ಸುದ್ದಿಗೋಷ್ಠಿ ಮುಂದುವರಿಸಲು ನಾಯಕರಿಗೆ ಸಾಧ್ಯವಾಗಲಿಲ್ಲ. ಸುದ್ದಿಗೋಷ್ಠಿಯನ್ನು ಶೀಘ್ರದಲ್ಲೇ ಅಂತ್ಯಗೊಳಿಸಲಾಗಿತ್ತು. ಇನ್ನು ಪ್ರಶ್ನೋತ್ತರ ಸಮಯವನ್ನು ರದ್ದುಗೊಳಿಸಲಾಗಿತ್ತು. ಬಳಿಕ ನಾಯಕರು ಆಸ್ಪತ್ಪೆಗೆ ದೌಡಾಯಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ