ಬೇಸಿಗೆಯಲ್ಲಿ ಶೇ.70ರಷ್ಟು ಮಂದಿಗೆ ಉಚಿತ ಕೊರೋನಾ ಲಸಿಕೆ; ಆರೋಗ್ಯ ಸಚಿವರ ಭರವಸೆ!

By Suvarna News  |  First Published Dec 22, 2020, 5:36 PM IST

ಕೊರೋನಾ ವೈರಸ್ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವ ಸಂದರ್ಭದಲ್ಲಿ ಇದೀಗ ಹೊಸ ರೂಪಾಂತಗೊಂಡ ಕೊರೋನಾ ವೈರಸ್ ಭೀತಿ ಮತ್ತೆ ಎಲ್ಲರನ್ನು ಆತಂಕಕ್ಕೆ ದೂಡಿದೆ. ಇದೀಗ 2021ರ ಬೇಸಿಗೆ ಕಾಲ 2019ರಂತೆ ಸಹಜವಾಗಿರಲಿದೆ. ಕಾರಣ ಕೊರೋನಾ ಲಸಿಕೆ ಬಹುತೇಕ ಜನರಿಗೆ ಸಿಗಲಿದೆ. ಸ್ಪೇನ್ ಕೊರೋನಾ ಹಾಗೂ ಲಸಿಕೆ ಕುರಿತ ಮಾಹಿತಿ ಇಲ್ಲಿದೆ.


ಸ್ಪೇನ್(ಡಿ.22): ರೂಪಾಂತರ ಕೊರೋನಾ ವೈರಸ್ ಆತಂಕದ ನಡುವೆ ಸ್ಪೇನ್ ಆರೋಗ್ಯ ಸಚಿವ ಸಾಲ್ವಡೊರ್ ಇಲ್ಲ ಮಾತು ಜನತೆಯಲ್ಲಿ ಕೊಂಚ ಸಮಾಧಾನ ಮೂಡಿಸಿದೆ. ಕಾರಣ 2021ರ ಬೇಸಿಗೆಯಲ್ಲಿ ಶೇಕಡಾ 70 ರಷ್ಟು ಮಂದಿಗೆ ಕೊರೋನಾ ಲಸಿಕೆ ನೀಡಲಾಗುವುದು ಎಂದು ಸಾಲ್ವಡೊರ್ ಇಲ್ಲ ಹೇಳಿದ್ದಾರೆ.

ಶಾಂತಗೊಂಡ ಫ್ರಾನ್ಸ್‌ನಲ್ಲಿ ಮತ್ತೆ ಆತಂಕ; ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರೋನ್‌ಗೆ ಕೊರೋನಾ!

Latest Videos

undefined

ಡಿಸೆಂಬರ್ 27 ರಿಂದ ಸ್ಪೇನ್‌ನಲ್ಲಿ ಕೊರೋನಾ ಲಸಿಕೆ ಹಾಕಲು ಆರಂಭಿಸಲಾಗುತ್ತದೆ. ಹೀಗಾಗಿ 2021ರ ಮೊದಲಾರ್ಧದಲ್ಲಿ ಸ್ಪೇನ್‌ ಭಾಗಶಃ ಕೊರೋನಾ ನಿಯಂತ್ರಣ ಸಾಧ್ಯ ಎಂದು ಸಾಲ್ವಡೊರ್ ಹೇಳಿದ್ದಾರೆ. 2021ರ ಆರಂಭದಲ್ಲಿ ಫಿಜರ್ ಅಭಿವೃದ್ಧಿಪಡಿಸಿದ 20 ಮಿಲಿಯನ್ ಕೊರೋನಾ ಲಸಿಕೆಯನ್ನು ಸ್ಪೇನ್ ತರಿಸಿಕೊಳ್ಳುತ್ತಿದೆ. 

ಹಲಾಲ್ ಪ್ರಮಾಣೀಕೃತ ಕೊರೋನಾ ಲಸಿಕೆಗೆ ಮಾತ್ರ ಇಂಡೋನೇಷ್ಯಾದಲ್ಲಿ ಅವಕಾಶ!

ಜೂನ್ ವೇಳೆ ಬ್ರಿಟನ್‌ನ ಅಸ್ಟ್ರಾಜೆಂಕಾ ಅಭಿವೃದ್ಧಿಪಡಿಸುತ್ತಿರುವ 31.6 ಮಿಲಿಯನ್ ಡೋಸ್ ಲಸಿಕೆ ಸಿದ್ಧವಾಗಿದ್ದರೆ ಖರೀದಿಸುವ ಯೋಜನೆಯೂ ಇದೆ ಎಂದು ಸಾಲ್ವಡೋರ್ ಹೇಳಿದ್ದಾರೆ. ವಿಶೇಷ ಅಂದರೆ ಸ್ಪೇನ್‌ನಲ್ಲಿ ಕೊರೋನಾ ಲಸಿಕೆ ಉಚಿತ ಎಂದು ಸಾಲ್ವಡೋರ್ ಇಲ್ಲ ಹೇಳಿದ್ದಾರೆ.

click me!