ಇಂಡೋನೇಷ್ಯಾದಲ್ಲಿ 6.0 ತೀವ್ರತೆಯ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ ಇಲ್ಲ..!

By BK Ashwin  |  First Published Jan 16, 2023, 1:37 PM IST

ಇಂಡೋನೇಷ್ಯಾದ ಪವನಶಾಸ್ತ್ರ, ಹವಾಮಾನ ಇಲಾಖೆ ಹಾಗೂ ಜಿಯೋಫಿಸಿಕ್ಸ್ ಏಜೆನ್ಸಿ ಈವರೆಗೆ ಯಾವುದೇ ಸುನಾಮಿ ಎಚ್ಚರಿಕೆ ನೀಡಿಲ್ಲ ಎಂದೂ ವರದಿಯಾಗಿದೆ. 


ಜಕಾರ್ತ (ಜನವರಿ 16, 2023): ಇಂಡೋನೇಷ್ಯಾದಲ್ಲಿ ಸೋಮವಾರ ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ. ಪಶ್ಚಿಮ ಇಂಡೋನೇಷ್ಯಾದಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿದುಬಂದಿದೆ. ಸಿಂಗಿಲ್‌ನ ಆಗ್ನೇಯಕ್ಕೆ 48 ಕಿಲೋಮೀಟರ್ (30 ಮೈಲುಗಳು) ದೂರದಲ್ಲಿ ಭೂಕಂಪನದ ಕೆಂದ್ರಬಿಂದು ಕೇಂದ್ರಿಕೃತವಾಗಿದೆ. ಅಲ್ಲದೆ, ಅಚೆ ಪ್ರಾಂತ್ಯದ ಕರಾವಳಿ ಜಿಲ್ಲೆ 48 ಕಿಲೋಮೀಟರ್ (30 ಮೈಲುಗಳು) ಆಳದಲ್ಲಿದೆ ಎಂದೂ ಯುಎಸ್ ಜಿಯೋಲಾಜಿಕಲ್ ಸರ್ವೇ ಹೇಳಿದೆ. ಆದರೆ ಗಂಭೀರ ಹಾನಿ ಅಥವಾ ಸಾವು ನೋವು ಸಂಭವಿಸಿದ ಬಗ್ಗೆ ಈವರೆಗೆ ಯಾವುದೇ ವರದಿಗಳಾಗಿಲ್ಲ. ಇನ್ನು, ಇಂಡೋನೇಷ್ಯಾದ ಪವನಶಾಸ್ತ್ರ, ಹವಾಮಾನ ಇಲಾಖೆ ಹಾಗೂ ಜಿಯೋಫಿಸಿಕ್ಸ್ ಏಜೆನ್ಸಿ ಈವರೆಗೆ ಯಾವುದೇ ಸುನಾಮಿ ಎಚ್ಚರಿಕೆ ನೀಡಿಲ್ಲ ಎಂದೂ ವರದಿಯಾಗಿದೆ. 

ಇಂಡೋನೇಷ್ಯಾದ (Indonesia) ಸ್ಥಳೀಯ ಕಾಲಮಾನ (Local Time) ಸುಮಾರು 6:30 am (2330 GMT) ಭೂಕಂಪ (Earthquake) ಸಂಭವಿಸಿದೆ ಮತ್ತು ಯಾವುದೇ ಸಾವುನೋವುಗಳು ಅಥವಾ ಹೆಚ್ಚಿನ ಹಾನಿಯ ಬಗ್ಗೆ ತಕ್ಷಣದ ವರದಿಗಳಿಲ್ಲ ಅಥವಾ ಸುನಾಮಿ (Tsunami) ಎಚ್ಚರಿಕೆಯೂ ಇಲ್ಲ ಎಂದು ವರದಿಯಾಗಿದೆ. 6.2 ರ  ತೀವ್ರತೆಯ ಭೂಕಂಪನವಾಗಿದೆ ಎಂದು ಇಂಡೋನೇಷ್ಯಾದ ಪವನಶಾಸ್ತ್ರ, ಹವಾಮಾನ ಇಲಾಖೆ ಹಾಗೂ ಜಿಯೋಫಿಸಿಕ್ಸ್ ಏಜೆನ್ಸಿ (Indonesi’s Meteorology, Climatology and Geophysics Agency) (BMKG) ಮಾಹಿತಿ ನೀಡಿದೆ. ಇನ್ನೊಂದೆಡೆ, ಭೂಕಂಪನದ ಕೇಂದ್ರಬಿಂದುವಿನಿಂದ (Epicentre) ಸುಮಾರು 120 ಕಿ.ಮೀ. ದೂರದ ಮೆಡಾನ್‌ನಲ್ಲಿ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರವು ಮಾಹಿತಿ ನೀಡಿದೆ. 

Tap to resize

Latest Videos

ಇದನ್ನು ಓದಿ: ಪ್ರಾಣಿಗಳೇ ಗುಣದಲಿ ಮೇಲು: ಭೂಕಂಪದ ವೇಳೆ ಸ್ನೇಹಿತನ ರಕ್ಷಿಸಿದ ಶ್ವಾನ, ವಿಡಿಯೋ

An earthquake of magnitude 6.1 occurred today at 3.59 am IST in Northern Sumatra, Indonesia: National Center for Seismology pic.twitter.com/o9K76pDiRj

— ANI (@ANI)

ಇಂಡೋನೇಷ್ಯಾ, 270 ಮಿಲಿಯನ್‌ಗಿಂತಲೂ ಹೆಚ್ಚು ಜನರಿರುವ ವಿಶಾಲವಾದ ದ್ವೀಪಸಮೂಹವಾಗಿದ್ದು,  "ರಿಂಗ್ ಆಫ್ ಫೈರ್" ನಲ್ಲಿನ ಸ್ಥಾನದಿಂದಾಗಿ ಅಲ್ಲಿ ಆಗಾಗ್ಗೆ ಟೆಕ್ಟೋನಿಕ್ ಪ್ಲೇಟ್‌ಗಳು ಘರ್ಷಣೆಗೊಳ್ಳುವ ಕಾರಣ ಭೂಕಂಪನ ಮತ್ತು ಜ್ವಾಲಾಮುಖಿ ಅಗಾಗ್ಗೆ ಸಂಭವಿಸುತ್ತಿರುತ್ತದೆ. ನವೆಂಬರ್ 21 ರಂದು ಪಶ್ಚಿಮ ಜಾವಾದ ಸಿಯಾಂಜೂರ್ ನಗರದಲ್ಲಿ ಸಂಭವಿಸಿದ 5.6 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ 331 ಜನರು ಮೃತಪಟ್ಟಿದ್ದರು ಮತ್ತು ಸುಮಾರು 600 ಜನರು ಗಾಯಗೊಂಡಿದ್ದರು. ಕಟ್ಟಡಗಳು ಕುಸಿದುಬಿದ್ದಿದ್ದರಿಂದ ಅಥವಾ ಭೂಕುಸಿತದಿಂದ ಹೆಚ್ಚಿನ ಜನರು ಮೃತಪಟ್ಟಿದ್ದರು. ಇದಕ್ಕೂ ಮುನ್ನ 2018 ರಲ್ಲಿ ಸುಲಾವೆಸಿ ಎಂಬ ಸ್ಥಳದಲ್ಲಿ ಸಂಭವಿಸಿದ್ದ ಭೂಕಂಪ ಮತ್ತು ಸುನಾಮಿಯಲ್ಲಿ ಸುಮಾರು 4,340 ಜನರು ಬಲಿಯಾಗಿದ್ದರು. ಈ ಭೂಕಂಪ, ಸುನಾಮಿಯಲ್ಲಿ ಅತಿ ಹೆಚ್ಚು ಜನರು ಪ್ರಾಣ ಬಿಟ್ಟಿದ್ದರು. 

ಇನ್ನು, 2004 ರಲ್ಲಿ, ಭಾರತ, ಇಂಡೋನೇಷ್ಯಾ ಸೇರಿ ಒಂದು ಡಜನ್ ದೇಶಗಳಲ್ಲಿ ಹಿಂದೂ ಮಹಾಸಾಗರದಲ್ಲಿ ಭೂಕಂಪ ಸಂಭವಿಸಿದ್ದು, 230,000 ಕ್ಕಿಂತ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು. ಅವರಲ್ಲಿ ಹೆಚ್ಚಿನವರು ಇಂಡೋನೇಷ್ಯಾದ ಅಚೆ ಪ್ರಾಂತ್ಯದಲ್ಲಿ ಮೃತಪಟ್ಟಿದ್ದರು ಎಂದು ವರದಿಯಾಗಿತ್ತು. 

ಇದನ್ನೂ ಓದಿ: ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಭೂಕಂಪನ, ಮತ್ತೆ ರಾಜಧಾನಿಯಲ್ಲಿ ಆತಂಕ!

click me!