
ಸ್ಯಾನ್‌ಫ್ರಾನ್ಸಿಸ್ಕೋ: ಅಮೆರಿಕದ ಸಂಸದೀಯ ಸಮಿತಿಯೊಂದು (ಕಾಂಗ್ರೆಸ್ ಸಮಿತಿ) ಅರುಣಾಚಲ ಪ್ರದೇಶವನ್ನು ಭಾರತದ ಅವಿಭಾಜ್ಯ ಅಂಗವೆಂದು ಗುರುತಿಸುವ ಗೊತ್ತುವಳಿಯನ್ನು ಅಂಗೀಕರಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಐತಿಹಾಸಿಕ ಅಮೆರಿಕ ಭೇಟಿಯ ಕೆಲವೇ ದಿನಗಳಲ್ಲಿ ನಡೆದಿರುವ ಈ ವಿದ್ಯಮಾನ ಗಮನಾರ್ಹವಾಗಿದೆ. ಮ್ಯಾಕ್ ಮಹೊನ್ ರೇಖೆಯನ್ನು ಚೀನಾ ಮತ್ತು ಭಾರತದ ಅರುಣಾಚಲ ಪ್ರದೇಶದ ನಡುವಿನ ಅಂತರಾಷ್ಟ್ರೀಯ ಗಡಿಯಾಗಿ ಅಮೆರಿಕ ಗುರುತಿಸುತ್ತದೆ ಎಂದು ನಿರ್ಣಯವು ಪುನರುಚ್ಚರಿಸುತ್ತದೆ. ಇದರಿಂದಾಗಿ ಅರುಣಾಚಲದ ಹೆಚ್ಚಿನ ಭಾಗಗಳು ತನ್ನವು ಎಂಬ ಚೀನಾ ವಾದಕ್ಕೆ ಹಿನ್ನಡೆಯಾಗಿದೆ.
ಈ ಗೊತ್ತುವಳಿಯು ಇನ್ನೊಂದು ಸದನವಾದ ಸೆನೆಟ್‌ನಲ್ಲಿ ಕೂಡ ಪಾಸಾಗಬೇಕು. ಹೀಗಾಗಿ ಮತದಾನ ಪ್ರಕ್ರಿಯೆ ಪೂರ್ಣ ಮತಕ್ಕಾಗಿ ಸೆನೆಟ್‌ಗೆ ಹೋಗಲಿದೆ. ಭಾರತೀಯ ರಾಜ್ಯವಾದ ಅರುಣಾಚಲ ಪ್ರದೇಶವನ್ನು ಭಾರತದ ಗಣರಾಜ್ಯದ ಭಾಗವಾಗಿ ನೋಡುತ್ತದೆ. ಇದರ ಬದಲಾಗಿ ಚೀನಾದ ಭಾಗ ಎಂದಲ್ಲ. ಈ ಗೊತ್ತುವಳಿ ಆದಷ್ಟು ಬೇಗ ಅಂಗೀಕಾರ ಆಗಬೇಕು ಎಂದು ಸಂಸದ ಬಿಲ್ ಹ್ಯಾಗರ್ಟಿ ಹೇಳಿದರು. ಅಲ್ಲದೆ, ಮುಕ್ತ ಇಂಡೋ-ಪೆಸಿಫಿಕ್‌ಗೆ ಚೀನಾ ಗಂಭೀರ ಬೆದರಿಕೆಗಳನ್ನು ಒಡ್ಡುತ್ತಿರುವ ಸಮಯದಲ್ಲಿ, ಅಮೆರಿಕವು ಭಾರತದ ಪರ ನಿಲ್ಲುತ್ತಿರುವುದು ಗಮನಾರ್ಹವಾಗಿದೆ ಎಂದೂ ಹ್ಯಾಗರ್ಟಿ ನುಡಿದರು.
ಹಿಂದೆ ಇಂದು ಮುಂದೆ ಎಂದೆಂದೂ ಅರುಣಾಚಲ ಭಾರತದ ಅವಿಭಾಜ್ಯ ಅಂಗ
ಕಳೆದ ಏಪ್ರಿಲ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿತ್ತು. ಈ ವೇಳೆ ಚೀನಾಗೆ ಭಾರತ ತಿರುಗೇಟು ನೀಡಿದ ಭಾರತ, ಅರುಣಾಚಲ ಪ್ರದೇಶವೂ ಹಿಂದೆ ಇಂದು ಮುಂದೆ ಹಾಗೂ ಎಂದೆಂದೂ ಭಾರತದ ಅವಿಭಾಜ್ಯ ಅಂಗವಾಗಿರಲಿದೆ ಎಂದು ಹೇಳಿತ್ತು. ಚೀನಾದ ವಿದೇಶಾಂಗ ಸಚಿವರಾದ ವಾಂಗ್ ವೆನ್‌ಬಿನ್ (Wang Wenbin) ,ಝಾಂಗ್ನಾನ್(Zangnan) (ಅರುಣಾಚಲ ಪ್ರದೇಶಕ್ಕೆ ಚೀನಾ ಇಟ್ಟಿರುವ ಹೆಸರು) ಚೀನಾದ ಅವಿಭಾಜ್ಯ ಅಂಗ ಎಂದು ಹೇಳಿದ್ದರು.
ಸೂಜಿಮೊನೆಯಷ್ಟು ಜಾಗವನ್ನೂ ಕಬಳಿಸಲಾಗದು: ಅರುಣಾಚಲ ಪ್ರದೇಶದಲ್ಲಿ ಚೀನಾ ವಿರುದ್ಧ ಅಮಿತ್ ಶಾ ಗುಡುಗು
ಈ ಬಗ್ಗೆ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಅವರು , ಅಮಿತ್ ಷಾ ಭೇಟಿಗೆ ಚೀನಾ ವಿರೋಧ ತೋರುವುದಕ್ಕೆ ಯಾವುದೇ ಅರ್ಥವಿಲ್ಲ. ವಿರೋಧ ತೋರಿದ ಕೂಡಲೇ ವಾಸ್ತವ ಬದಲಾಗುವುದಿಲ್ಲ ಎಂದು ಅರಿಂದಮ್ ಬಗ್ಚಿ ಹೇಳಿದ್ದಾರೆ. ಅಮಿತ್ ಷಾ ಭೇಟಿಯನ್ನು ವಿರೋಧಿಸಿದ ಚೀನಾ, ಈ ಭೇಟಿಯೂ ಚೀನಾದ ಪ್ರಾದೇಶಿಕ ಏಕತೆಯ ಉಲ್ಲಂಘನೆಯಾಗಿದೆ. ಹಾಗೂ ಇದು ಗಡಿಯಲ್ಲಿ ಶಾಂತಿ ಹಾಗೂ ನೆಮ್ಮದಿಗೆ ಅನುಕೂಲವಾಗಿಲ್ಲ ಎಂದು ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ, ಚೀನಾದ ಅಧಿಕೃತ ಅಧಿಕಾರಿಗಳು ಅರುಣಾಚಲ ಬಗ್ಗೆ ನೀಡಿದ ಹೇಳಿಕೆಗಳನ್ನು ನಾವು ಖಂಡಿಸುತ್ತೇವೆ ಹಾಗೂ ತಿರಸ್ಕರಿಸುತ್ತೇವೆ. ಭಾರತದ ನಾಯಕರು ಭಾರತದ ಇತರ ರಾಜ್ಯಗಳಿಗೆ ಆಗಾಗ ಹೋಗುತ್ತಿರುವಂತೆ ಅರುಣಾಚಲಕ್ಕೂ ಹೋಗುತ್ತಿರುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಮರು ನಾಮಕರಣ ಮಾಡಿದ ಚೀನಾ: ಮತ್ತೆ ನರಿ ಬುದ್ಧಿ ಪ್ರದರ್ಶಿಸಿದ ಜಿನ್‌ಪಿಂಗ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ