ಡ್ರೈವಿಂಗ್‌ಗೆ ಜಗತ್ತಿನಲ್ಲೇ ಅತಿ ಕಷ್ಟದ ಸಿಟಿ: ಬೆಂಗಳೂರು ನಂ. 11!

By Kannadaprabha NewsFirst Published Sep 21, 2021, 8:31 AM IST
Highlights

* ವಾಹನ ಚಾಲನೆಯ ಒತ್ತಡ

* ಡ್ರೈವಿಂಗ್‌ಗೆ ಜಗತ್ತಿನಲ್ಲೇ ಅತಿ ಕಷ್ಟದ ಸಿಟಿ ಮುಂಬೈ!

* ಜಗತ್ತಿಗೆ ದೆಹಲಿ ನಂ.4, ಬೆಂಗಳೂರು ನಂ.11

ಮುಂಬೈ(ಸೆ. 21): ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮಹಾನಗರವು ಜಗತ್ತಿನಲ್ಲೇ ವಾಹನ ಸವಾರರಿಗೆ ಅತಿಹೆಚ್ಚು ಒತ್ತಡ ಉಂಟುಮಾಡುವ ನಗರ ಎಂಬ ಅಪಖ್ಯಾತಿಗೆ ಪಾತ್ರವಾಗಿದೆ. ಈ ಪಟ್ಟಿಯಲ್ಲಿ ದೆಹಲಿಯು ಜಾಗತಿಕ ಮಟ್ಟದಲ್ಲಿ 4ನೇ ರಾರ‍ಯಂಕ್‌ ಹಾಗೂ ಬೆಂಗಳೂರು 11ನೇ ರಾರ‍ಯಂಕ್‌ ಪಡೆದಿವೆ.

ಬ್ರಿಟನ್‌ನ ಕಾರ್‌ ಶೇರಿಂಗ್‌ ಕಂಪನಿ ‘ಹಯಾಕಾರ್‌’ ಈ ಕುರಿತು ಜಗತ್ತಿನ ಅತ್ಯಂತ ಜನನಿಬಿಡ 36 ದೇಶಗಳಲ್ಲಿ ಸಮೀಕ್ಷೆ ನಡೆಸಿದೆ. ಅವುಗಳ ಪೈಕಿ ವಾಹನ ಸವಾರರಿಗೆ ಅತ್ಯಂತ ಸವಾಲಿನ ನಗರಗಳು ಯಾವುವು ಎಂಬುದನ್ನು ಪಟ್ಟಿಮಾಡಲು ಆಯಾ ನಗರದಲ್ಲಿ ಎಷ್ಟುಕಾರುಗಳಿವೆ, ಎಷ್ಟುವಾಹನಗಳಿವೆ, ಒಬ್ಬರಿಗೆ ಎಷ್ಟುಕಾರಿದೆ, ಟ್ರಾಫಿಕ್‌ ಹೇಗಿರುತ್ತದೆ, ರಸ್ತೆಯ ಗುಣಮಟ್ಟ, ಸಾರ್ವಜನಿಕ ಸಾರಿಗೆಗಳು, ರಸ್ತೆ ಅಪಘಾತಗಳು, ನಗರದ ಜನಸಂಖ್ಯೆ ಮುಂತಾದ ಅಂಶಗಳನ್ನು ಪರಿಗಣಿಸಿ ಯಾವ ನಗರವು ವಾಹನ ಸವಾರರಿಗೆ ಅತ್ಯಂತ ಕಷ್ಟದ ನಗರ ಎಂಬ ರಾರ‍ಯಂಕಿಂಗ್‌ ನೀಡಿದೆ.

ನಗರಗಳಿಗೆ ಒಟ್ಟಾರೆ 10 ಅಂಕ ನಿಗದಿಪಡಿಸಿದ್ದು, ಅದರಲ್ಲಿ ಮುಂಬೈ 7.4 ಅಂಕ ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ದೆಹಲಿ 5.9 ಅಂಕ ಗಳಿಸಿ 4ನೇ ಸ್ಥಾನದಲ್ಲಿದೆ. ಬೆಂಗಳೂರು 4.7 ಅಂಕ ಗಳಿಸಿ 11ನೇ ಸ್ಥಾನದಲ್ಲಿದೆ. ಪೆರುವಿನ ಲಿಮಾ ನಗರ 2.1 ಅಂಕ ಗಳಿಸುವ ಮೂಲಕ ಜಗತ್ತಿನಲ್ಲೇ ವಾಹನ ಚಾಲನೆಗೆ ಅತ್ಯಂತ ನಿರಾಳ ನಗರ ಎಂಬ ಖ್ಯಾತಿ ಪಡೆದಿದೆ.

ವಾಹನ ಸವಾರರಿಗೆ ಅತಿ ಒತ್ತಡದ ಸಿಟಿಗಳು

1. ಮುಂಬೈ, ಭಾರತ

2. ಪ್ಯಾರಿಸ್‌, ಫ್ರಾನ್ಸ್‌

3. ಜಕಾರ್ತಾ, ಇಂಡೋನೇಷ್ಯಾ

4. ದೆಹಲಿ, ಭಾರತ

5. ನ್ಯೂಯಾರ್ಕ್, ಅಮೆರಿಕ

ವಾಹನ ಸವಾರರಿಗೆ ಅತ್ಯಂತ ನಿರಾಳ ನಗರಗಳು

1.ಲಿಮಾ, ಪೆರು

2. ಡೊಂಗುವಾನ್‌, ಚೀನಾ

3. ತಿಯಾಂಜಿನ್‌, ಚೀನಾ

4. ಹಾಂಗ್‌ಜೌ, ಚೀನಾ

5. ಸಾವ್‌ ಪಾಲೋ, ಬ್ರೆಜಿಲ್‌

click me!