ಅಮೆರಿಕಾದ ಓಹಿಯೋದ ಸ್ಪ್ರಿಂಗ್‌ಫೀಲ್ಡ್‌ನಲ್ಲಿರುವ ಹೈತಿ ವಲಸಿಗರು ಸಾಕು ಬೆಕ್ಕುಗಳನ್ನು ತಿನ್ನುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿರುವ ನಡುವೆ ಟೆಕ್ಸಾಸ್‌ನ ಹೋಸ್ಟನ್‌ನಲ್ಲಿ ಬೆಕ್ಕುಗಳ ದೇಹದ ಭಾಗಗಳು ಕಾಣಿಸಿಕೊಂಡಿದ್ದು, ಇದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ ಈ ಬಗ್ಗೆ ಒಂದು ವರದಿ.
ಅಮೆರಿಕಾದ ಓಹಿಯೋದ ಸ್ಪ್ರಿಂಗ್‌ಫೀಲ್ಡ್‌ನಲ್ಲಿರುವ ಹೈತಿ ವಲಸಿಗರು ಸಾಕು ಬೆಕ್ಕುಗಳನ್ನು ತಿನ್ನುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿರುವ ನಡುವೆ ಟೆಕ್ಸಾಸ್‌ನ ಹೋಸ್ಟನ್‌ನಲ್ಲಿ ಬೆಕ್ಕುಗಳ ದೇಹದ ಭಾಗಗಳು ಕಾಣಿಸಿಕೊಂಡಿದ್ದು, ಇದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ನಗರದಲ್ಲಿ ಹಲವಾರು ಬೆಕ್ಕುಗಳ ಅರ್ಧಂಬರ್ಧ ಇರುವ ಮೃತ ದೇಹಗಳು ಕಂಡುಬಂದಿವೆ. ಎರಡು ವಾರಗಳಲ್ಲಿ ಬೆಕ್ಕುಗಳ ಕನಿಷ್ಠ ಮೂರು ವಿರೂಪಗೊಂಡ ಮೃತ ದೇಹಗಳು ಪತ್ತೆಯಾದ ಹಿನ್ನೆಲೆಯಲ್ಲಿ ಹೋಸ್ಟನ್ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಹೋಸ್ಟನ್‌ನ ಚಾನೆಲೊಂದರ ವರದಿಯ ಪ್ರಕಾರ ಬೆಕ್ಕುಗಳ ದೇಹದ ಬಿಡಿ ಭಾಗಗಳನ್ನು ಜನರು ವಾಕಿಂಗ್ ಮಾಡುವ ಪ್ರದೇಶದಲ್ಲಿ ಅವರು ನೋಡಲಿ ಎಂದೇ ಹಾಕಲಾಗಿದೆ ಎಂದು ಆರೋಪಿಸಲಾಗಿದೆ. ಬೆಕ್ಕುಗಳ ದೇಹದ ಕೆಲ ಭಾಗಗಳು ಹೋಸ್ಟನ್‌ನ ಈಸ್ಟ್ ಎಂಡ್‌ನ ಬೀದಿಗಳಲ್ಲಿ ಕಂಡುಬಂದಿವೆ. ಇದು ಸ್ಥಳೀಯರಲ್ಲಿ ಭಯ ಮತ್ತು ಅಸಹ್ಯವನ್ನು ಉಂಟುಮಾಡುತ್ತಿದೆ ಎಂದು ವರದಿಯಾಗಿದೆ.
undefined
ಇದು ವಿಶ್ವದ ಅತೀ ದುಬಾರಿ ಕುದುರೆ: ಇದರ ಬೆಲೆಗೆ ಮಹಾನಗರಿಯಲ್ಲಿ 3 ಬಂಗ್ಲೆನೇ ಖರೀದಿ ಮಾಡ್ಬಹುದು
ಈ ಬಗ್ಗೆ ಪ್ರತ್ಯಕ್ಷದರ್ಶಿ ಜಾಕ್ಸನ್ ಹೇಮ್ ವಿವರಿಸಿದ್ದು, ಅವರು ಹೇಳುವಂತೆ ಅವರಿಗೆ ಕತ್ತರಿಸಲ್ಪಟ್ಟ ಹಾಗೂ ತುಂಡು ತುಂಡಾದ ಬೆಕ್ಕಿನ ದೇಹಗಳು ಕಾಣಲು ಸಿಕ್ಕಿವೆ. ಕಪ್ಪು ಬೆಕ್ಕೊಂದು ಅರ್ಧ ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆದರೆ ಅದರಲ್ಲಿ ರಕ್ತವಿರಲಿಲ್ಲ, ಹಾಗೂ ಅವುಗಳ ದೇಹದ ಒಳಭಾಗದ ಅಂಗಗಳು ಹಾಗೆಯೇ ಇದ್ದವು.
ಈ ಸತ್ತು ಹೋದ ಬೆಕ್ಕುಗಳು ಇಲ್ಲಿನ ಸಮುದಾಯದ ಜನರದ್ದಾಗಿದ್ದವು. ಹಾಗೂ ಎರಡು ವಾರಗಳಲ್ಲಿ ಇಂತಹ ಮೂರು ಬೆಕ್ಕುಗಳ ಮೃತದೇಹ ಇಲ್ಲಿ ಕಾಣಲು ಸಿಕ್ಕಿದೆ. ಹಾಗೂ ಇದು ಪ್ರಾಣಿಗಳ ಮೇಲಿನ ಹಠಾತ್ ದಾಳಿಯಿಂದ ನಡೆದಿರಬಹುದು ಎಂದು ನಂಬಲು ಕಷ್ಟವಾಗುತ್ತಿದೆ. 30 ವರ್ಷಗಳಲ್ಲಿ ಈ ಹಿಂದೆಂದೂ ಈ ರೀತಿಯ ಘಟನೆ ನೋಡಿಲ್ಲ ಎಂದು ಜಾಕ್ಸನ್ ಹೇಮ್ ಹೇಳಿದ್ದಾರೆ.
ಇದು ಅಸಹ್ಯಕರ ಮತ್ತು ಭಯಾನಕವಾಗಿದೆ. ನನ್ನ ತಾಯಿ ನಮ್ಮ ನಾಯಿಯನ್ನು ವಾಕ್ ಕರೆದುಕೊಂಡು ಹೋಗುತ್ತಿರುವಾಗ ಕಪ್ಪು ಬೆಕ್ಕೊಂದರ ಅರ್ಧ ದೇಹವನ್ನು ನೋಡಿದ್ದಾಗಿ ಹೇಳಿದರು. ಕೆಲವು ಬೆಕ್ಕುಗಳನ್ನು ಅರ್ಧ ಕತ್ತರಿಸಲಾಗಿದೆ. ಮತ್ತೆ ಕೆಲವು ಬೆಕ್ಕುಗಳು ಬಾಲವನ್ನು ಕತ್ತರಿಸಲಾಗಿದೆ. ಆದರೆ ಅವುಗಳ ದೇಹದ ಸುತ್ತ ಎಲ್ಲೂ ರಕ್ತವಿಲ್ಲ. ಜೊತೆಗ ಅವುಗಳ ದೇಹದ ಒಳಭಾಗ ಹಾಗೆಯೇ ಇತ್ತು ಎಂದು ಹೇಮ್ ಘಟನೆಯ ಮಾಹಿತಿ ನೀಡಿದ್ದಾರೆ.
ನಲಾ ಈಕೆ ಸಾಮಾನ್ಯಳಲ್ಲ... ಫೋರ್ಬ್ಸ್ ಪಟ್ಟಿಯಲ್ಲಿ ಜಾಗ ಪಡೆದಿರುವ ವಿಶ್ವದ ಶ್ರೀಮಂತ ಬೆಕ್ಕು
ಟೆಕ್ಸಾಸ್‌ನ ಮನೆಯೊಂದರಲ್ಲಿ 50ಕ್ಕೂ ಹೆಚ್ಚು ಸತ್ತ ಪ್ರಾಣಿಗಳು ಪತ್ತೆ
ಈ ಮಧ್ಯೆ ಅಧಿಕಾರಿಗಳು ನೀಡಿದ ಮಾಹಿತಿಯನ್ನು ಆಧರಿಸಿ ಫಾಕ್ಸ್ 26 ಹೋಸ್ಟನ್ ಚಾನೆಲೊಂದು ವರದಿ ಮಾಡಿದ್ದು, ಟೆಕ್ಸಾಸ್‌ನ ಸಾನ್ ಲಿಯಾನ್‌ನ ಆಸ್ತಿಯೊಂದರಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಾಣಿಗಳು ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಹೇಳಿದೆ. ಈ ಸತ್ತ ಪ್ರಾಣಿಗಳಲ್ಲಿ ಬೆಕ್ಕು, ಕುದುರೆ, ಹಸುಗಳು, ನಾಯಿಗಳು, ರಕೂನ್‌ಗಳು ಪತ್ತೆಯಾಗಿವೆ. ಅವುಗಳಲ್ಲೂ ಸತ್ತ ಪ್ರಾಣಿಗಳಲ್ಲಿ ಹೆಚ್ಚಿನವು ಬೆಕ್ಕುಗಳಾಗಿವೆ. ಬೆಕ್ಕುಗಳು ಲಾಕ್ ಮಾಡಲಾದ ಡಬ್ಬಗಳಲ್ಲಿ ಕಂಡುಬಂದಿವೆ ಎಂದು ವರದಿಯಾಗಿದೆ.