ಮುಳುಗುತ್ತಿರುವ ಬೋಟ್ ರಕ್ಷಿಸಲು ಕೆರೆಗೆ ಜೀಪ್, ಪಿಕ್ಅಪ್ ಇಳಿಸಿ ಕೈಸುಟ್ಟುಕೊಂಡ ಮಾಲೀಕ!

Published : Jun 28, 2020, 03:55 PM ISTUpdated : Jun 28, 2020, 03:59 PM IST
ಮುಳುಗುತ್ತಿರುವ ಬೋಟ್ ರಕ್ಷಿಸಲು ಕೆರೆಗೆ ಜೀಪ್, ಪಿಕ್ಅಪ್ ಇಳಿಸಿ ಕೈಸುಟ್ಟುಕೊಂಡ ಮಾಲೀಕ!

ಸಾರಾಂಶ

ಅದೃಷ್ಟ ಕೈಕೊಟ್ಟರೆ ಕ್ಷಣಮಾತ್ರದಲ್ಲಿ ಎಲ್ಲವೂ ನಷ್ಟವಾಗಲಿದೆ. ಆದರೆ ಕೆಲವರು ಸಮಯ ಪ್ರಜ್ಞೆ, ಪರಿಶ್ರಮ, ಇತರರ ಸಹಾಯದಿಂದ ಅಪಾಯವನ್ನು ತಪ್ಪಿಸುತ್ತಾರೆ. ಇಲ್ಲೊಬ್ಬ ಮಾಲೀಕ ನಿಮಿಷದ ಅಂತರದಲ್ಲಿ 2.26 ಕೋಟಿ ರೂಪಾಯಿ ಜೊತೆಗೆ ತನ್ನರೆಡು ವಾಹನನ್ನು ಕಳೆದುಕೊಂಡಿದ್ದಾನೆ. ಮುಳುಗುತ್ತಿರುವ ಬೋಟ್ ರಕ್ಷಿಸಲು ಮಾಡಿದ ಎಡವಟ್ಟು ಐಡಿಯಾವೇ ಮಳುವಾಯಿತು.

ಅಮೆರಿಕ(ಜೂ.28): ಕೆರೆಯಲ್ಲಿ ತನ್ನ ಬೋಟ್ ಮುಳುಗಡೆಯಾಗುವುದನ್ನು ತಡೆಯಲು ಮಾಡಿದ ಎಡವಟ್ಟು ಐಡಿಯಾಗಳಿಂದ ಬೋಟ್ ಮಾತ್ರವಲ್ಲ ತನ್ನ ಎರಡು ವಾಹನ ಕೂಡ ನೀರುಪಾಲದ ಘಟನೆ ನಡೆದಿದೆ. ಅಮೆರಿಕಾಜ ಇಂಡಿಯಾನದಲ್ಲಿರುವ ಕೆಡಾರ್ ಲೇಕ್‌ನಲ್ಲಿ ಜೆಫ್ ಬೈನಿಚಿ ಅನ್ನೋ ವ್ಯಕ್ತಿಯ ಬೋಟ್ ಮುಳುಗಡೆಯಾಗಲು ಆರಂಭಿಸಿತು. ಮಾರ್ಚ್‌ನಲ್ಲಿ ಬರೋಬ್ಬರಿ 2.28 ಕೋಟಿ ರೂಪಾಯಿ ನೀಡಿ ಖರೀದಿಸಿದ ಈ ಬೋಟ್ ಕೆರೆಯಲ್ಲಿ ಮುಳುಗಲು ಆರಂಭಿಸಿತ್ತು.

ಸೂರ್ಯನ ಹತ್ತು ವರ್ಷದ ವಿಡಿಯೋ ಒಂದೇ ತಾಸಲ್ಲಿ ನೋಡಿ!...

ಈ ಕುರಿತು ಮಾಹಿತಿ ತಿಳಿದ ಮಾಲೀಕ ಜೆಫ್ ಬೈನಿಚ್, ಗಾರ್ಡ್ ಸಹಾಯ ಪಡೆಯಬೇಕಿತ್ತು. ಕೆಡಾರ್ ಕೆರೆಯ ಸೇಫ್ ಗಾರ್ಡ್ಸ್‌ಗೆ ಮಾಹಿತಿ ನೀಡಿದರೆ ಸುಲಭವಾಗಿ ಬೋಟ್ ಮೇಲೆತ್ತಬಹುದಿತ್ತು. ಆದರೆ ಜೆಫ್ ಹೀಗೆ ಮಾಡಲಿಲ್ಲ. ಬೋಟ್ ರಕ್ಷಿಸಲು ತನ್ನು ಜೀಪ್ ರ್ಯಾಂಗ್ಲರ್ ವಾಹನವನ್ನು ಕೆರೆಗೆ ಇಳಿಸಿ, ಈ ಮೂಲಕ ಬೋಟ್ ಮೇಲಕ್ಕೆತ್ತುವ ಐಡಿಯಾ ಮಾಡಿದ.

ವಿಶ್ವಸಂಸ್ಥೆ ಕಾರಲ್ಲಿ ಹಾಡಹಗಲೇ ಸೆಕ್ಸ್..! ಅಧಿಕಾರಿ ಕಾಮದಾಟ ವೈರಲ್.

ಜೀಪ್‌ಗೆ ಹಗ್ಗ ಕಟ್ಟಿ ಕೆರೆಗೆ ಇಳಿಸಿದ ಮಾಲೀಕನಿಗೆ ಮತ್ತೊಂದು ಶಾಕ್ ಕಾದಿತ್ತು. ಕೆರೆಯ ಆಳ ಅರಿಯದ ಜೆಫ್‌ಗೆ ಜೀಪ್ ಕೈಕೊಟ್ಟಿತು. ಕಾರಣ ಜೀಪ್ ಕೂಡ ನೀರಿನಲ್ಲಿ ತೇಲಲು ಆರಂಭಿಸಿತು. ಇತ್ತ ಬೋಟ್ ಬಾಗಶಃ ಮುಳುಗಡೆಯಾಗಿತ್ತು. ತಕ್ಷಣವೇ ಮತ್ತೊಂದು ಐಡಿಯಾ ಮಾಡಿದ್ದಾನೆ. ಫೋರ್ಡ್ ಫಿಕ್ ಅಪ್ ಎಂತಹ ಲೋಡ್ ಇದ್ದರೂ ಸಲೀಸಲಾಗಿ ಸಾಗಬಲ್ಲದು. ಫೋರ್ಡ್ ಪಿಕ್ ಅಪ್ ಶಕ್ತಿ ಸಾಮರ್ಥ್ಯದ ಬಗ್ಗೆ ಎರಡು ಮಾತಿಲ್ಲ. ಹೀಗಾಗಿ ಬೋಟ್ ರಕ್ಷಿಸಲು ತನ್ನ ಫೋರ್ಡ್ ಪಿಕ್ಅಪ್‌ಗೆ ಮಾತ್ರ ಸಾಧ್ಯ ಎಂದು ಪಿಕ್‌ಅಪ್ ಕೂಡ ಕೆರೆಗೆ ಇಳಿಸಲಾಯಿತು..

 

ನೀರಿಗಿಳಿಯುತ್ತಿದ್ದ ಫೋರ್ಡ್ ಪಿಕ್ಅಪ್ ಕೂಡ ನೀರಿನಲ್ಲಿ ತೇಲಲು ಆರಂಭಿಸಿತು. ಪಿಕ್ ಒಳಭಾಗದಲ್ಲಿ ನೀರು ತುಂಬಿಕೊಳ್ಳುತ್ತಿದ್ದಂತೆ ಮುಳುಗಲು ಆರಂಭಿಸಿತು. ಈತನ ಬತ್ತಳಿಕೆಯ ಐಡಿಯಾಗಳೆಲ್ಲಾ ಮುಗಿದಾಗ ಅತ್ತ ಬೋಟ್ ಮುಳುಗಿತ್ತು. ಇತ್ತ ಎರಡು ವಾಹನಗಳು ನೀರಿನಲ್ಲಿ ತೇಲುತಿತ್ತು. ವಾಹನದ ಎಂಜಿನ್ ಒಳಗೆ ನೀರು ಸೇರಿಕೊಂಡು ಎರಡೂ ವಾಹನಗಳು ಕೆಟ್ಟು ನಿಂತಿತು. 

ಜೆಫ್ ಬೈನಿಚ್ ಎಡವಟ್ಟಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದೃಷ್ಟ ಕೈಕೊಟ್ಟಾಗ ತಲೆ ಕೂಡ ಕೈಕೊಟ್ಟಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಗಳನ್ನು ಹರಿಬಿಡುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!
ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ