ದಶಕಗಳ ಹಿಂದೆ ಮೈಸೂರಿನ ಮಹಾರಾಜರು ಶ್ರೀಲಂಕಾ ದೇಶಕ್ಕೆ ಉಡುಗೊರೆಯಾಗಿ ನೀಡಿದ ಆನೆಯೊಂದು ಭಾನುವಾರ ಮೃತಪಟ್ಟಿದೆ. ಆನೆಯ ಸಾವಿನ ಬಗ್ಗೆ ದೇಶಾದ್ಯಂತ ಜನರು ಕಂಬನಿ ಮಿಡಿದಿದ್ದಾರೆ.
ಕೊಲಂಬೋ (ಮಾ.14): ದಶಕಗಳ ಹಿಂದೆ ಮೈಸೂರಿನ ಮಹಾರಾಜರು ಶ್ರೀಲಂಕಾ ದೇಶಕ್ಕೆ ಉಡುಗೊರೆಯಾಗಿ ನೀಡಿದ ಆನೆಯೊಂದು ಭಾನುವಾರ ಮೃತಪಟ್ಟಿದೆ. ಆನೆಯ ಸಾವಿನ ಬಗ್ಗೆ ದೇಶಾದ್ಯಂತ ಜನರು ಕಂಬನಿ ಮಿಡಿದಿದ್ದಾರೆ. ರಾಜಾ ಎಂದೇ ಪ್ರಸಿದ್ಧವಾದ ನಡುಂಗಮುವ ವಿಜಯರಾಜ ಎಂಬ ಆನೆಯು ತನ್ನ 68 ನೇ ವಯಸ್ಸಿನಲ್ಲಿ ಮೃತಪಟ್ಟಿದ್ದು, ಏಷ್ಯಾದ ಅತಿದೊಡ್ಡ ಪಳಗಿದ ಆನೆ ಎಂಬ ಖ್ಯಾತಿಯನ್ನು ಹೊಂದಿತ್ತು.
2006ರಿಂದಲೂ ಶ್ರೀಲಂಕಾದ ಕ್ಯಾಂಡಿ ನಗರದಲ್ಲಿ ಜುಲೈ ತಿಂಗಳಿನ ಹುಣ್ಣಿಮೆಯಂದು ನಡೆಯುವ ಎಸಲಾ ಬೌದ್ಧ ಧರ್ಮೀಯರ ಮೆರವಣಿಗೆಯಲ್ಲಿ ಬುದ್ಧನ ದಂತದ ಅವಶೇಷಗಳುಳ್ಳ ಪೆಟ್ಟಿಗೆಯನ್ನು ಹೊತ್ತೊಯ್ಯಲು ರಾಜಾನನ್ನು ಬಳಸಲಾಗುತ್ತಿತ್ತು. ಹೀಗಾಗಿ ರಾಜಾ ಶ್ರೀಲಂಕಾದ ಅತ್ಯಂತ ಪವಿತ್ರವಾದ ಆನೆಯೆಂಬ ಗೌರವಕ್ಕೆ ಪಾತ್ರವಾಗಿತ್ತು.
ಶ್ರೀಲಂಕಾದ ರಾಷ್ಟ್ರಾಧ್ಯಕ್ಷ ಗೋಟಬಯ ರಾಜಪಕ್ಸೆ, ರಾಜಾನ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದು, ಅದನ್ನು ‘ರಾಷ್ಟ್ರೀಯ ಸಂಪತ್ತು’ ಎಂದು ಘೋಷಿಸಿದ್ದಾರೆ. ಬೌದ್ಧ ಧರ್ಮದ ಪ್ರಕಾರ ಆನೆಯ ಅಂತಿಮ ಕ್ರಿಯೆಯನ್ನು ನೇರವೇರಿಸಲಾಗಿದ್ದು, ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ವಿದಾಯ ನೀಡಲಾಗುವುದು ಎಂದಿದ್ದಾರೆ. ಅಲ್ಲದೇ ಮುಂದಿನ ಪೀಳಿಗೆಗಾಗಿ ಆನೆಯ ಅವಶೇಷಗಳನ್ನು ಸಂರಕ್ಷಿಸಿಡುವಂತೆ ಆದೇಶಿಸಿದ್ದಾರೆ.
ತಾಯಾನೆ ಹಾಲಿಗೆ ಮರಿಗಳೆರಡರ ಕಿತ್ತಾಟ... ಅಮ್ಮ ಏನ್ಲಾಡಿದ್ಲು ನೋಡಿ...!(https://kannada.asianetnews.com/world-news/baby-elephants-fight-over-milk-video-viral-akb-r6x7d4)
ಯಾವುದೀ ಆನೆ: ರಾಜಾ ಮೈಸೂರಿನಲ್ಲಿ 1953ರಲ್ಲಿ ಜನಿಸಿತ್ತು. ತೀವ್ರ ಕಾಯಿಲೆಯಿಂದ ಬಳಲುತ್ತಿದ್ದ ಮೈಸೂರು ಮಹಾರಾಜನ ಸಂಬಂಧಿಯೋರ್ವನಿಗೆ ಶ್ರೀಲಂಕಾದ ಬೌದ್ಧ ಸನ್ಯಾಸಿಯು ಚಿಕಿತ್ಸೆ ನೀಡಿ ಗುಣಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಆಭಾರ ಸ್ವರೂಪವಾಗಿ ಮೈಸೂರಿನ ಮಹಾರಾಜರು ರಾಜಾನನ್ನು ಉಡುಗೊರೆಯಾಗಿ ನೀಡಿದ್ದರು.
ದೊಡ್ಡದಾದ ಹೊಂಡಕ್ಕೆ ಬಿದ್ದ ಆನೆ: ಮರಿಯಾನೆಯೊಂದು ಅರಣ್ಯದಲ್ಲಿ ಸಾಗುತ್ತಿದ್ದ ವೇಳೆ ದೊಡ್ಡದಾದ ಕಂದಕಕ್ಕೆ ಬಿದ್ದಿದ್ದು ಇದನ್ನು ಅರಣ್ಯ ಸಿಬ್ಬಂದಿ ಊರವರ ಸಹಾಯದಿಂದ ಸಾಹಸ ಮಾಡಿ ಮೇಲೆತ್ತಿದ್ದಾರೆ. ಮರಿಯಾನೆಯನ್ನು ರಕ್ಷಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಂದಕಕ್ಕೆ ಬಿದ್ದ ಮರಿಯಾನೆಯನ್ನು ಮೇಲೆತ್ತಲೂ ಇಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಭೌತಶಾಸ್ತ್ರವನ್ನು ಬಳಸಿದ್ದಾರೆ. ಹೌದು ದೊಡ್ಡದಾದ ಕಂದಕಕ್ಕೆ ನೀರು ತುಂಬಿಸಿ ಜೊತೆಗೆ ದೊಡ್ಡದಾದ ಹಗ್ಗಗಳನ್ನು ಕೆಳಗೆ ಬಿಟ್ಟು ಅದರ ಸಹಾಯದಿಂದ ಆನೆ ಮೇಲೆ ಬರುವಂತೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ(West Bengal) ಎಳೆಯ ಆನೆಯೊಂದು ಆಳವಾದ ಕಂದಕಕ್ಕೆ ಬಿದ್ದಿದ್ದು ಅದನ್ನು ಹೊರತರಲು ಅರಣ್ಯ ಅಧಿಕಾರಿಗಳು ಕೆಲವು ಭೌತಶಾಸ್ತ್ರ ತಂತ್ರವನ್ನು ಪ್ರಯೋಗಿಸಿದರು. ಆರ್ಕಿಮಿಡಿಸ್ ತತ್ವವನ್ನು ಅನ್ವಯಿಸಿ,ಅರಣ್ಯ ಸಿಬ್ಬಂದಿ ಈ ಹೊಂಡವನ್ನು ನೀರಿನಿಂದ ತುಂಬಿಸಿದರು. ಇದರ ಮೂಲಕ ಆನೆಯೂ ಅಂತಿಮವಾಗಿ ಸುರಕ್ಷಿತವಾಗಿ ಹೊರಬರಲು ಸಹಾಯ ಮಾಡಿದರು. ಇಂಟರ್‌ನೆಟ್‌ನಲ್ಲಿ ಸುತ್ತು ಹೊಡೆಯುತ್ತಿರುವ ಈ ವೀಡಿಯೊದಲ್ಲಿ, ಎಳೆಯ ಪ್ರಾಯದ ಆನೆಯು ಆಳವಾದ ಕಂದಕದೊಳಗೆ ಹೆಣಗಾಡುತ್ತಿರುವುದನ್ನು ಕಾಣಬಹುದು, ಅದು ತನ್ನ ಸೊಂಡಿಲನ್ನು ಬಳಸಿ ಹೊಂಡದಿಂದ ಹೊರಬರಲು ಪ್ರಯತ್ನಿಸುತ್ತಿದೆ.
Kodagu: ನಂಜರಾಯಪಟ್ಟಣ ತೋಟದಲ್ಲಿ ಅಸ್ವಸ್ಥ ಕಾಡಾನೆಗೆ ಚಿಕಿತ್ಸೆ
ಆದಾಗ್ಯೂ, ಅದರ ದೇಹದ ಭಾರದಿಂದ ಮೇಲೆರುವ ಪ್ರಕ್ರಿಯೆಗೆ ಅಡ್ಡಿಯಾಗುತ್ತಲೇ ಇತ್ತು. ಹೀಗಾಗಿ ಈ ಆನೆಗೆ ತೇಲಲು ಸಹಾಯ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಗುಂಡಿಗೆ ನೀರನ್ನು ತುಂಬಿಸುತ್ತಾರೆ. ಬಳಿಕ ಹಲವಾರು ಹಗ್ಗಗಳ ಮೂಲಕ ಆನೆ ಮೇಲೆ ಬರಲು ಸಹಾಯ ಮಾಡುವುದನ್ನು ವೀಡಿಯೊದಲ್ಲಿ ಕಾಣಬಹುದು. ಜಿಲ್ಲಾ ಅರಣ್ಯ ಅಧಿಕಾರಿ (ಡಿಎಫ್‌ಒ) ಸಂದೀಪ್ ಬೆರ್ವಾಲ್ (Sandeep Berwal) ಪ್ರಕಾರ, ಮಧ್ಯರಾತ್ರಿಯ ನಂತರ ಮೇದಿನಿಪುರ ಜಿಲ್ಲೆಯ (Medinipur) ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಆನೆ ಕಂದಕದಿಂದ ಹೊರಗೆ ಬಂದಿರುವುದನ್ನು ಖಚಿತಪಡಿಸಿದರು.