ಬಟಾಟೆ, ಟೊಮಾಟೋ ರೇಟ್ ನೋಡೋಕೆ ರಾಜಕೀಯಕ್ಕೆ ಬಂದಿಲ್ಲ ಎಂದ ಪಾಕ್ ಪ್ರಧಾನಿ Imran Khan!

Suvarna News   | Asianet News
Published : Mar 14, 2022, 12:00 AM IST
ಬಟಾಟೆ, ಟೊಮಾಟೋ ರೇಟ್ ನೋಡೋಕೆ ರಾಜಕೀಯಕ್ಕೆ ಬಂದಿಲ್ಲ ಎಂದ ಪಾಕ್ ಪ್ರಧಾನಿ Imran Khan!

ಸಾರಾಂಶ

ಟೊಮಾಟೋ, ಬಟಾಟೆ ರೇಟ್ ನೋಡೋಎ ರಾಜಕೀಯಕ್ಕೆ ಬಂದಿಲ್ಲ ದೇಶದ ಯುವಜನತೆಗಾಗಿ ರಾಜಕೀಯವನ್ನು ಆಯ್ಕೆ ಮಾಡಿಕೊಂಡೆ ದೇವರ ದಯೆಯಿಂದ ನನ್ನಲ್ಲಿ ಎಲ್ಲವೂ ಇದೆ ಎಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್

ನವದೆಹಲಿ (ಮಾ.13): ಪಾಕಿಸ್ತಾನದಲ್ಲಿ  (Pakistan) ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿರುವ ಹೊತ್ತಿನಲ್ಲಿಯೇ ಪ್ರಧಾನಿ ಇಮ್ರಾನ್ ಖಾನ್ ( PM Imran Khan ) ಆಡಿರುವ ಮಾತುಗಳು ಪಾಕಿಸ್ತಾನ ಜನತೆಯ ನಿದ್ದೆಗೆಡೆಸಿದೆ. ಭಾನುವಾರ ಹಫೀಜಾಬಾದ್ ನಲ್ಲಿ(Hafizabad ) ಸಮಾವೇಶದಲ್ಲಿ ಪಾಲ್ಗೊಂಡಿದ್ದ ಇಮ್ರಾನ್ ಖಾನ್, ಪ್ರತಿದಿನದ ಟೊಮಾಟೋ, ಬಟಾಟೆ ಬೆಲೆ ಏನಿರಲಿದೆ ಎನ್ನುವುದನ್ನ ತಿಳಿಯೋ ಸಲುವಾಗಿ ತಾವು ರಾಜಕೀಯಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.

ದೇಶದ ಯುವಜನತೆಯನ್ನು ನೋಡಿದ ಬಳಿಕ ನಾನು ರಾಜಕೀಯಕ್ಕೆ ಇಳಿಯಲು ತೀರ್ಮಾನಿಸಿದ್ದೆ ಎಂದಿದ್ದಾರೆ. ಪಂಜಾಬ್‌ನ ಹಫೀಜಾಬಾದ್‌ನಲ್ಲಿ ಒಂದು ದಿನದ ಭೇಟಿಗಾಗಿ ಹೋಗಿದ್ದ ಸಂದರ್ಭದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವ ವೇಳೆ ಇಮ್ರಾನ್ ಖಾನ್ ಈ ಹೇಳಿಕೆ ನೀಡಿದ್ದಾರೆ. 25 ವರ್ಷಗಳ ಹಿಂದೆ, ದೇಶದ ಯುವಕರ ಹಿತದೃಷ್ಟಿಯಿಂದ ರಾಜಕೀಯಕ್ಕೆ ಸೇರಲು ನಿರ್ಧಾರ ಮಾಡಿದ್ದೆ ಎಂದು ಹೇಳಿದ ಪ್ರಧಾನಿ, ಜೀವನದಲ್ಲಿ ಒಬ್ಬ ವ್ಯಕ್ತಿಯು ಕನಸು ಕಾಣಬಲ್ಲ ಎಲ್ಲವನ್ನು ನಾನು ಆಗಲೇ ಹೊಂದಿದ್ದೆ. ರಾಜಕೀಯಕ್ಕೆ ಯಾವುದೇ ಲಾಭದ ಕಾರಣಕ್ಕಾಗಿ ಬಂದಿರಲಿಲ್ಲ ಎಂದರು.

"ಆಲೂಗಡ್ಡೆ (potatoes ) ಮತ್ತು ಟೊಮೆಟೊ (tomatoes) ಬೆಲೆಗಳನ್ನು ತಿಳಿಯಲು ನಾನು ರಾಜಕೀಯಕ್ಕೆ ಸೇರಲಿಲ್ಲ, ದೇಶದ ಯುವಜನತೆಗಾಗಿ ನಾನು ರಾಜಕೀಯಕ್ಕೆ ಸೇರಿದೆ" ಎಂದು ಪ್ರಧಾನಿ ಹೇಳಿದರು. "ನಾವು ಮಹಾನ್ ರಾಷ್ಟ್ರವಾಗಬೇಕಾದರೆ, ನಾವು ಸತ್ಯವನ್ನು ಬೆಂಬಲಿಸಬೇಕು ಮತ್ತು ಇದನ್ನು ನಾನು ಕಳೆದ 25 ವರ್ಷಗಳಿಂದ ಬೋಧಿಸುತ್ತಿದ್ದೇನೆ." ಎಂದಿದ್ದಾರೆ.
ಐರೋಪ್ಯ ಒಕ್ಕೂಟದ ರಾಯಭಾರಿಗಳ (European Union envoys) ವಿರುದ್ಧ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ವಿವಿಧ ಪಕ್ಷಗಳ ನಾಯಕರು ತಮ್ಮನ್ನು ಹೇಗೆ ಟೀಕಿಸಿದರು ಎನ್ನುವ ವಿಚಾರದಲ್ಲಿ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಇಮ್ರಾನ್ ಖಾನ್, ಹಿಂದೆ, ಪಾಕಿಸ್ತಾನದ ಪ್ರಧಾನಿಗಳು ಅವರು ಯುಎಸ್ ಅಧ್ಯಕ್ಷರನ್ನು ( US president )  ಭೇಟಿಯಾದಾಗಲೆಲ್ಲಾ "ಭಯದಿಂದ ನಡುಗುತ್ತಿದ್ದರು" ಎಂದು ಹೇಳಿದರು. ಬಿಲಾವಲ್‌ನ "ಕಾನ್‌ಪೇಂ ತಾಂಗ್ ರಹೀ ಹೋತಿ ಥೀನ್" ಎಂಬ ಸ್ವರವನ್ನು ಉದಾಹರಣೆಯಾಗಿ ನೀಡಿದರು.

ಮೌಲಾನಾ ಫಜ್ಲುರ್ ರೆಹಮಾನ್ (  Maulana Fazlur Rehman ), ಶಹಬಾಜ್ ಷರೀಫ್ (Shahbaz Sharif ) ಮತ್ತು ಬಿಲಾವಲ್ ಭುಟ್ಟೋ-ಜರ್ದಾರಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಯುರೋಪಿಯನ್ ಯೂನಿಯನ್ ರಾಯಭಾರಿಗಳನ್ನು ದೂಷಿಸುವುದು "ಗಂಭೀರ ಅನ್ಯಾಯ" ಎಂದು ಭಾವಿಸಿದ್ದಾರೆ ಎಂದು ಇಮ್ರಾನ್ ಖಾನ್ ಹೇಳಿದರು. ಆದರೆ,  "ಇಯು ಕುರಿತ ನನ್ನ ಟೀಕೆ ಸಮರ್ಥನೀಯವಾಗಿದೆ ಎಂದು ತಿಳಿಸಿದ್ದಾರೆ.

Russia Ukraine Crisis: ಪುಟಿನ್ ಎದುರು ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಪಾಕ್ ಪ್ರಧಾನಿ!
ವಿದೇಶಿ ರಾಜತಾಂತ್ರಿಕರು ತಮ್ಮನ್ನು ಭೇಟಿಯಾಗಲು ಬಂದಾಗಲೆಲ್ಲಾ ಅವರು ಬೇಗನೆ ಸೂಟು ಮತ್ತು ಟೈಗೆ ಬದಲಾಗುತ್ತಾರೆ ಎಂದು ಶಹಬ್ಬಾಸ್ ವಿರುದ್ಧ ಇಮ್ರಾನ್ ಖಾನ್ ಟೀಕೆ ಮಾಡಿದರು. "ನಾನು ಎಲ್ಲರಿಗಿಂತಲೂ ಪಶ್ಚಿಮದ ದೇಶಗಳನ್ನು ಚೆನ್ನಾಗಿ ತಿಳಿದಿರುವ ಕಾರಣ, ಅವರು ತಮ್ಮ ಬೂಟುಗಳನ್ನು ಪಾಲಿಶ್ ಮಾಡುವ ಜನರನ್ನು ಗೌರವಿಸುವುದಿಲ್ಲ ಎಂದು ನಾನು ಭರವಸೆ ನೀಡಬಲ್ಲೆ" ಎಂದು ಅವರು ಹೇಳಿದರು. "ತಮಗಾಗಿ ನಿಲ್ಲುವ ರಾಷ್ಟ್ರಗಳನ್ನು ಅವರು ಗೌರವಿಸುತ್ತಾರೆ."

Russia Ukraine Crisis: ಜವಾಬ್ದಾರಿಯುತ ದೇಶವಾಗಿ ವರ್ತಿಸಿ, ಪಾಕಿಸ್ತಾನಕ್ಕೆ ಅಮೆರಿಕ ಪ್ರತಿಕ್ರಿಯೆ
ಪ್ರಧಾನಿ ಇಮ್ರಾನ್ ಖಾನ್ ಅವರು ಭಯೋತ್ಪಾದನೆ ವಿರುದ್ಧದ ಯುಎಸ್ ಯುದ್ಧ ಮತ್ತು ಪಾಕಿಸ್ತಾನದಲ್ಲಿ ನಂತರದ ಡ್ರೋನ್ ದಾಳಿಯ ಬಗ್ಗೆ ಮಾತನಾಡಿದ್ದಾರೆ, ಇದನ್ನು "ಮಾನವ ಹಕ್ಕುಗಳ ಉಲ್ಲಂಘನೆ" ಎಂದು ಕರೆದರು. ಕಳೆದ 30 ವರ್ಷಗಳಿಂದ ಲಂಡನ್‌ನಲ್ಲಿ ವಾಸಿಸುತ್ತಿರುವ “ಭಯೋತ್ಪಾದಕ” ಬಗ್ಗೆಯೂ ಮಾತನಾಡಿದ ಅವರು, ಯುಎಸ್ ಡ್ರೋನ್‌ಗಳಿಂದ ಕೊಲ್ಲಲ್ಪಟ್ಟವರಿಗಿಂತ ಹೆಚ್ಚು ಜನರನ್ನು ಕೊಲ್ಲಲು ಈ ಭಯೋತ್ಪಾದಕ ಕಾರಣ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ