
ಲಂಡನ್(ಜು.19) ರಾತ್ರೋರಾತ್ರಿ ನೀಲಿ ಕಣ್ಣಿನ ಚಾಯ್‌ವಾಲಾ ಜನಪ್ರಿಯನಾಗಿದ್ದ. ಈತನ ಲುಕ್, ಈತನ ಕಣ್ಣೇ ಪ್ರಮುಖ ಆಕರ್ಷಣೆಯಾಗಿತ್ತು. ಫೋಟೋಗ್ರಾಫರ್ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಪ್ರಕಟಿಸಿದ್ದ ಈ ಫೋಟೋ ವಿಶ್ವಾದ್ಯಂತ ಸದ್ದು ಮಾಡಿತು. ಮರುದಿನಗಳಿಂದಲೇ ಇಸ್ಲಾಮಾಬಾದ್ ಬೀದಿ ಬಿದಿಯಲ್ಲಿ ಚಾಯ್ ಮಾರುತ್ತಿದ್ದ ಈ ಚಾಯ್‌ವಾಲ್ ಆರ್ಶದ್ ಖಾನ್, ಸೆಲೆಬ್ರೆಟಿಯಾಗಿದ್ದ. ಪಾಕ್ ಟಿವಿ ಸೀರಿಯಲ್‌ನಲ್ಲಿ ಕಾಣಿಸಿಕೊಂಡ, ಬೀದಿಯಲ್ಲಿ ಚಹಾ ಮಾರುತ್ತಿದ್ದ ಅರ್ಶದ್ ಇಸ್ಲಾಮಾಬಾದ್‌ನಲ್ಲಿ ಕೆಫೆ ಆರಂಭಿಸಿದೆ. ಈ ನೀಲಿನ ಕಣ್ಣಿನ ಚಾಯ್‌ವಾಲಾನ ಸಕ್ಸಸ್ ಸ್ಟೋರಿ ಇಲ್ಲಿಗೆ ಮುಗಿದಿಲ್ಲ, ಇದೀಗ ಅರ್ಶದ್ ಖಾನ್ ಲಂಡನ್‌ನಲ್ಲಿ ಕೆಫೆ ಆರಂಭಿಸಿದ್ದಾನೆ.
ಪೋರ್ವ ಲಂಡನ್‌ನ ಇಲ್‌ಪೋರ್ಡ್ ಲೇನ್‌ನಲ್ಲಿ ಅರ್ಶದ್ ಖಾನ್ ಕೆಫೆ ಆರಂಭಗೊಂಡಿದೆ. ಈ ಏರಿಯಾ ಭಾರತೀಯರು, ಪಾಕಿಸ್ತಾನಿ ಹಾಗೂ ಬಾಂಗ್ಲಾದೇಶಿ ನಿವಾಸಿಗಳಿಂದಲೇ ತುಂಬಿದೆ. ಇದೇ ಏರಿಯಾದಲ್ಲಿ ಇದೀಗ ಅರ್ಶದ್ ಖಾನ್ ಕೆಫೆ ಆರಂಭಗೊಂಡಿದೆ. ದಕ್ಷಿಣ ಏಷ್ಯಾ ಆಕರ್ಷಣೀಯ ವಸ್ತುಗಳಾದ ಟ್ರಕ್ ಕಲಾಕೃತಿ, ವೆಸ್ಪಾ ಸ್ಕೂಟರ್, ಪಾಕಿಸ್ತಾನಿ ಪೈಂಟಿಂಗ್ಸ್ ಸೇರಿದಂತೆ ಹಲವು ವಸ್ತುಗಳಿಂದ ಕೆಫೆ ಆಲಂಕರಿಸಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದ ನೀಲಿಕಣ್ಣಿನ ಚಾಯ್‌ವಾಲಾ!
ಲಂಡನ್‌ನಲ್ಲಿ ಚಾಯ್ ಶಾಪ್ ಶಾಖೆ ತೆರೆದ ಬಳಿಕ ಮಾತನಾಡಿದ ಅರ್ಶದ್ ಖಾನ್, ಇದು ನನ್ನ ಮೊದಲ ಅಂತಾರಾಷ್ಟ್ರೀಯ ಚಾಯ್ ಶಾಪ್. ಲಂಡನ್‌ಗೆ ಆಗಮಿಸುವಂತೆ ಹಲವು ಮನವಿಗಳು, ಆಹ್ವಾನಗಳು ಬಂದಿತ್ತು. ಲಂಡನ್‌ನಲ್ಲಿ ಚಾಯ್ ಶಾಪ್ ತೆರೆಯುವಂತೆ ಹಲವರು ಸೂಚಿಸಿದ್ದರು. ಇದೀಗ ಲಂಡನ್‌ನ ಇಲ್‌ಪೋರ್ಡ್ ಲೇನ್‌ನಲ್ಲಿ ಕೆಫೆ ಆರಂಭಗೊಂಡಿದೆ. ಭರ್ಜರಿ ಪ್ರತಿಕ್ರಿಯೆ ನೋಡಿ ಮನಸ್ಸು ತುಂಬಿದೆ. ಭಾರತೀಯರು, ಪಾಕಿಸ್ತಾನಿಗಳು ಹಾಗೂ ಬಾಂಗ್ಲಾದೇಶಿಯರು ಚಾಯ್ ಇಷ್ಟಪಡುತ್ತಾರೆ. ಇದೇ ಏರಿಯಾದಲ್ಲಿ ಕೆಫೆ ಆರಂಭಿಸಿರುವುದು ಸಂತಸ ತಂದಿದೆ ಎಂದಿದ್ದಾರೆ.
ಅರ್ಶದ್ ಖಾನ್ 2016ರಲ್ಲಿ ಇಸ್ಲಾಮಾಬಾದ್ ಬೀದಿ ಬದಿಯಲ್ಲಿ ಚಾಯ್ ಮಾರುತ್ತಿದ್ದ. ಪಶ್ತೂನ್ ಪ್ರಾಂತ್ಯದ ಈತ ಆಕರ್ಷಕ ನೋಟದ ಜೊತೆಗೆ ನೀಲಿ ಕಣ್ಣುಹೊಂದಿದ್ದ. ಸ್ಥಳೀಯ ಫೋಟೋಗ್ರಾಫರ್ ಕ್ಲಿಕ್ಕಿಸಿದ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಒಂದೇ ದಿನದಲ್ಲಿ ಅರ್ಶದ್ ಖಾನ್ ಪಾಕಿಸ್ತಾನ ಮಾತ್ರವಲ್ಲ, ವಿದೇಶಗಳಲ್ಲೂ ಜನಪ್ರಿಯನಾದ.
ಬೀದಿ ಬದಿಯ ಚಾಯ್‌ವಾಲ್ ಸೆಲೆಬ್ರೆಟಿಯಾಗಿದ್ದ. ಪ್ರವಾಸಿಗರು, ಸ್ಥಳೀಯರು, ವಿದೇಶಿಗರು ಅರ್ಶದ್ ಖಾನ್ ಹುಡುಕಿ ಬಂದು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಕೆಲವೇ ದಿನಗಳಲ್ಲಿ ಅರ್ಶದ್ ಖಾನ್ ಜನಪ್ರಿಯನಾದ. ಇದರ ಬೆನ್ನಲ್ಲೇ ಪಾಕಿಸ್ತಾನ ಟಿವಿ ದಾರಾವಾಹಿಗಳಿಂದ ಆಫರ್ ಬಂದಿದೆ. ಮಾಡೆಲಿಂಗ್, ಪಾಕ್ ಚಿತ್ರಗಳಲ್ಲಿ ನಟಿಸುವ ಆಫರ್ ಒಂದರ ಹಿಂದೊಂದರಂತೆ ಬಂದಿದೆ. ಅರ್ಶದ್ ಖಾನ್ ಪಾಕಿಸ್ತಾನ ದಾರವಾಹಿ, ಚಲನಚಿತ್ರದಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡ.
90ಲಕ್ಷ ರೂ. ಮೌಲ್ಯದ ಮರ್ಸಿಡಿಸ್ ಬೆಂಜ್ ಖರೀದಿಸಿದ ಚಾಯ್ ವಾಲಾ; ಈತನ ಕಥೆ ಕೆಳಿದ್ರೆ ಅಚ್ಚರಿಯಾಗೋದು ಗ್ಯಾರಂಟಿ!
ಅರ್ಶದ್ ಖಾನ್ ಪ್ರತಿ ದಿನ ಚಾಯ್ ಮಾರಾಟ, ನಟನೆ, ಮಾಡೆಲಿಂಗ್ ಸೇರಿದಂತೆ ಹಲವು ಕಾರ್ಯಗಳಲ್ಲಿ ಸಕ್ರಿಯನಾದ. ಆದಾಯವೂ ಹೆಚ್ಚಾಯಿತು. ಬೀದಿ ಬದಿಯಿಂದ ಇಸ್ಲಾಮಾಬಾದ್‌ನಲ್ಲಿ ಚಾಯ್‌ವಾಲಾ ಕೆಫೆ ಆರಂಭಿಸಿದ. ಕೆಲವೇ ದಿನಗಳಲ್ಲಿ ಅರ್ಶದ್ ಖಾನ್ ಕೆಫೆ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಆದಾಯಗಳಿಕೆಯಲ್ಲೂ ದಾಖಲೆ ಬರೆಯಿತು. ಇದೀಗ ಅರ್ಶದ್ ಖಾನ್ ಲಂಡನ್‌ನಲ್ಲಿ ಚಾಯ್‌ವಾಲಾ ಕೆಫೆ ಆರಂಭಿಸಿದ್ದಾನೆ. ಇದೀಗ ಲಂಡನ್‌ನಲ್ಲೂ ಅರ್ಶದ್ ಖಾನ್ ಕೆಫೆ ಕಿಕ್ಕಿರಿದು ತುಂಬಿದೆ. ಪ್ರತಿ ದಿನ ಗ್ರಾಹಕರಿಂದ ಗಿಜಿಗಿಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ