ಹೊಸ ಹೊಸ ವೃತ್ತಿಗಳು ಹುಟ್ಟಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ, ಯುವಕನೊಬ್ಬ ಮದುವೆ ಮುರಿಯುವುದನ್ನೇ ವೃತ್ತಿಯಾಗಿ ಆಯ್ದುಕೊಂಡು ಗಮನ ಸೆಳೆದಿದ್ದಾನೆ. ಗ್ರಾಹಕರಿಂದ ಹಣ ಪಡೆದು, ನಂಬಲಾಗದ ರೀತಿಯಲ್ಲಿ ಮದುವೆಗಳನ್ನು ರದ್ದುಗೊಳಿಸುವ ಈತನ ಕಾರ್ಯವೈಖರಿ ಅಚ್ಚರಿ ಮೂಡಿಸುತ್ತದೆ.
ವಾಷಿಂಗ್ಟನ್: ಕಳೆದ ಒಂದು ದಶಕದಿಂದ ಹೊಸ ವೃತ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಉದ್ಯೋಗಗಳು ವಿಚಿತ್ರ ಅನ್ನಿಸಿದರೂ, ಇಂತಹ ವೃತ್ತಿಗಳನ್ನು ಆಯ್ಕೆ ಮಾಡಿಕೊಂಡವರು ಕೈ ತುಂಬಾ ಹಣ ಸಂಪಾದಿಸುತ್ತಿದ್ದಾರೆ. ಮೊದಲು ಮದುವೆ ಅಂದ್ರೆ ಎರಡು ಕುಟುಂಬಗಳು ಹಾಗೂ ಆಪ್ತರೇ ನಿಂತುಕೊಂಡು ಎಲ್ಲಾ ಕಾರ್ಯಗಳನ್ನು ಮಾಡುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದ್ದು, ಮದುವೆಯಲ್ಲಿ ಶಾಮಿಯಾನ ಹಾಕೋರು, ಅಡುಗೆ ಮಾಡುವವರು, ಕಾಣಿಕೆಗಳನ್ನು ನೀಡಲು ಮತ್ತು ಅತಿಥಿಗಳ ಸ್ವಾಗತಕ್ಕಾಗಿಯೇ ಜನರನ್ನು ನೇಮಿಸಲಾಗುತ್ತದೆ. ವೆಡ್ಡಿಂಗ್ ಪ್ಲಾನ್‌ರ್ ಎಂಬ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಹುಟ್ಟಿಕೊಂಡಿವೆ. ಆದ್ರೆ ಇಲ್ಲೋರ್ವ ಮದುವೆ ಮುರಿಯುವ ಕೆಲಸ ಮಾಡುತ್ತಿದ್ದಾನೆ. ಆತ ಹೇಳಿದಷ್ಟು ಶುಲ್ಕ ಪಾವತಿಸಿದರೆ ಮದುವೆಯನ್ನು ನಿಲ್ಲಿಸುವ ಕೆಲಸ ಮಾಡುತ್ತಾನೆ.
ಸ್ಪೇನ್ ಮೂಲದ ಯುವಕನೋರ್ವ ಮದುವೆ ಮುರಿಯೋದನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದಾನೆ ಎಂದರೆ ನೀವು ನಂಬಲೇಬೇಕು. ಮದುವೆ ಮುರಿಯುವ ಗ್ಯಾರಂಟಿ ನೀಡುವ ಈತ ತನ್ನ ಮಾತನ್ನು ಉಳಿಸಿಕೊಳ್ಳಲು ಯಶಸ್ವಿಯಾಗುತ್ತಾನೆ. 35-40 ವರ್ಷದ ಆಸುಪಾಸಿನಲ್ಲಿರುವ ಈ ವ್ಯಕ್ತಿ ತನ್ನ ವೃತ್ತಿಯಿಂದ ವಿಶ್ವದ ಗಮನವನ್ನು ತನ್ನತ್ತ ಸೆಳೆಯುತ್ತಿದ್ದಾನೆ. ಸೋಶಿಯಲ್ ಮೀಡಿಯಾದ ಖಾತೆಯಲ್ಲಿ ಈ ವ್ಯಕ್ತಿ ತನ್ನ ವೃತ್ತಿ ಬಗ್ಗೆ ಹೇಳಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾನೆ.
ಆಡಿಟಿ ಸೆಂಟ್ರಲ್ ವೆಬ್‌ಸೈಟ್ ಪ್ರಕಾರ, ಈ ವ್ಯಕ್ತಿಯ ಹೆಸರು ಅರ್ನೆಸ್ಟೋ. ತನ್ನ ವಿಚಿತ್ರ ಕೆಲಸದಿಂದ ಗಮನ ಸೆಳೆದಿರುವ ಈತ, ಕೆಲವರು ತಮ್ಮ ಮದುವೆಯನ್ನು ಅತ್ಯಂತ ಖುಷಿಯಾಗಿರುತ್ತಾರೆ. ಒಂದಿಷ್ಟು ಜನರ ಪಾಲಿಗೆ ಮದುವೆ ಅನ್ನೋದು ಕೆಟ್ಟ ಕನಸು ಆಗಿರುತ್ತದೆ ಎಂದು ಹೇಳುತ್ತಾನೆ. ಅರ್ನೆಸ್ಟೋ ಒಂದು ಮದುವೆ ಮುರಿಯಲು 550 ಯುಎಸ್ ಡಾಲರ್ (46,135 ರೂ) ಪಡೆಯುತ್ತಾನೆ. ಸರಿಯಾದ ಸಮಯಕ್ಕೆ ಬಂದು ಮದುವೆ ಮುರಿಯುತ್ತಾನೆ. ಇದೇ ಶುಲ್ಕದಲ್ಲಿಯೇ ಅರ್ನೆಸ್ಟೋ ಪ್ರಯಾಣದ ಶುಲ್ಕ ಸೇರ್ಪಡೆಯಾಗಿರುತ್ತದೆ. ಅರ್ನೆಸ್ಟೋ ತನ್ನ ಗ್ರಾಹಕರ ಮೇಲೆ ಪ್ರಯಾಣದ ಶುಲ್ಕ ಹೇರಲ್ಲ. ಮದುವೆ ಸೀಸನ್‌ನಲ್ಲಿ ಅರ್ನೆಸ್ಟೋ ಫುಲ್ ಬ್ಯುಸಿಯಾಗಿರುತ್ತಾನೆ.
ಫೈಸ್ಟ್ ನೈಟ್‌ನಲ್ಲಿ ಹೂಗಳಿಂದ ತುಂಬಿದ ಮಂಚದ ಮೇಲೆ ನಾಚುತ್ತಾ ಕುಳಿತಿದ್ಳು: ಮುಖ ನೋಡಿ ಆಧಾರ್ ಕಾರ್ಡ್ ಕೇಳಿದ ವರ
ಮದುವೆ ಹೇಗೆ ಮುರಿಯುತ್ತೆ?
ಮದುವೆಗೆ ಸರಿಯಾಗಿ ತೆರಳುವ ಅರ್ನೆಸ್ಟೊ, ಮದುವೆಯಾಗುತ್ತಿರುವ ವರ ಅಥವಾ ವಧು ಎಂದು ಪರಿಚಯಿಸಿಕೊಳ್ಳುತ್ತಾನೆ. ಎಲ್ಲರ ಮುಂದೆ ತನ್ನನ್ನು ಮದುವೆಯಾಗುವಂತೆ ಪ್ರಪೋಸ್ ಮಾಡುತ್ತಾನೆ. ಗ್ರಾಹಕರಿಂದ ಮೊದಲೇ ವಧು/ವರನ ಕುರಿತ ಎಲ್ಲಾ ಮಾಹಿತಿ ಸಂಗ್ರಹಿಸಿರುತ್ತಾನೆ. ಕೆಲವು ಖಾಸಗಿ ವಿಷಯಗಳನ್ನು ಹೇಳುತ್ತಾ ನೈಜ ಪ್ರೇಮಿಯಂತೆ ಗೋಳಾಡುತ್ತಾ ನಾಟಕ ಮಾಡುತ್ತಾನೆ. ನೋಡುಗರು ಈತ ನಿಜವಾದ ಪ್ರೇಮಿ ಅಂತಾನೇ ಅಂದುಕೊಳ್ಳುವಷ್ಟು ನೈಜವಾಗಿ ಅಭಿನಯಿಸುತ್ತಾನೆ. ತನ್ನ ನಟನೆಯಿಂದ ವಧು-ವರನಲ್ಲಿ ಅನುಮಾನ ಹುಟ್ಟಿಸಿ ಮದುವೆ ಮುರಿಯುತ್ತಾನೆ. ಈ ಸಂದರ್ಭದಲ್ಲಿ ಯಾರಾದ್ರೂ ಹಲ್ಲೆ ಮಾಡಿದ್ರೆ ಅದಕ್ಕೆ ಪ್ರತ್ಯೇಕ ಶುಲ್ಕ ವಿಧಿಸುತ್ತಾನೆ. ಈ ಶುಲ್ಕದಲ್ಲಿ ವೈದ್ಯಕೀಯ ವೆಚ್ಚವೂ ಸೇರಿರುತ್ತದೆ. ಏಟು ತಿನ್ನೋದಕ್ಕಾಗಿಯೇ ಹೆಚ್ಚುವರಿಯಾಗಿ 4,600 ರೂಪಾಯಿ ಪಡೆದುಕೊಳ್ಳುತ್ತಾನೆ. ಈ ಹಣಕ್ಕಾಗಿಯೇ ಆತ ಹಲ್ಲೆಗೊಳಗಾಗಲು ಇಷ್ಟಪಡುತ್ತಾನೆ ಎಂದು ವರದಿಯಾಗಿದೆ.
ಅಪ್ಪಿತಪ್ಪಿಯೂ ಸಂಗಾತಿಯಲ್ಲಿನ ಈ 5 ಲಕ್ಷಣಗಳನ್ನು ನಿರ್ಲಕ್ಷ್ಯಿಸಬೇಡಿ...!