
ಕೊಲೊಂಬೊ(ಜು.12): ಶ್ರೀಲಂಕಾ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗಿದೆ. ಪ್ರಧಾನಿ ರನಿಲ್ ವಿಕ್ರಮಸಿಂಘೆ ರಾಜೀನಾಮೆ ನೀಡಿದ ಬಳಿಕ ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆ ನೀಡಲು ಪಟ್ಟು ಹಿಡಿದ ನಾಗರೀಕರು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಭಾರಿ ಪ್ರತಿಭಟಟನೆ, ಒತ್ತಡದ ಬಳಿಕ ಗೊಟಬಯ ರಾಜಪಕ್ಸ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಪತ್ರಕ್ಕೆ ಸಹಿ ಹಾಕಿದ್ದಾರೆ. ಗೌಪ್ಯ ಸ್ಥಳದಿಂದಲೇ ಗೊಟಬಯ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿರುವ ಗೊಟಬಯ, ರಹಸ್ಯವಾಗಿ ಶ್ರೀಲಂಕಾ ಹಿರಿಯ ಅಧಿಕಾರಿಗೆ ರವಾನಿಸಿದ್ದಾರೆ. ಹಿರಿಯ ಅಧಿಕಾರಿ ನಾಳೆ(ಜು.13) ಸ್ಪೀಕರ್‌ಗೆ ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆ ಪತ್ರ ನೀಡಲಿದ್ದಾರೆ. ಆದರೆ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಇದೀಗ ಗೊಟಬಯಗೆ ಬಂಧನ ಭೀತಿ ಕಾಡುತ್ತಿದೆ. ಶ್ರೀಲಂಕಾದಲ್ಲಿ ಅರಾಜಕತೆ ಸೃಷ್ಟಿಸಿದ, ಸರ್ಕಾರ ಪಡೆದ ಬ್ಯಾಂಕ್ ಸಾಲವನ್ನು ಕುಟುಂಬಕ್ಕೆ ಬಳಸಿದ ಸೇರಿದಂತೆ ಹಲವು ಆರೋಪಗಳು ಗೊಟಬಯ ಮೇಲಿದೆ. ಇದು ಮುಳ್ಳಾಗುವ ಸಾಧ್ಯತೆ ಇದೆ. ಹೀಗಾಗಿ ರಾಜೀನಾಮೆಗೂ ಮೊದಲೇ ದುಬೈಗೆ ಪಲಾಯನ ಮಾಡಲು ಗೊಟಬಯ ರಾಜಪಕ್ಸ ಹಾಗೂ ಕುಟುಂಬ ತೀವ್ರ ಯತ್ನ ನಡೆಸಿರುವ ಮಾಹಿತಿ ಬಹಿರಂಗವಾಗಿದೆ.
ಗೊಟಬಯ ರಾಜಪಕ್ಸ ಜುಲೈ 13ಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಲು ಮತ್ತೊಂದು ಕಾರಣವಿದೆ. ಜುಲೈ 13 ಗುರು ಪೂರ್ಣಿಮಾ ದಿನವಾಗಿದೆ. ಹೀಗಾಗಿ ಈ ದಿನ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಆದರೆ ಶ್ರೀಲಂಕಾ(Sri Lanka Crisis) ಅಧಿಕಾರಿಗಳ ಮೂಲಗಳ ಪ್ರಕಾರ ಜನರು ದಂಗೆ ಎದ್ದ ಬೆನ್ನಲ್ಲೇ ರಹಸ್ಯ ಸ್ಥಲಕ್ಕೆ ಪಲಾಯನ ಮಾಡಿದ್ದ ಗೊಟಬಯ ಹಾಗೂ ಕುಟುಂಬ ದುಬೈಗೆ ಪರಾರಿಯಾಗಲು ಪ್ರತಿ ದಿನ ಯತ್ನಿಸಿದ್ದಾರೆ ಅನ್ನೋ ಮಾಹಿತಿ ಬಹಿರಂಗವಾಗಿದೆ.
ಲಂಕಾ ಅಧ್ಯಕ್ಷ ಗೊಟಬಯ ಸಹೋದರ, ಮಾಜಿ ಸಚಿವ ದುಬೈ ಹಾರಲು ಯತ್ನ, ಜನರಿಂದ ತಡೆ!
ಹೀಗಾಗಿ ರಾಜೀನಾಮೆ ನೀಡಲು ಮೀನಾಮೇಷ ಎಣಿಸಿದ್ದಾರೆ. ರಾಜೀನಾಮೆ ನೀಡಿದರೆ ಬಂಧನ ಖಚಿತ ಎಂದು ಅರಿತಿರುವ ಗೊಟಬಯ ರಾಜಪಕ್ಸ(Sri Lanka President) ಅಧ್ಯಕ್ಷನಾಗಿರುವಾಗಲೇ ತಮ್ಮ ಅಧಿಕಾರ ಬಳಸಿ ಸುರಕ್ಷಿತವಾಗಿ ದುಬೈಗೆ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಗೊಟಬಯ ಯತ್ನಕ್ಕೆ ಅಧಿಕಾರಿಗಳು ಅಡ್ಡಗಾಲು ಹಾಕಿದ್ದಾರೆ. ಇದರಿಂದ ಇದೀಗ ಗೊಟಬಯ ಬೇರೆ ದಾರಿ ಕಾಣದೆ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿ ಪತ್ರ ರವಾನಿಸಿದ್ದಾರೆ. ಒಂದು ಮೂಲಗಳ ಪ್ರಕಾರ ಗೊಟಬಯ ರಾಜಪಕ್ಸ ಮಿಲಿಟರಿ ಬೇಸ್ ಕ್ಯಾಂಪ್‌ನಲ್ಲಿ ಉಳಿದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ರಾಜೀನಾಮೆ ಪತ್ರ ಅಂಗೀಕಾರವಾದ ಬೆನ್ನಲ್ಲೇ ಮಿಲಿಟರಿ ಬೇಸ್ ಕ್ಯಾಂಪ್‌ನಿಂದ ಜಾಗ ಖಾಲಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಕೊಲೊಂಬೊ ಏರ್‌ಪೋರ್ಟ್ ಸಮೀಪದಲ್ಲಿರುವ ಮಿಲಿಟರಿ ಏರ್‌ಬೇಸ್‌ನಲ್ಲಿ ಒಂದು ರಾತ್ರಿ ಇಡೀ ಎಚ್ಚರದಿಂದ ಕಳೆದಿದ್ದಾರೆ. ಆದರೆ ಗೊಟಬಯ ರಾಜಪಕ್ಸ ಹಾಗೂ ಅವರ ಪತ್ನಿ ದುಬೈಗೆ ಪರಾರಿಯಾಗಲು ಶ್ರೀಲಂಕಾ ಇಮಿಗ್ರೇಷನ್ ಅಧಿಕಾರಿ ಅವಕಾಶ ನೀಡಿಲ್ಲ. ದುಬೈಗೆ ಪ್ರಯಾಣ ಮಾಡಲು ಇಮಿಗ್ರೇಷನ್ ಅಧಿಕಾರಿ ಅನುಮತಿ ನೀಡಿಲ್ಲ. ಹೀಗಾಗಿ ಕೊಲೊಂಬೊದಿಂದ ಆ ದಿನ ರಾತ್ರಿ 4 ವಿಮಾನ ದುಬೈಗೆ ಹಾರಿದೆ. ಆದರೆ ಗೊಟಬಯ ಹಾಗೂ ಕುಟುಂಬ ಬೇಸ್ ಕ್ಯಾಂಪ್‌ನಲ್ಲಿ ಕಾದಿದ್ದಾರೆ.
ಲಂಕಾ ಬಿಕ್ಕಟ್ಟು ನಿರ್ವಹಣೆಗೆ ಸೇನೆ ರವಾನೆ ಇಲ್ಲ: ಭಾರತ ಸ್ಪಷ್ಟನೆ
ಸದ್ಯ ಸ್ಪೀಕರ್ ಆಗಿರುವ ಮಹೀಂದ ಯಪಾ ಅಬೆಯವರ್ದನ ಮುಂದಿನ ಅಧ್ಯಕ್ಷರಾಗಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಸರ್ವ ಪಕ್ಷ ಸಭೆಯಲ್ಲಿ ಮಹಿಂದ ಯಪಾ ಅಧ್ಯಕ್ಷರಾಗಲು ಹೆಚ್ಚಿನ ಮಂದಿ ಒಲವು ತೋರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ