ಕೋವಿಡ್ ಸಂಕ್ರಾಮಿಕದಿಂದಾಗಿ ನಿಲುಗಡೆಯಾಗಿದ್ದ ಸ್ಪೇನ್‌ನ ಖ್ಯಾತ ಹಬ್ಬ ಟೊಮೆಟೋ ಫೆಸ್ಟಿವಲ್ ಟೊಮೆಟಿನೊ ಎರಡು ವರ್ಷಗಳ ನಂತರ ಮತ್ತೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಟೊಮೆಟಿನೋ ಹಬ್ಬದ ಕಲರ್‌ಫುಲ್ ಫೋಟೋ ವಿಡಿಯೋಗಳು ಮೈಮನ ಸೆಳೆಯುತ್ತಿದೆ. ಅನೇಕರು ಟೊಮೆಟೋಗಳನ್ನು ಪರಸ್ಪರ ಎರಚಾಡಿಕೊಂಡು, ಟೊಮೆಟೋ ಮೇಲೆ ಬಿದ್ದು ಒದ್ದಾಡಿಕೊಂಡು ಟೊಮೆಟೋ ರೀತಿ ಕಾಣಿಸುತ್ತಿದ್ದಾರೆ.
ಸ್ಪ್ಯಾನಿಷ್ ಪಟ್ಟಣವಾದ ಬುನೋಲ್‌ನಲ್ಲಿ ಸಾವಿರಾರು ಜನ ಈ ಟೊಮೆಟಿನೋ (tomatino)ಹಬ್ಬದಲ್ಲಿ ಭಾಗಿಯಾಗಿ ಪರಸ್ಪರ ಟೊಮೆಟೊ ಎರಚಾಡುತ್ತಾ ಸಂಭ್ರಮಿಸಿದರು. ಈ ಟೊಮೆಟೋ ಹಬ್ಬಕ್ಕಾಗಿ ಆರು ಟ್ರಕ್‌ಗಳಲ್ಲಿ ಸುಮಾರು 130 ಟನ್ ಮಾಗಿದ ಟೊಮೆಟೊಗಳನ್ನು ತರಲಾಗಿತ್ತು. ಸ್ಪೇನ್‌ನ ಪೂರ್ವ ಪಟ್ಟಣದ ಕಿರಿದಾದ ಬೀದಿಗಳಲ್ಲಿ ಈ ಮೋಜು ನೀಡುವ ಹಬ್ಬವನ್ನು ಆಚರಿಸಲಾಯಿತು. ಟ್ರಕ್‌ನಲ್ಲಿದ್ದ ತಂಡಗಳು ಈ ಒಂದು ಗಂಟೆಗಳ ಕಾಲ ನಡೆಯುವ ಮೋಜಿನ ಹಬ್ಬಕ್ಕೆ ಜನರಿಗೆ ಟೊಮೆಟೋ ವಿತರಿಸಿದರು.
ಈ ಟೊಮೆಟೋ ಹಬ್ಬವನ್ನು ವಿಶ್ವದ ಅತಿದೊಡ್ಡ ಆಹಾರ ಹೋರಾಟ (the world’s biggest food fight) ಎಂದು ಹೇಳಲಾಗುತ್ತದೆ. ಈ ಹಬ್ಬ ವಿಶೇಷವಾಗಿ ಆಸ್ಟ್ರೇಲಿಯಾ, ಬ್ರಿಟನ್, ಜಪಾನ್ (Japan) ಮತ್ತು ಅಮೆರಿಕಾದ (US) ವಿದೇಶಿಯರ ಪಾಲಿಗೆ ಪ್ರಮುಖ ಆಕರ್ಷಣೆಯಾಗಿದೆ.
ಪಾಕಿಸ್ತಾನದಲ್ಲಿ ಟೊಮೇಟೋ ಕೆಜಿಗೆ 500, ಈರುಳ್ಳಿ ಕೆಜಿಗೆ 400 ರೂಪಾಯಿ, ಭಾರತದ ಸಹಾಯ ಬೇಡಿದ ನೆರೆಯ ದೇಶ!
ಆದಾಗ್ಯೂ ಈ ಬಾರಿ 20 ಸಾವಿರ ಟಿಕೆಟ್‌ಗಳ ಪೈಕಿ ಕೇವಲ 15 ಸಾವಿರ ಟಿಕೆಟ್ ಮಾತ್ರ ಖರೀದಿಯಾಗಿದ್ದವು. ಕೋವಿಡ್ ನಿಯಮಗಳ ಕಾರಣದಿಂದ ಏಷ್ಯಾದ ದೇಶಗಳಿಂದ (Asian country) ಕಡಿಮೆ ಸಂಖ್ಯೆಯ ಜನ ಆಗಮಿಸಿದ್ದರಿಂದ 5 ಸಾವಿರ ಟಿಕೆಟ್ ಬಾಕಿಯಾಗಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಟೊಮೆಟೋ ಜ್ಯೂಸ್ ಕುಡಿದ್ರೆ ಅಧಿಕ ರಕ್ತದೊತ್ತಡದ ಅಪಾಯ ಹೆಚ್ಚು !
ಮಧ್ಯಾಹ್ನ ಪಟಾಕಿಗಳ ಅಬ್ಬರದೊಂದಿಗೆ ಆರಂಭವಾದ ಈ ಹಬ್ಬ ಸ್ವಲ್ಪದರಲ್ಲೇ ಇಡೀ ಬೀದಿ ಬೀದಿಗಳನ್ನು ಕೆಂಪಗಾಗಿಸಿದವು.
ಈ ಆಟದಲ್ಲಿ ಭಾಗವಹಿಸಿದ ಕೆಲವರು ತಮ್ಮ ಕಣ್ಣುಗಳ ರಕ್ಷಣೆಗೆ ಕನ್ನಡಕವನ್ನು ಧರಿಸಿದ್ದರು. ಇನ್ನು ಕೆಲವರು ಟೊಮೆಟೋ ಹೆಕ್ಕಲು ಕೆಳಗೆ ಬಾಗಿದವರು ಟೊಮೆಟೋ ಮೇಲೆ ಉರುಳಾಡಿದರು.
ಈ ಆಟದಲ್ಲಿ ಭಾಗವಹಿಸಿದ ಮೆಕ್ಸಿಕೋದ ಮಹಿಳೆಯೊಬ್ಬರು, ಇದೊಂದು ಬಹಳ ಮೋಜಿನ ವಿಚಾರವಾಗಿರುವುದರಿಂದ ನಾವು ಇಲ್ಲಿಗೆ ಆಗಮಿಸಿದೆವು ಎಂದು ಹೇಳಿದರು. ಸುಮಾರು 9,500 ಜನರಿರುವ ಈ ಪಟ್ಟಣವು 2013 ರಿಂದ ಕೋವಿಡ್ ಸಾಂಕ್ರಾಮಿಕಕ್ಕೂ ಮೊದಲು 2019 ರಲ್ಲಿ ನಡೆದ ಉತ್ಸವಕ್ಕೆ ಹೆಚ್ಚುತ್ತಿರುವ ಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ ಭಾಗವಹಿಸುವಿಕೆಯ ಶುಲ್ಕವನ್ನು ವಿಧಿಸಲು ಶುರು ಮಾಡಿತ್ತು.
ನಮ್ಮ ಇಷ್ಟದ ಈ ಹಬ್ಬವನ್ನು ಪುನರಾರಂಭಿಸಲು ನಾವು ನಿಜವಾಗಿಯೂ ಉತ್ಸುಕರಾಗಿದ್ದೇವೆ, ಮತ್ತೊಮ್ಮೆ ಟೊಮೆಟೊಗಳನ್ನು ಪರಸ್ಪರ ಎಸೆಯಲು ಮತ್ತು ಕಳೆದ ಎರಡು ವರ್ಷಗಳಲ್ಲಿ ಅನುಭವಿಸಿದ ಎಲ್ಲಾ ಒತ್ತಡಗಳಿಂದ ಹೊರಗೆ ಬರಲು ನಾವು ಬಹಳ ಉತ್ಸುಕಾಗಿದ್ದೇವೆ ಎಂದು ಬುನೋಲ್‌ನ ಪ್ರವಾಸೋದ್ಯಮ ಇಲಾಖೆಯ ಟೌನ್ ಕೌನ್ಸಿಲರ್ ಮರಿಯಾ ವ್ಯಾಲ್ಸ್ ಹೇಳಿದರು.
ಈ ಟೊಮೆಟೋ ಫೆಸ್ಟ್ ನಲ್ಲಿ ಸಂಗೀತ ಕಚೇರಿ ಸೇರಿದಂತೆ ಹಲವು ಸ್ಪರ್ಧೆಗಳಿದ್ದು ರಾತ್ರಿಯವರೆಗೆ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ.
1945ರಲ್ಲಿ ಮೊದಲ ಬಾರಿಗೆ ಟೊಮೆಟೋ ಫೆಸ್ಟ್ Tomatina ನಡೆಯಿತು. ಈ ಜಾನಪದ ಉತ್ಸವದಲ್ಲಿ ಬೀದಿಯಲ್ಲಿ ಜಗಳವಾಡುತ್ತಿದ್ದ ಸ್ಥಳೀಯರು ಕಿರಾಣಿ ಅಂಗಡಿಯಿಂದ ಟೊಮೆಟೊಗಳನ್ನು ಎತ್ತಿಕೊಂಡು ಬಂದು ಪರಸ್ಪರ ಎಸೆಯುವ ಮೂಲಕ ಹಬ್ಬ ಆಚರಿಸುತ್ತಿದ್ದರು.
ಹಬ್ಬದ ಜನಪ್ರಿಯತೆಯಿಂದಾಗಿ 2002 ರಲ್ಲಿ ಸ್ಪೇನ್‌ನ ಪ್ರವಾಸೋದ್ಯಮ ಕಾರ್ಯದರ್ಶಿ ಈ ಹಬ್ಬಕ್ಕೆ ಅಂತಾರಾಷ್ಟ್ರೀಯ ಪ್ರವಾಸಿ ಆಸಕ್ತಿಯ ಉತ್ಸವ ಎಂದು ಕರೆದರು. ಮುಂದೆ ಈ ಹಬ್ಬ ಇತರ ದೇಶಗಳಿಗೂ ಹಬ್ಬಿತ್ತು. ಕೊಲಂಬಿಯಾ, ಕೋಸ್ಟರಿಕಾ, ಚಿಲಿ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಈ ಹಬ್ಬ ಆಚರಿಸಲು ಸ್ಪೇನ್‌ನ ಟೊಮೆಟಿನೋ ಪ್ರೇರಣೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ