ವಾಯುಸೇನೆ ಕಾರ್ಯಕ್ರಮ ವೇದಿಕೆಯಲ್ಲೇ ಎಡವಿಬಿದ್ದ ಅಮೆರಿಕ ಅಧ್ಯಕ್ಷ, ವಿಡಿಯೋ ವೈರಲ್!

By Suvarna NewsFirst Published Jun 2, 2023, 9:29 PM IST
Highlights

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ವಾಯು ಸೇನಾ ಘಟಿಕೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಎಡವಿ ಬಿದ್ದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ದೊಡ್ಡಣ್ಣನ ಸ್ಥಾನ ಕಳಚಿ ಬೀಳುತ್ತಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. 

ಕೊಲೊರಾಡೋ(ಜೂ.02) ಅಮೆರಿಕ ಅಧ್ಯಕ್ಷ ಜೋ ಬೈಡೆನ್ ವೇದಿಕಯಲ್ಲೇ ಎಡವಿ ಬಿದ್ದ ಘಟನೆ ನಡೆದಿದೆ. ಕೊಲೊರಾಡೋದಲ್ಲಿ ಆಯೋಜಿಸಿದ್ದ ವಾಯುಸೇನಾ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ವಿತರಿಸುವ ವೇಳೆ ಬೈಡೆನ್ ಎಡವಿ ಬಿದ್ದಿದ್ದಾರೆ. ತಕ್ಷಣವೇ ನೌಕಾದಳ ಅಧಿಕಾರಿಗಳು ಬೈಡೆನ್ ಹಿಡಿದು ಮೇಲಕ್ಕೆತ್ತಿದ್ದಾರೆ.  ಆದರೆ ಈ ವಿಡಿಯೋ ಇದೀಗ ವೈರಲ್ ಆಗಿದೆ. ಬಿದ್ದ ರಭಸಕ್ಕೆ ಬೈಡೆನ್‌ಗೆ ತಕ್ಷಣ ಮೇಲೇಳಲು ಸಾಧ್ಯವಾಗಿಲ್ಲ. ಅದೃಷ್ಠವಶಾತ್ ಬೈಡೆನ್‌ಗೆ ಯಾವುದೇ ಅಪಾಯ ಆಗಿಲ್ಲ. 

80 ವರ್ಷದ ಬೈಡೆನ್ ವಾಯುಸೇನೆ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾಷಣ ಮಾಡಿದ್ದರು. ಬಳಿಕ ವಾಯುಸೇನಾ ಅಕಾಡೆಮಿಯಲ್ಲಿ ತೇರ್ಗಡೆಯಾದ ಯುವ ಸೇನಾಧಿಕಾರಿಗಳಿಗೆ ಹಸ್ತಲಾಘವ  ಮಾಡಿ ಆಸನಕ್ಕೆ ಮರಳಲು ಮುಂದಾಗಿದ್ದಾರೆ. ವೇದಿಕೆಯಿಂದ ಹೊರನಡೆಯುವ ವೇಳೆ ಜೋ ಬೈಡೆನ್ ಎಡವಿ ಬಿದ್ದಿದ್ದಾರೆ.  

ಯುಎಸ್‌ ಭಾರತೀಯರಿಗೆ ಗುಡ್‌ ನ್ಯೂಸ್‌: ದೀಪಾವಳಿಗೆ ರಾಷ್ಟ್ರೀಯ ರಜೆ ಕೋರಿ ಅಮೆರಿಕ ಸಂಸತ್ತಲ್ಲಿ ಮಸೂದೆ

ಈ ಕುರಿತು ಹೇಳಿಕೆ ನೀಡಿದೆ ವೈಟ್‌ ಹೌಸ್‌ ವಕ್ತಾರ,‘ಇದರಿಂದ ಬೈಡೆನ್‌ ಅವರಿಗೆ ಯಾವುದೇ ರೀತಿಯ ಗಾಯ, ನೋವು ಸಂಭವಿಸಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.ಈ ಹಿಂದೆ ಅವರು ಚುನಾವಣೆಯಲ್ಲಿ ಟ್ರಂಪ್‌ರನ್ನು ಸೋಲಿಸಿದ ಬಳಿಕ ನಾಯಿಯೊಂದಿಗೆ ಆಟವಾಡುವ ವೇಳೆ ಕಾಲಿಗೆ ಏಟು ಮಾಡಿಕೊಂಡಿದ್ದರು. 2020ರ ನವೆಂಬರ್ ತಿಂಗಳಲ್ಲಿ ಕಾಲಿಗೆ ಎಟು ಮಾಡಿಕೊಂಡು ಕೆಲ ದಿನ ವಿಶ್ರಾಂತಿ ಪಡೆದಿದ್ದರು.ವಿಮಾನ ಏರುವಾಗಲೂ ಒಮ್ಮೆ ಎಡವಿದ್ದರು.

 

Joe Biden just had a really bad fall at the U.S. Air Force Academy graduation. Falling like this at his age is very serious. Democrats want us to trust him to be the President until Jan, 2029. If we’re being real we all know that’s insane. He’s in no condition to run. pic.twitter.com/wacE0bojb9

— Robby Starbuck (@robbystarbuck)

 

ಇತ್ತ ಹಲವರು ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಶ್ವದ ದೊಡ್ಡಣ್ಣನ ಸ್ಥಾನ ಕಳಚಿ ಬೀಳುತ್ತಿದೆಯಾ? ಎಂದು ಪ್ರಶ್ನಿಸಿದ್ದಾರೆ.ಅಮೆರಿಕ ಅಧ್ಯಕ್ಷ ಸ್ಥಾನ ಅಲಂಕರಿಸಿದವರ ಪೈಕಿ ಜೋ ಬೈಡೆನ್ ಅತ್ಯಂತ ಹಿರಿಯರಾಗಿದ್ದಾರೆ. ಇದೀಗ ಎರಡನೇ ಬಾರಿಗೆ ಅಧ್ಯಕ್ಷರಾಗಲು ಬೈಡೆನ್ ತಯಾರಿ ನಡೆಸುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಬೈಡೆನ್ ಅಧಿಕೃತ ವೈದ್ಯರು ಫಿಟ್ನೆಸ್ ಕುರಿತು ಮಹತ್ವದ ಹೇಳಿಕೆ ಬಿಡುಗಡೆ ಮಾಡಿದ್ದರು. ಜೋ ಬೈಡನ್ ಅತ್ಯಂತ ಫಿಟ್ ಆಗಿದ್ದು, ಪ್ರತಿ ದಿನವು ವ್ಯಾಯಾಮ ಮಾಡುತ್ತಾರೆ ಎಂದಿದ್ದರು.

ಬೈಡೆನ್‌-ಮೋದಿ ಔತಣಕೂಟದ ಟಿಕೆಟ್‌ಗೆ ಭಾರಿ ಬೇಡಿಕೆ: ಶ್ವೇತಭವನ

ಇತ್ತ ಅಮೆರಿಕದಲ್ಲಿ ಪ್ರಧಾನಿ ಮೋದಿ ಸ್ವಾಗತಕ್ಕೆ ತಯಾರಿ ನಡೆಯುತ್ತಿದೆ.  ಮುಂದಿನ ತಿಂಗಳು ಅಮೆರಿಕ ಪ್ರವಾಸಕ್ಕೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಅಲ್ಲಿರುವ ಭಾರತೀಯರು ಅಮೆರಿಕದ ಪ್ರಮುಖ 20 ನಗರಗಳಲ್ಲಿ ಜೂನ್‌ 18 ರಂದು ‘ಭಾರತೀಯ ಏಕತಾ ದಿವಸ’ ಪಥಸಂಚಲನದ ಮೂಲಕ ಐತಿಹಾಸಿಕವಾಗಿ ಸ್ವಾಗತಿಸಲು ಯೋಜಿಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮತ್ತು ಪ್ರಥಮ ಮಹಿಳೆ ಜಿಲ್‌ ಬೈಡೆನ್‌ ಆಹ್ವಾನದ ಮೇರೆಗೆ ಮೋದಿ ಜೂನ್‌ 22 ರಂದು ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಮೋದಿ ಬೈಡೆನ್‌ ದಂಪತಿಗಳು ತಮಗಾಗಿ ಆಯೋಜಿಸಿರುವ ಔತಣ ಕುಟದಲ್ಲಿ ಭಾಗಿಯಾಗಲಿದ್ದಾರೆ.
 

click me!