
ವಾಷಿಂಗ್ಟನ್(ಡಿ.22): ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಿಎಂ ನರೇಂದ್ರ ಮೋದಿಗೆ ಅತ್ಯುನ್ನತ ಪುರಸ್ಕಾರ ಲೀಜನ್ ಆಫ್ ಮೆರಿಟ್ ಪದಕ ನೀಡಿ ಗೌರವಿಸಿದ್ದಾರೆ. ಅಮೆರಿಕಾದಲ್ಲಿರುವ ಭಾರತದ ರಾಯಭಾರಿ ತರಣ್ಜೀತ್ ಸಿಂಗ್ ಪ್ರಧಾನಿ ಮೋದಿಯ ಪರವಾಗಿ, ಅಮೆರಿಕಾ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಸಿ ಓಬ್ರಯಾನ್ರಿಂದ ಈ ಪದಕವನ್ನು ಸ್ವೀಕರಿಸಿದ್ದಾರೆ.
ಈ ಕುರಿತಾಘಿ ಅಮೆರಿಕಾದ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ನ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಭಾರತ ಹಾಗೂ ಅಮೆರಿಕಾ ನಡುವಿನ ಕಾರ್ಯತಂತ್ರದ ಸಹಭಾಗಿತ್ವವನ್ನು ವೃದ್ಧಿಸುವಲ್ಲಿ ಮೋದಿ ಅವರ ನಾಯಕತ್ವವನ್ನ ಶ್ಲಾಘಿಸಿ ಲೀಜನ್ ಆಫ್ ಮೆರಿಟ್ ನೀಡಿ ಗೌರವಿಸಲಾಗಿದೆ ಎಂದು ಈ ಟ್ವೀಟ್‌ನಲ್ಲಿ ತಿಳಿಸಲಾಗಿದೆ.
ಲೀಜನ್ ಆಫ್ ಮೆರಿಟ್ ಅಮೆರಿಕಾದ ಸಶಸ್ತ್ರ ಪಡೆಯ ಮಿಲಿಟರಿ ಪುರಸ್ಕಾರ
ಲೀಜನ್ ಆಫ್ ಮೆರಿಟ್ ಅಮೆರಿಕಾದ ಸಶಸ್ತ್ರ ಪಡೆಯ ಮಿಲಿಟರಿ ಪುರಸ್ಕಾರವಾಗಿದ್ದು, ಇದು ಇಲ್ಲಿನ ಅತ್ಯುನ್ನತ ಪುರಸ್ಕಾರವಾಗಿದೆ. ಅತ್ಯುತ್ತಮ ಸೇವೆ ಮತ್ತು ಸಾಧನೆಗಳ ಕಾರ್ಯಕ್ಷಮತೆಯಲ್ಲಿ ಪ್ರಶಂಸನೀಯ ನಡವಳಿಕೆ ತೋರಿದವರಿಗೆ ಈ ಪದಕ ನೀಡಲಾಗುತ್ತದೆ. ರಾಜ್ಯ ಮುಖ್ಯಸ್ಥರಿಗೆ ಅಥವಾ ಸರ್ಕಾರಕ್ಕೆ ಮಾತ್ರ ನೀಡಲಾಗುವ ಹೈಯೆಸ್ಟ್ ಡಿಗ್ರಿ ಚೀಫ್ ಕಮಾಂಡರ್ ಲೀಜನ್ ಆಫ್ ಮೆರಿಟ್ ಗೌರವವನ್ನು ಮೋದಿಗೆ ನೀಡಲಾಗಿದೆ.
ಮೋದಿ ಜೊತೆಗೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹಾಗೂ ಜಪಾನ್ನ ಮಾಜಿ ಪ್ರಧಾನಿ ಶಿನ್ಸೋ ಅಬೆ ಅವರಿಗೂ ಕೂಡ ಟ್ರಂಪ್ ಈ ಗೌರವ ನೀಡಿದ್ದು, ಆಯಾ ರಾಷ್ಟ್ರಗಳ ರಾಯಭಾರಿಗಳು ವಾಷಿಂಗ್ಟನ್ ಡಿಸಿಯಲ್ಲಿ ಪದಕವನ್ನ ಸ್ವೀಕರಿಸಿದರು ಎಂದು ಅಮೆರಿಕಾದ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಟ್ವಿಟರ್ನಲ್ಲಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ