Sri Lankan Man Lynched To Death In Pakistan: ಪಾಕ್‌ ಹಿಂಸೆಗೆ ಬಲಿಯಾದ ಲಂಕಾ ಪ್ರಜೆಯ ದೇಹದ ಶೇ.99 ಮೂಳೆ ಪುಡಿಪುಡಿ

By Kannadaprabha NewsFirst Published Dec 6, 2021, 3:00 AM IST
Highlights

ಶ್ರೀಲಂಕಾ ಪ್ರಜೆ ಪ್ರಿಯಾಂಥಾ ಕುಮಾರ್‌ ಅವರಿಗೆ ಸಾವಿಗೂ ಮುನ್ನ ಭೀಕರ ಚಿತ್ರಹಿಂಸೆ ನೀಡಲಾಗಿತ್ತು. ಬೆನ್ನು ಮೂಳೆ ಸೇರಿ ಬಹುತೇಕ ಶೇ.99ರಷ್ಟುಮೂಳೆಗಳನ್ನೂ ಮುರಿಯಲಾಗಿತ್ತು ಎಂದು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗಗೊಂಡಿದೆ. ಮುಖ್ಯವಾಗಿ ತಲೆ ಬುರುಡೆ ಮತ್ತು ದವಡೆಯನ್ನು ಮರಿದಿರುವುದೇ ಸಾವಿಗೆ ಕಾರಣ. ಕ್ರೂರಿ ಪಾಕ್‌ನ ಕ್ರೌರ್ಯವಿದು

ಲಹೋರ್‌(ಡಿ.06): ಪಾಕಿಸ್ತಾನದ(Pakistan) ಪಂಜಾಬ್‌ ಪ್ರಾಂತ್ಯದಲ್ಲಿ ಧರ್ಮನಿಂದನೆ ಆರೋಪಕ್ಕೆ ಗುರಿಯಾಗಿ ಗುಂಪೊಂದು ಬಡಿದು ಕೊಂದ ಶ್ರೀಲಂಕಾ ಪ್ರಜೆ ಪ್ರಿಯಾಂಥಾ ಕುಮಾರ್‌ ಅವರಿಗೆ ಸಾವಿಗೂ ಮುನ್ನ ಭೀಕರ ಚಿತ್ರಹಿಂಸೆ ನೀಡಲಾಗಿತ್ತು. ಬೆನ್ನು ಮೂಳೆ ಸೇರಿ ಬಹುತೇಕ ಶೇ.99ರಷ್ಟುಮೂಳೆಗಳನ್ನೂ ಮುರಿಯಲಾಗಿತ್ತು ಎಂದು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗಗೊಂಡಿದೆ. ಮುಖ್ಯವಾಗಿ ತಲೆ ಬುರುಡೆ ಮತ್ತು ದವಡೆಯನ್ನು ಮರಿದಿರುವುದೇ ಸಾವಿಗೆ ಕಾರಣ. ಅಲ್ಲದೆ ಅವರ ಎಲ್ಲಾ ಅಂಗಾಂಗ, ಯಕೃತ್ತು, ಹೊಟ್ಟೆ, ಮೂತ್ರಪಿಂಡಗಳೂ ತೀವ್ರ ಗಾಸಿಗೊಂಡಿದ್ದವು. ದೇಹದಾದ್ಯಂತ ಚಿತ್ರಹಿಂಸೆಯ ಗುರುತು ಪತ್ತೆಯಾಗಿವೆ. ಬೆನ್ನು ಹುರಿಯೂ ಮೂರು ಕಡೆಗಳಲ್ಲಿ ಮುರಿದಿತ್ತು. ಶೇ.99ರಷ್ಟುಮೃತದೇಹವನ್ನು ಸುಟ್ಟುಹಾಕಲಾಗಿತ್ತು ಎಂದು ತಿಳಿಸಿದೆ.

ಶುಕ್ರವಾರ ಖುರಾನ್‌ ವಾಕ್ಯಗಳುಳ್ಳ ಪೋಸ್ಟರ್‌ ಹರಿದು ಕಸದ ತೊಟ್ಟಿಯಲ್ಲಿ ಎಸೆದಿದ್ದ ಆರೋಪದಲ್ಲಿ ಉದ್ರಿಕ್ತ ಗುಂಪು ಗಾರ್ಮೆಂಟ್ಸ್‌ ಕಾರ್ಖಾನೆ ಮ್ಯಾನೇಜರ್‌ ಪ್ರಿಯಾಂಥಾ ಅವರನ್ನು ಬಡಿದು ಕೊಂದು, ಪೊಲೀಸರು ಬರುವ ಮುಂಚೆಯೇ ಸುಟ್ಟು ಹಾಕಿತ್ತು. ಪ್ರಕರಣ ಸಂಬಂಧ ಪಾಕ್‌ ಸರ್ಕಾರ 800ಕ್ಕೂ ಹೆಚ್ಚು ಜನರ ಮೇಲೆ ಭಯೋತ್ಪಾದನೆ ದೂರು ದಾಖಲಿಸಿದೆ.13 ಪ್ರಮುಖ ಆರೋಪಿಗಳು ಸೇರಿ 118 ಜನರನ್ನು ಬಂಧಿಸಿದೆ. ಈ ನಡುವೆ ಪ್ರಕರಣದಲ್ಲಿ ಆಪಾದಿತರಿಗೆ ಕಠಿಣ ಶಿಕ್ಷೆ ನೀಡುವುದಾಗಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಶ್ರೀಲಂಕಾ ಅಧ್ಯಕ್ಷರಿಗೆ ಕರೆ ಮಾಡಿ ಅಭಯ ನೀಡಿದ್ದಾರೆ.

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟಕ್ಕೆ 13 ಮಂದಿ ಬಲಿ, ಹಲವರು ಕಣ್ಮರೆ

100ಕ್ಕೂ ಹೆಚ್ಚು ಜನರ ಬಂಧನ

ಘಟನೆಯ ನಂತರ ಪಾಕಿಸ್ತಾನದಲ್ಲಿ (Pakistan) 100 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಶನಿವಾರ ಹೇಳಿದ್ದಾರೆ. ಈ ದಾಳಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಪ್ರಧಾನಿ ಇಮ್ರಾನ್ ಖಾನ್ (Imran Khan) ಇದು ಪಾಕಿಸ್ತಾನಕ್ಕೆ ಅವಮಾನದ ದಿನ ಎಂದಿದ್ದು,  ಘಟನೆ ಬಗ್ಗೆ ಶ್ರೀಲಂಕಾ (Sri Lankan) ಅಧ್ಯಕ್ಷರೊಂದಿಗೆ ಮಾತನಾಡಿದ್ದೇನೆ.  ಘಟನೆಗೆ ಕಾರಣರಾದ ಯಾರನ್ನೂ ಬಿಡುವುದಿಲ್ಲ. ಮೃತ ಪ್ರಿಯಾಂತ ದಿಯಾವದನ ಕುಮಾರ (Priyantha Diyawadana)  ಕುಟುಂಬಕ್ಕೆ ಸಂಪೂರ್ಣ ನ್ಯಾಯ ಒದಗಿಸುವುದಾಗಿ ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ಪಾಕ್ ಸರಕಾರ ಈ ಉಗ್ರ ಸಂಘಟನೆಯ ಮೇಲಿನ ನಿಷೇಧವನ್ನು ತೆರವುಗೊಳಿಸಿತ್ತು. ಇದರ ಬೆನ್ನಲ್ಲೇ ಸಂಘಟನೆ ಈ ಘೋರ ಕೃತ್ಯ ಎಸಗಿದೆ. ಪಾಕಿಸ್ತಾನದಲ್ಲಿ ನೂರಾರು ಲಂಕಾ ಪ್ರಜೆಗಳು ಕೆಲಸ ಮಾಡುತ್ತಿದ್ದು, ಈ ಘಟನೆ ನಡೆದ ಬಳಿಕ ಎಲ್ಲರ ಭದ್ರತೆ ಬಗ್ಗೆ ಅವರ ಕುಟುಂಬದವರಿಗೆ ಆತಂಕ ಶುರುವಾಗಿದೆ. ಎರಡೂ ದೇಶಗಳ ರಾಜತಾಂತ್ರಿ ಸಿಬ್ಬಂದಿ ಈ ವಿಚಾರದ ಬಗ್ಗೆ ಗಮನ ಹರಿಸಿರುವುದು ತಿಳಿದುಬಂದಿದೆ. ಶ್ರೀಲಂಕಾ ಮತ್ತು ಪಾಕಿಸ್ತಾನ ಮಿತ್ರರಾಷ್ಟ್ರ ಮಾತ್ರವಲ್ಲ, ಎರಡೂ ದೇಶಗಳ ಮಧ್ಯೆ ಸಾಕಷ್ಟು ವಾಣಿಜ್ಯ ವ್ಯವಹಾರ ಚಟುವಟಿಕೆಗಳು ನಡೆಯುತ್ತವೆ. ಆಮದು ಮತ್ತು ರಫ್ತು ಹೆಚ್ಚಾಗಿ ಈ ದೇಶಗಳ ಮಧ್ಯೆ ಇದೆ.

ಪಾಕಿಸ್ತಾನಕ್ಕೆ ಮುಜುಗರದ ದಿನ:

ಸರ್ಬಿಯಾದಲ್ಲಿರುವ ದೇಶದ ರಾಯಭಾರಿ ಕಚೇರಿಯ ಟ್ವಿಟರ್ ಹ್ಯಾಂಡಲ್‌ನಲ್ಲಿ ನನ್ನನ್ನು ಕ್ಷಮಿಸಿ, ಇಮ್ರಾನ್ ಖಾನ್, ನನಗೆ ಇನ್ನೊಂದು ಆಯ್ಕೆ ಉಳಿದಿಲ್ಲ ಎಂಬ ಶೀರ್ಷಿಕೆಯೊಂದಿಗೆ ವಿಡಂಬನಾತ್ಮಕ ವೀಡಿಯೊವನ್ನು ಪೋಸ್ಟ್ ಮಾಡಿದ ನಂತರ ಪಾಕಿಸ್ತಾನವು ಮುಜುಗರದ ಪರಿಸ್ಥಿತಿಯಲ್ಲಿ ಸಿಲುಕಿದೆ. ನಮ್ಮ ಮಕ್ಕಳನ್ನು ಶುಲ್ಕ ಪಾವತಿಸದ ಕಾರಣದಿಂದ ಶಾಲೆಯಿಂದ ಹೊರಕ್ಕೆ ತಳ್ಳಿರುವಾಗ, ಕಳೆದ ಮೂರು ತಿಂಗಳಿಂದ ಸಂಬಳ ನೀಡದೆ ನಾವು ಎಷ್ಟು ದಿನ ಮೌನವಾಗಿ ನಿಮಗಾಗಿ ಕೆಲಸ ಮಾಡುವುದನ್ನು ಮುಂದುವರಿಸಬೇಕೆಂದು ನೀವು ಬಯಸುತ್ತೀರಿ? ಇದು ಪಾಕಿಸ್ತಾನದ ಹೊಸ ಯುಗವೇ? ಎಂದು ಟ್ವೀಟ್ ಮಾಡಲಾಗಿತ್ತು.

ಆರ್ಥಿಕ ಬಿಕ್ಕಟ್ಟಿನ ಮಧ್ಯೆ ದೊಡ್ಡ ಮಿಲಿಟರಿ ಖರೀದಿಯಲ್ಲಿ ತೊಡಗಿರುವ ಇಮ್ರಾನ್ ಖಾನ್ ಸರ್ಕಾರಕ್ಕೆ ಈ ವಿಚಾರ ಭಾರೀ ಮುಜುಗರವನ್ನುಂಟುಮಾಡಿದೆ. ಹಣದುಬ್ಬರವು ಸರ್ಕಾರದ ಕಾರ್ಯನಿರ್ವಹಣೆಯನ್ನು ಹೇಗೆ ಕುಂಠಿತಗೊಳಿಸಿದೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸಿದೆ.

click me!