Indonesia volcano eruption:ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟಕ್ಕೆ 13 ಮಂದಿ ಬಲಿ, ಹಲವರು ಕಣ್ಮರೆ

By Suvarna NewsFirst Published Dec 5, 2021, 4:07 PM IST
Highlights
  • ಜಾವಾ ದ್ವೀಪದ ಅತ್ಯಂತ ಎತ್ತರದ ಪರ್ವತವಾದ ಸೆಮೆರುನಲ್ಲಿ ಜ್ವಾಲಾಮುಖಿ ಸ್ಫೋಟ
  • ಪೂರ್ವ ಜಾವಾ ಪ್ರಾಂತ್ಯದ ಹಳ್ಳಿಗಳನ್ನು ಆವರಿಸಿದ ಲಾವರಸ
  • ಜ್ವಾಲಾಮುಖಿ ಸ್ಫೋಟದ ಬೆನ್ನಲ್ಲೇ ಭೂಕಂಪನ 

ಲುಮಾಜಾಂಗ್ (ಡಿ.5): ಇಂಡೋನೇಷ್ಯಾದಲ್ಲಿ ನಡೆದ ಜ್ವಾಲಾಮುಖಿ ಸ್ಫೋಟದಲ್ಲಿ (volcanic eruption) ಕನಿಷ್ಠ 13 ಮಂದಿ ಬಲಿಯಾಗಿದ್ದಾರೆಂದು ತಿಳಿದುಬಂದಿದೆ.   ಜಾವಾ ದ್ವೀಪದ ಅತ್ಯಂತ ಎತ್ತರದ ಪರ್ವತವಾದ ಸೆಮೆರುನಲ್ಲಿ ಜ್ವಾಲಾಮುಖಿ ಸ್ಫೋಟಿಸಿದೆ. ಇದು ಇತ್ತೀಚಿನ ದಿನಗಳಲ್ಲಿ ನಡೆದ ಅತಿ ದೊಡ್ಡ ಸ್ಫೋಟ ಎಂದು ಪರಿಗಣಿಸಲಾಗಿದ್ದು, ಜ್ವಾಲಾಮುಖಿಯಿಂದಾಗಿ ಆಗಸದೆತ್ತರ ದಟ್ಟ ಹೊಗೆ ಆವರಿಸಿದೆ. ಜ್ವಾಲಾಮುಖಿ ಸ್ಪೋಟಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ವಿಪತ್ತು ನಿರ್ವಹಣಾ ತಂಡ ನೂರಾರು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿ ರಕ್ಷಣೆ ಮಾಡಿದ್ದಾರೆ. ಘಟನೆಯಲ್ಲಿ ಹಲವರು ಕಣ್ಮರೆಯಾಗಿದ್ದು, ಹುಡುಕಾಟ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.  ಗಂಭೀರವಾಗಿ ಗಾಯಗೊಂಡಿರುವವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. 

ಸೆಮೇರು ಪರ್ವತದಲ್ಲಿ (Mount Semeru) ಜ್ವಾಲಾಮುಖಿ (volcano) ಸ್ಪೋಟಗೊಂಡ ಬಳಿಕ ಲಾವಾ ರಸವು ಹತ್ತಿರದಲ್ಲಿದ್ದ ಪೂರ್ವ ಜಾವಾ ಪ್ರಾಂತ್ಯದ (East Java province) ಹಳ್ಳಿಗಳನ್ನು ಆವರಿಸಿದ್ದು ಜನರು ಭಯಭೀತರಾಗಿ ಓಡಿ ಹೋಗಿದ್ದಾರೆ. ಜನರು ಪ್ರಾಣಾಪಾಯದಿಂದ ಪಾರಾಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಜ್ವಾಲಾಮುಖಿ ಸ್ಫೋಟದಿಂದಾಗಿ ಜಾವಾ ಪ್ರಾಂತ್ಯದ ಹತ್ತಿರದ ನಗರಗಳಾದ ಲಮಾಂಗ್ ಮತ್ತು ಮಲಂಗ್ ನಡುವಿನ ಸೇತುವೆ ಕುಸಿತಗೊಂಡಿದೆ. ಸೇತುವೆ ಕುಸಿದಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಎಂದು ತಿಳಿದುಬಂದಿದೆ.

Mount Semeru Volcano in East Java today. One at least is reported to have been killed with many more injured and the local towns covered in volcanic dust clouds. In some places it turned day into night as the town plunged into complete darkness as the sun was blocked off. pic.twitter.com/X95GC4qrDV

— 𝙎𝙊𝙃𝙀𝙇 ✪ (@ImSohel09)

 

ದುರಂತದಲ್ಲಿ ಸಾವನ್ನಪ್ಪಿದ್ದ 13 ಮಂದಿಯಲ್ಲಿ ಇಬ್ಬರನ್ನು ಮಾತ್ರ ಈವರೆಗೆ ಗುರುತಿಸಲಾಗಿದೆ. ಇಬ್ಬರು ಗರ್ಭಿಣಿಯರು ಸೇರಿದಂತೆ ತೊಂಬತ್ತೆಂಟು ಜನರು ಗಾಯಗೊಂಡಿದ್ದು, 50ಕ್ಕೂ ಹೆಚ್ಚು ಮಂದಿಗೆ ಗಂಭೀರ ಸುಟ್ಟ ಗಾಯಗಳಾಗಿವೆ ಮತ್ತು 902 ಜನರನ್ನು ಸ್ಥಳಾಂತರಿಸಲಾಗಿದೆ  ಎಂದು ವಿಪತ್ತು ನಿರ್ವಹಣಾ ತಂಡದ ಅಧಿಕಾರಿ ಅಬ್ದುಲ್ ಮುಹಾರಿ ತಿಳಿಸಿದ್ದಾರೆ. 

ನ್ಯೂಜಿಲೆಂಡ್‌ನಲ್ಲಿ ಜ್ವಾಲಾಮುಖಿಗೆ ಭಾರತದ ದಂಪತಿ ಬಲಿ

ಜಾವಾ ದ್ವೀಪದ (java island) ಅತ್ಯಂತ ಎತ್ತರದ ಪರ್ವತವಾದ ಸೆಮೆರು 3,600 ಮೀ ಎತ್ತರವಿದ್ದು, 40,000 ಅಡಿ ಎತ್ತರದಲ್ಲಿ ಶನಿವಾರದಿಂದಲೇ ದಟ್ಟ ಹೊಗೆ, ದೂಳನ್ನು ಹೊರಸೂಸುತ್ತಿತ್ತು. ಸುಮೇರು  ಇಂಡೋನೇಷ್ಯಾದ 130 ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ. ಕಳೆದ ಜನವರಿಯಲ್ಲಿ ಸೆಮೆರು ಪರ್ವತ ಸ್ಫೋಟಗೊಂಡಿತ್ತು. ಅದಕ್ಕೂ ಮುನ್ನ 2017 ಮತ್ತು 2019ರಲ್ಲಿ ಸ್ಫೋಟಗಳು ಸಂಭವಿಸಿದ್ದವು. ವರ್ಷಕ್ಕೆ ಎರಡು ಬಾರಿ ಸಿಡಿಯುವ ಈ ಪರ್ವತದಲ್ಲಿ ಇತ್ತೀಚೆಗೆ ವರ್ಷದಲ್ಲಿ ಹಲವು ಬಾರಿ ಜ್ವಾಲಾಮುಖಿ ಸ್ಫೋಟಗೊಳ್ಳುತ್ತಿದೆ. 

ಸರ್ಕಾರವೇ ಕ್ಲಿಕ್ಕಿಸಿದ ಜ್ವಾಲಾಮುಖಿ ಫೋಟೋದಲ್ಲಿ ಸೆರೆಯಾದ ಯುಎಫ್‌ಓ?

ಶನಿವಾರ ಕನಿಷ್ಠವೆಂದರೂ ಎರಡು ಬಾರಿ ಅನಿಲ ಹಾಗೂ ಲಾವಾರಸ 800 ಮೀಟರ್‌ಗಳಷ್ಟು ದೂರ ಸಾಗಿ ಸಮೀಪದ ನದಿ ನೀರಿಗೆ ಸೇರಿಕೊಂಡಿದೆ. ಈ ಅಗ್ನಿಪರ್ವತದಿಂದ ಐದು ಕಿಮೀ ದೂರ ಅಂತರ ಕಾಪಾಡಿಕೊಳ್ಳುವಂತೆ ಸಮೀಪದ ನಿವಾಸಿಗಳಿಗೆ ಸೂಚನೆ ನೀಡಲಾಗಿದೆ. ಜ್ವಾಲಾಮುಖಿ ಸ್ಫೋಟಗೊಂಡ ಬಳಿಕ ಭಾನುವಾರ ಇಂಡೋನೇಷ್ಯಾದ ಉತ್ತರ ಸುಲವೆಸಿ ಭಾಗದಲ್ಲಿ ಭೂಕಂಪ ಸಂಭವಿಸಿದೆ.  ರಿಕ್ಟರ್ ಪಾಮಕದಲ್ಲಿ 6.2ರಷ್ಟು ತೀವ್ರತೆ ದಾಖಲಾಗಿದೆ.  

6 ಸಾವಿರ ಅಡಿ ಎತ್ತರಕ್ಕೆ ಹೊಗೆಯುಗುಳುತ್ತಿದೆ ಜ್ವಾಲಾಮುಖಿ ಬೆಟ್ಟ!

ಜ್ವಾಲಾಮುಖಿ ಎಂದರೇನು?: ಜ್ವಾಲಾಮುಖಿ ಭೂಮಿಯ ಮೇಲ್ಮೈ ಅಥವಾ ಚಿಪ್ಪಿನಲ್ಲಿರುವ ಒಂದು ಬಿರುಕು. ಇಂತಹ ಬಿರುಕಿನ ಮೂಲಕ ಭೂಗರ್ಭದಿಂದ ಕುದಿಯುವ ದ್ರವರೂಪದಲ್ಲಿನ ಕಲ್ಲುಗಳು, ಬೂದಿ ಮತ್ತು ಇತರ ಅನಿಲಗಳು ಹೊರಗೆ ಚಿಮ್ಮುತ್ತವೆ. ಸಾಮಾನ್ಯವಾಗಿ ಘನರೂಪದಲ್ಲಿ ಅಥವಾ ದ್ರವರೂಪದಲ್ಲಿರುವ ಕಲ್ಲುಗಳನ್ನು ಹೊರ ಉಗುಳುವ ಇಂತಹ ಜ್ವಾಲಾಮುಖಿಗಳು ಪರ್ವತದ ಶಿಖರಭಾಗದಲ್ಲಿರುತ್ತವೆ. ಈ ಜ್ವಾಲಾಮುಖಿಗಳ ರೂಪುಗೊಳ್ಳುವಿಕೆ ಬಲು ದೀರ್ಘ ಕಾಲದ ಪ್ರಕ್ರಿಯೆ. ಜ್ವಾಲಾಮುಖಿಯನ್ನು ವಲ್ಕೆನೋಗಳೆಂದೂ ಕರೆಯುತ್ತಾರೆ. ಭೂಮಿಯ ತಳಭಾಗದಿಂದ ದೊಡ್ಡ ಬಿರುಕುಗಳ ಮೂಲಕ, ಕಾದು ಕರಗಿರುವ ಪದಾರ್ಥಗಳನ್ನು ಉಗುಳುವ ಪರ್ವತಗಳೇ ಅಗ್ನಿಪರ್ವತಗಳು.

click me!