Coronavirus: ಮೊದಲ ಸಲ ಕರ್ನಾಟಕದಲ್ಲಿ ಕೋವಿಡ್‌ಗೆ ಶೂನ್ಯ ಸಾವು, ನಿಯಂತ್ರಣದಲ್ಲಿ ಭಾರತ

By Kannadaprabha News  |  First Published Mar 14, 2022, 5:26 AM IST

* ಭಾರತದಲ್ಲಿ ನಿಯಂತ್ರಣಕ್ಕೆ ಬಂದ ಕೊರೋನಾ
* ಮೊದಲ ಸಲ ರಾಜ್ಯದಲ್ಲಿ ಕೋವಿಡ್‌ಗೆ ಶೂನ್ಯ ಸಾವು
* 21 ತಿಂಗಳ ಬಳಿಕ ರಾಜ್ಯದಲ್ಲಿ ಸೋಂಕಿಗೆ ನಿನ್ನೆ ಒಂದೂ ಸಾವು ಇಲ್ಲ, 164 ಮಂದಿಗೆ ಸೋಂಕು
* ರಾಜ್ಯದಲ್ಲಿ ಈವರೆಗೆ 40018 ಮಂದಿ ಸಾವು, 9 ದಿನಗಳಿಂದ ಒಂದಂಕಿಗೆ ಇಳಿದಿದ್ದ ನಿತ್ಯದ ಸಾವು
 


ಬೆಂಗಳೂರು (ಮೆ. 14 ) ಕರ್ನಾಟಕದಲ್ಲಿ (Karnataka) ಕೋವಿಡ್‌-19 ಅಲೆ ಪ್ರಾರಂಭಗೊಂಡ ಬಳಿಕ ಮೊದಲ ಬಾರಿಗೆ ಭಾನುವಾರ ಯಾರೂ ಸಾವಿಗೀಡಾಗಿಲ್ಲ. 2020ರ ಜೂನ್‌ 5ರ ಬಳಿಕ ಮೊದಲ ಬಾರಿಗೆ ದೈನಂದಿನ ಕೊರೋನಾ (Coronavirus) ಸಾವು ಶೂನ್ಯಕ್ಕಿಳಿದಿದೆ.

ಕೋವಿಡ್‌ (Covid 19) ಸಾಂಕ್ರಾಮಿಕದ ಹಬ್ಬುವಿಕೆ ವೇಗ ಪಡೆಯುತ್ತಿದ್ದಂತೆ ದಿನನಿತ್ಯ ಸಾವು ವರದಿಯಾಗುತ್ತಲೇ ಇತ್ತು. ಕೋವಿಡ್‌ನ ಎರಡನೇ ಅಲೆಯ ಸಂದರ್ಭದಲ್ಲಿ ಅಂದರೆ 2021ರ ಮಾಚ್‌ರ್‍, ಏಪ್ರಿಲ್‌, ಮೇ ಮತ್ತು ಜೂನ್‌ನಲ್ಲಿ ದಿನನಿತ್ಯ ನೂರಾರು ಸಾವು ವರದಿಯಾಗಿತ್ತು. ಆದರೆ 2022ರ ಜನವರಿಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡ ಮೂರನೇ ಅಲೆ ಅಷ್ಟೊಂದು ಮಾರಣಾಂತಿಕವಾಗಿರಲಿಲ್ಲ. ಕಳೆದ 9 ದಿನಗಳಿಂದ ದಿನನಿತ್ಯದ ಸಾವು ಒಂದಂಕಿಗೆ ಇಳಿದಿತ್ತು. ಇದೀಗ 646 ದಿನದ ಬಳಿಕ ರಾಜ್ಯ ಕೋವಿಡ್‌ ಸಾವು ಶೂನ್ಯ ದಾಖಲಾಗಿದೆ.

Latest Videos

ರಾಜ್ಯದಲ್ಲಿ ಈವರೆಗೆ 40,018 ಮಂದಿ ಕೋವಿಡ್‌ನಿಂದ ಮರಣವನ್ನಪ್ಪಿದ್ದಾರೆ. ದೇಶದಲ್ಲೇ ಕೊರೋನಾ ಸೋಂಕಿನಿಂದ ಅತಿ ಹೆಚ್ಚು ಸಾವು ಸಂಭವಿಸಿದ ರಾಜ್ಯಗಳಲ್ಲಿ ಮಹಾರಾಷ್ಟ್ರ ಮತ್ತು ಕೇರಳದ ನಂತರದ ಸ್ಥಾನದಲ್ಲಿ ಕರ್ನಾಟಕವಿದೆ. ರಾಜ್ಯದಲ್ಲಿ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 16,942 ಸಾವು ಸಂಭವಿಸಿದೆ. ಮೈಸೂರಿನಲ್ಲಿ 2,557 ಮತ್ತು ದಕ್ಷಿಣ ಕನ್ನಡದಲ್ಲಿ 1,838 ಸಾವು ಉಂಟಾಗಿದೆ. ಯಾದಗಿರಿಯಲ್ಲಿ ಅತಿ ಕಡಿಮೆ 212 ಸಾವು ದಾಖಲಾಗಿದೆ. ಇದೇ ವೇಳೆ ದಿನನಿತ್ಯದ ಕೋವಿಡ್‌ ಪ್ರಕರಣಗಳ ಸಂಖ್ಯೆ ಇದೀಗ 150ರ ಅಸುಪಾಸಿಗೆ ಇಳಿದಿರುವ ಜೊತೆಗೆ ಕೋವಿಡ್‌ ಸಾವು ಕೂಡ ಕಡಿಮೆ ಆಗಿದೆ.

ಭಾನುವಾರ 164 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 130 ಮಂದಿ ಚೇತರಿಸಿಕೊಂಡಿದ್ದಾರೆ. ಹೊಸ ಸೋಂಕಿತರಿಗಿಂತ ಚೇತರಿಸಿಕೊಂಡವರ ಸಂಖ್ಯೆ ಹೆಚ್ಚಿರುವುದರಿಂದ ಸಕ್ರಿಯ ಪ್ರಕರಣ 2,656ಕ್ಕೆ ಏರಿದೆ. ಬೆಂಗಳೂರು(Bengaluru)  ನಗರದಲ್ಲಿ 112 ಮತ್ತು ಚಿತ್ರದುರ್ಗದಲ್ಲಿ 21 ಹೊಸ ಪ್ರಕರಣ ಪತ್ತೆಯಾಗಿದೆ. ಮೈಸೂರು 7, ತುಮಕೂರು 4, ಕಲಬುರಗಿ ಮತ್ತು ದಕ್ಷಿಣ ಕನ್ನಡ 3, ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ 2, ಉತ್ತರಕನ್ನಡ, ಮಂಡ್ಯ, ಕೊಪ್ಪಳ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ ಒಂದು ಹೊಸ ಪ್ರಕರಣ ವರದಿಯಾಗಿದೆ. ಉಳಿದಂತೆ 14 ಜಿಲ್ಲೆಯಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ.

ಚೀನಾ ಕೊರೋನಾ ಸ್ಫೋಟಕ್ಕೆ ಏನು ಕಾರಣ

ದಕ್ಷಿಣ ಏಷ್ಯಾದಲ್ಲಿ ಕೊರೋನಾ ಅಬ್ಬರ:   ಚೀನಾ(China), ವಿಯೆಟ್ನಾಂ, ಹಾಂಗ್‌ಕಾಂಗ್‌, ದಕ್ಷಿಣ ಕೊರಿಯಾ (South Korea)  ಸೇರಿದಂತೆ ಏಷ್ಯಾದ ಕೆಲ ದೇಶಗಳಲ್ಲಿ ಮತ್ತೆ ಕೋವಿಡ್‌-19 (Covid 19) ವೈರಸ್‌ ಅಬ್ಬರ ಹೆಚ್ಚುತ್ತಿದ್ದು, ದೈನಂದಿನ ಸೋಂಕಿನ ಪ್ರಮಾಣವು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಏಷ್ಯಾದ ಹಲವು ದೇಶಗಳಲ್ಲಿ ಮತ್ತೊಮ್ಮೆ ವೈರಸ್‌ ವಿರುದ್ಧ ಕಠಿಣ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ದಕ್ಷಿಣ ಕೊರಿಯಾದಲ್ಲಿ ಸೋಂಕು ಭಾರೀ ವೇಗವಾಗಿ ಹಬ್ಬುತ್ತಿದ್ದು, ಶನಿವಾರ ಒಂದೇ ದಿನ ದಾಖಲೆಯ 3.83 ಲಕ್ಷ ಹೊಸ ಕೇಸ್‌ ದೃಢಪಟ್ಟಿವೆ, 229 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ವಿಯೆಟ್ನಾಂನಲ್ಲಿಯೂ ಒಮಿಕ್ರೋನ್‌ ಕೊರೋನಾ ಸೋಂಕಿನ ಸುನಾಮಿಯೇ ಆರಂಭವಾಗಿದ್ದು, ಮಾ.9ರಂದು ಒಂದೇ ದಿನ 2.65 ಲಕ್ಷ ಕೇಸ್‌ ದೃಢಪಟ್ಟಿವೆ. ಕಳೆದ ವಾರದಲ್ಲಿ ದೇಶದಲ್ಲಿ 14 ಲಕ್ಷ ಕೇಸ್‌ ಪತ್ತೆಯಾಗಿವೆ.

ಕೊರೋನಾ ಹೊಸ ಅಲೆಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆನ ಈಗಾಗಲೇ ಎಚ್ಚರಿಕೆ ನೀಡಿದೆ. ರೂಪಾಂತರಿ ತಳಿಗಳು ಮತ್ತು ಅವು ಯಾವ ತಿಂಗಳಿನಲ್ಲಿ ಕಾಣಿಸಿಕೊಳ್ಳಬಹುದು ಎಂಬುದನ್ನು ತಿಳಿಸಲಾಗಿದೆ. ಭಾರತತದಲ್ಲಿ ಕೊರೋನಾ ನಿಯಂತ್ರಣದಲ್ಲಿದ್ದು ಲಸಿಕಾ ಕಾರ್ಯ ಯಶಸ್ಸು ನೀಡಿದೆ.

 

 

click me!