
ಸೌತ್ ಕೊರಿಯಾ(ಆ.23): ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕುರಿತು ಕಳೆದ ಹಲವು ತಿಂಗಳಿನಿಂದ ಹಲವು ಊಹಾಪೋಹಗಳು ಹರಿದಾಡುತ್ತಿದೆ. ಕಿಮ್ ಜಾಂಗ್ ಉನ್ ಆರೋಗ್ಯ ಕ್ಷೀಣಿಸಿದೆ ಅನ್ನೋ ಸುದ್ದಿಯಿಂದ ಹಿಡಿದು ಕಿಮ್ ಆರೋಗ್ಯವಾಗಿದ್ದಾರೆ ಅನ್ನೋ ಸುದ್ದಿಗಳೂ ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ಇದೀಗ ಬ್ರೇಕ್ ಬಿದ್ದಿದೆ. ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೋಮಾದಲ್ಲಿದ್ದಾರೆ. ಅವರ ಮೆದುಳು ನಿಷ್ಕ್ರೀಯವಾಗಿದೆ ಎಂದು ದಕ್ಷಿಣ ಕೊರಿಯಾ ದಿವಂಗತ ಅಧ್ಯಕ್ಷ ಕಿಮ್ ಡೇ ಜಂಗ್ ಆಪ್ತ ಸಹಾಯಕ ಚಾಂಗ್ ಸಾಂಗ್ ಮಿನ್ ಬಹಿರಂಗ ಪಡಿಸಿದ್ದಾರೆ.
ಕಿಮ್ ಜಾಂಗ್ ಉನ್ ಕೋಮಾಗೆ ಜಾರಿಗೆ ಹಲವು ದಿನಗಳಾಗಿವೆ. ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕಿಮ್ ಜಾಂಗ್ ಉನ್‌ಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಬಳಿಕ ಕಿಮ್ ಜಾಂಗ್ ಉನ್ ಅವರ ಮೆದುಳು ನಿಷ್ಕ್ರೀಯವಾಗಿದೆ. ಹೀಗಾಗಿ ಕಿಮ್ ಜಾಂಗ್ ಇನ್ ಸಹೋದರಿ ಕಿಮ್ ಯೋ ಜೊಂಗ್ ಉತ್ತರ ಕೊರಿಯಾದ ಆಡಳಿತ ನೋಡಿಕೊಳ್ಳುತ್ತಿದ್ದಾರೆ ಎಂದು ಚಾಂಗ್ ಸಾಂಗ್ ಹೇಳಿದ್ದಾರೆ.
ಕಿಮ್ ಜಾಂಗ್ ಉನ್ ಕಚೇರಿಯಲ್ಲೇ ನಡೆಯುತ್ತೆ ಈ ದಂಧೆ: ಬಯಲಾಯ್ತು ಶಾಕಿಂಗ್ ಮಾಹಿತಿ!..
ಕಿಮ್ ಜಾಂಗ್ ಉನ್ ಆಸ್ಪತ್ರೆ ದಾಖಲಾದ ಬಳಿಕ ಹೊರಗೆ ಬಂದಿಲ್ಲ. ಗಂಭೀರ ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಯಲ್ಲಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲವು ತಿಂಗಳ ಹಿಂದೆ ಕಿಮ್ ಜಾಂಗ್ ಉನ್‌ಗೆ ಶಸ್ತ್ರಿ ಚಿಕಿತ್ಸೆ ಮಾಡಲಾಗಿತ್ತು. ಕಿಮ್ ಜಾಂಗ್ ಉನ್ ಸಹೋದರಿಂದ ಆದೇಶಗಳು ಬರುತ್ತಿದೆ. ಉತ್ತರ ಕೊರಿಯಾದ ಸಂಪೂರ್ಣ ಆಡಳಿತ ಸಹೋದರಿ ಕಿಮ್ ಯೊ ಜೊಂಗ್ ನಿರ್ವಹಿಸುತ್ತಿದ್ದಾರೆ ಎಂದು ಚಾಂಗ್ ಸಾಂಗ್ ಮಿನ್ ಹೇಳಿದ್ದಾರೆ.
ಕಿಮ್ ಜಾಂಗ್ ಉನ್ ಆರೋಗ್ಯ ಗಂಭೀರವಾಗಿದೆ. ಅವರಿಗೆ ಇನ್ನು ಆಡಳಿತ ಸಾಧ್ಯವಿಲ್ಲ, ಕಿಮ್ ಮೃತಪಟ್ಟಿದ್ದಾರೆ ಅನ್ನೋ ಮಾಹಿತಿಗಳು ಹರಿದಾಡಿತ್ತು. ಇದರ ಬೆನ್ನಲ್ಲೇ ಕಿಮ್ ಜಾಂಗ್ ಉನ್ ಆರೋಗ್ಯವಾಗಿದ್ದಾರೆ, ಆಡಳಿತದಲ್ಲಿ ಸಕ್ರೀಯವಾಗಿದ್ದಾರೆ ಎಂದು ಬಿಂಬಿಸುವ ಹಲವು ಚಿತ್ರಗಳು ವಿಡಿಯೋಗಳು ಹರಿಬಿಡಲಾಗಿತ್ತು. ಆದರೆ ಈ ಫೋಟೋ ಹಾಗೂ ವಿಡಿಯೋ ನಕಲಿ ಎಂದು ಚಾಂಗ್ ಸಾಂಗ್ ಮಿನ್ ಹೇಳಿದ್ದಾರೆ.
ಕಿಮ್ ಜಾಂಗ್ ಉನ್ ಅವರ ತಾತ ಕಿಮ್ ಇಲ್ ಸಿಂಗ್ ಅವರ 108ನೇ ಜನ್ಮಶತಮಾನೋತ್ಸವ ಕಾರ್ಯಕ್ರಮಕ್ಕೆ ಕಿಮ್ ಜಾಂಗ್ ಗೈರಾಗಿದ್ದರು. ಅಂದಿನಿಂದ ಕಿಮ್ ಆರೋಗ್ಯ ಗಂಭೀರ ಸೇರಿದಂತೆ ಹಲವು ಸುದ್ದಿಗಳು ಹರಿದಾಡಿತ್ತು. ಎಪ್ರಿಲ್ 15 ರಂದು ನಡೆದ ಈ ಕಾರ್ಯಕ್ರಮದಲ್ಲಿ ಕಿಮ್ ಗೈರು ಹಲವು ಅನುಮಾನಗಳಿಗೂ ಕಾರಣವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ