ಶ್ವಾನಗಳ ಗುಡ್ಡಗಾಡು ಓಟ... ವಿಡಿಯೋ ವೈರಲ್

By Anusha KbFirst Published Apr 24, 2022, 4:13 PM IST
Highlights
  • ಅಂಗವೈಖಲ್ಯಕ್ಕೆ ಒಳಗಾದ ಶ್ವಾನಗಳ ರಕ್ಷಿಸುತ್ತಿರುವ ಟ್ರೇಸಿ ಫೌಲರ್
  • ಅವುಗಳಿಗೆ ಗಾಲಿಕುರ್ಚಿ ಅಳವಡಿಸಿ ಓಡಾಡುವಂತೆ ಮಾಡಿದ ಟ್ರೇಸಿ
  • ಈಗ ಕಾಡುಗಳಲ್ಲೂ ಅಲೆದಾಡುವ ಕೈಕಾಲಿಲ್ಲದ ಶ್ವಾನಗಳು

ಕೈಕಾಲು ಕಳೆದುಕೊಂಡು ಅಂಗವೈಖಲ್ಯಕ್ಕೆ ಒಳಗಾದ ಶ್ವಾನಗಳ ಗುಂಪೊಂದು ಟ್ರಕ್ಕಿಂಗ್ ಹೊರಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ನಾಯಿಗಳನ್ನು ದತ್ತು ಪಡೆದಿರುವ ಅಮೆರಿಕಾದ (United State) ವರ್ಮೊಂಟ್‌(Vermont) ನಿವಾಸಿ ಟ್ರೇಸಿ ಫೌಲರ್ (Tracey Fowler) ಅವುಗಳು ಸ್ವ ಸಾಮರ್ಥ್ಯದಿಂದ ನಡೆಯುವಂತಾಗಲು ಅವುಗಳಿಗೆ ಯಂತ್ರಗಳನ್ನು ಅಳವಡಿಸಿದ್ದಾರೆ.

ಈ ವಿಡಿಯೋವನ್ನು ಫ್ರೆಡ್ ಷುಲ್ಟ್ಜ್ (Fred Schultz) ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ವಿಶೇಷ ಸಾಮರ್ಥ್ಯವುಳ್ಳ ನಾಯಿಮರಿಗಳ ಗುಂಪು ತಮ್ಮ ವಿಶಿಷ್ಟ ಗಾಲಿಕುರ್ಚಿಗಳಲ್ಲಿ ಅರಣ್ಯ ಪ್ರದೇಶದಲ್ಲಿ ರೌಂಡ್‌ ಹಾಕುವುದನ್ನು ಕಾಣಬಹುದು. 

ಶ್ವಾನಕ್ಕಾಗಿ ದೇಗುಲವನ್ನೇ ನಿರ್ಮಿಸಿದ ತಮಿಳುನಾಡಿನ ವ್ಯಕ್ತಿ

ಯುಎಸ್‌ನ ವರ್ಮೊಂಟ್‌ನಿಂದ ಟ್ರೇಸಿ ಫೌಲರ್ ದತ್ತು ಪಡೆದ ಹಲವಾರು ನಾಯಿಗಳನ್ನು ಈ ವೀಡಿಯೊ ಒಳಗೊಂಡಿದೆ. ಫೌಲರ್ ಹರ್ಡ್ ಎಂದು ಕರೆಯಲ್ಪಡುವ ಟ್ರೇಸಿಯ ಈ ಶ್ವಾನ ಕುಟುಂಬವು ಈಗ ಎಂಟು ಸದಸ್ಯರನ್ನು ಒಳಗೊಂಡಿದೆ. ತನ್ನ ಪ್ರೀತಿಯ ಸಾಕುನಾಯಿ ತೀರಿಕೊಂಡ ನಂತರ ಟ್ರೇಸಿ ಈ ವಿಶೇಷ ಅಗತ್ಯವುಳ್ಳ ನಾಯಿಗಳನ್ನು ರಕ್ಷಿಸಲು ಪ್ರಾರಂಭಿಸಿದರು. ಈಗ ಅವರು ಇಂತಹ ಅನೇಕ ಶ್ವಾನಗಳ ಹೆಮ್ಮೆಯ ಅಮ್ಮ ಆಗಿದ್ದಾರೆ. 

ಯಜಮಾನನನ್ನು ಕಳೆದುಕೊಂಡ ಶ್ವಾನದ ಮೌನ ರೋಧನೆ

ವೀಡಿಯೋದಲ್ಲಿ, ನಾಯಿಗಳು ತಮ್ಮ ದೇಹಕ್ಕೆ ಗಾಲಿಕುರ್ಚಿಗಳನ್ನು ಜೋಡಿಸಿಕೊಂಡು ಸಂತೋಷದಿಂದ ಓಡುತ್ತಿರುವುದನ್ನು ಕಾಣಬಹುದು. ಅನೇಕ ನಾಯಿಗಳು ಪಾರ್ಶ್ವವಾಯು ಅಥವಾ ಕೈಕಾಲುಗಳಿಲ್ಲದೇ ಬಳಲುತ್ತಿರುವುದನ್ನು ಕಾಣಬಹುದು. ಆದರೆ ಗಾಲಿಕುರ್ಚಿಗಳಿಂದಾಗಿ ಈ ನಾಯಿಗಳು ಇತರ ಎಲ್ಲಾ ಶ್ವಾನಗಳಂತೆ ಖುಷಿ ಪಡುತ್ತಿರುವುದನ್ನು ನೋಡಬಹುದು. ಈ ವೀಡಿಯೊವನ್ನು ಒಂದು ಲಕ್ಷಕ್ಕಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ನಾಯಿಮರಿಗಳಿಗೆ ಉತ್ತಮ ಜೀವನವನ್ನು ನೀಡಿದ್ದಕ್ಕಾಗಿ ಟ್ರೇಸಿಯನ್ನು ಶ್ಲಾಘಿಸಿದ್ದಾರೆ.

They took it off road…nothing can stop them. 😜🐶💪🦽 pic.twitter.com/dNsM1CeUuE

— Fred Schultz (@FredSchultz35)

ಕೆಲ ದಿನಗಳ ಹಿಂದೆ ಹುಟ್ಟಿನಿಂದಲೇ ಬಂಧನಕ್ಕೊಳಗಾಗಿ ನಡೆಯಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದ ಗೋಲ್ಡನ್ ರಿಟ್ರೈವರ್ ನಾಯಿಮರಿಯೊಂದನ್ನು ಅಯೋವಾ (Iowa) ರಾಜ್ಯದ ಪಶುವೈದ್ಯ ಪ್ರಾಧ್ಯಾಪಕ ಡಾ. ರಾಡ್ ಬ್ಯಾಗ್ಲೆ (Dr. Rod Bagley) ರಕ್ಷಣೆ ಮಾಡಿ ಅದಕ್ಕೆ ನಡೆಯಲು ಕಲಿಸಿದ್ದರು.ಡಾ. ಬಾಗ್ಲಿ ಅವರಿಗೆ ಸಿಕ್ಕಿದ ಶ್ವಾನ ಡೋರಿ ತನ್ನ ಜೀವನದುದ್ದಕ್ಕೂ ಗೂಡಿನಲ್ಲೇ ಬಂಧಿಯಾಗಿದ್ದ ಶ್ವಾನಗಳಲ್ಲಿ ಒಂದಾಗಿದೆ. ಇದನ್ನು ಬಂಧಮುಕ್ತಗೊಳಿಸಿದರೂ ಅದಕ್ಕೆ ಡೋರಿಗೆ ನಿಲ್ಲಲು ಕೂಡ ಸಾಧ್ಯವಾಗುತ್ತಿರಲಿಲ್ಲ ಬದಲಿಗೆ ಡೋರಿ ತೆವಳಲು ಶುರು ಮಾಡಿದ್ದಳು.

ಡೋರಿಯ ಸಮಸ್ಯೆ ಏನೆಂದರೆ ಆಕೆಗೆ ನಡೆಯಲು ಅಥವಾ ನಿಲ್ಲಲು ಸಹ ತಿಳಿದಿಲ್ಲ ಎಂದು ಡಾ. ರಾಡ್ ಬ್ಯಾಗ್ಲೆ  ಔಟ್ಲೆಟ್‌ಗೆ ತಿಳಿಸಿದರು. ಹೀಗಾಗಿ ಡಾ.ಬಾಗ್ಲಿ ತನ್ನ ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡುತ್ತಾ, ಆಕೆಗೆ ನೇರವಾಗಿ ನಿಲ್ಲುವುದು ಮತ್ತು ನಡೆಯುವುದು ಹೇಗೆ ಎಂದು ಕಲಿಸಲು ಡೋರಿಯನ್ನು ಈಜುಕೊಳದಲ್ಲಿ ಬಿಟ್ಟರು. ಕೊಳದಲ್ಲಿನ ನೀರು ಅವಳ ದೇಹವನ್ನು ಬೆಂಬಲಿಸಿತು ಈ ವೇಳೆ ಮೇಲೆ ಉಳಿಯಲು ಡೋರಿ ತೋರಿದ ಪ್ರತಿರೋಧ ಅವಳ ಕಾಲುಗಳನ್ನು ಬಲಪಡಿಸಿತು ಎಂದು ಡಾ.ಬಾಗ್ಲಿ ಹೇಳಿದರು. ತಿಂಗಳ ನಂತರ ಡೋರಿ ಈಗ ಸಾಧಾರಣ ನಾಯಿಯಂತೆ ನಿಲ್ಲಲು, ನಡೆಯಲು ಮತ್ತು ಆಟವಾಡಲು ಸಮರ್ಥವಾಗಿದೆ. ಮತ್ತು ಅದಕ್ಕಿಂತ ಹೆಚ್ಚಾಗಿ, ಡಾ.ಬಾಗ್ಲಿ ಡೋರಿಯನ್ನು ದತ್ತು ಪಡೆದರು. ಅಲ್ಲದೇ ಡೋರಿ ಬಯಸಬಹುದಾದ ಎಲ್ಲಾ ಪ್ರೀತಿ ಮತ್ತು ಸ್ನೇಹವನ್ನು ಅದಕ್ಕೆ ನೀಡಲು ಅವರು ಸಿದ್ದರಾಗಿದ್ದಾರೆ. ಒಟ್ಟಿನಲ್ಲಿ ಪ್ರಾಣಿಗಳು ನಮ್ಮಂತೆಯೇ ಅವರಿಗೂ ಪ್ರೀತಿ ಬೇಕು ಎಂಬುದು ಈ ವಿಚಾರದಿಂದ ಸಾಬೀತಾಗಿದೆ. 

click me!