ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ್‍ಯಾಲಿ ವೇಳೆ ಗುಂಡಿನ ದಾಳಿ..!

By Girish Goudar  |  First Published Jul 14, 2024, 7:23 AM IST

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಶನಿವಾರ ಸಂಜೆ ನಡೆದ ಪ್ರಚಾರ ರ್‍ಯಾಲಿ ವೇಳೆ ಸರಣಿ ಗುಂಡಿನ ದಾಳಿ ನಡೆದಿದೆ. ಡೊನಾಲ್ಡ್ ಟ್ರಂಪ್ ಅವರಿಗೆ ಕಿವಿ ಮತ್ತು ಮುಖದ ಮೇಲೆ ರಕ್ತ ಬಂದಿದೆ.  


ಪೆನ್ಸಿಲ್ವೇನಿಯಾ(ಜು.14):  ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಶನಿವಾರ ಸಂಜೆ ನಡೆದ ಪ್ರಚಾರ ರ್‍ಯಾಲಿ ವೇಳೆ ಸರಣಿ ಗುಂಡಿನ ದಾಳಿ ನಡೆದಿದೆ. ಡೊನಾಲ್ಡ್ ಟ್ರಂಪ್ ಅವರಿಗೆ ಕಿವಿ ಮತ್ತು ಮುಖದ ಮೇಲೆ ರಕ್ತ ಬಂದಿದೆ. ಕೂಡಲೇ ಅವರನ್ನ ವೇದಿಕೆಯಿಂದ ಸುರಕ್ಷಿತವಾಗಿ ಕಳುಹಿಸಲಾಗಿದೆ.

ಗುಂಡಿನ ದಾಳಿಯಲ್ಲಿ ಟ್ರಂಪ್ ನ ಬಲಭಾಗ ಕಿವಿಗೆ ಸ್ವಲ್ಪ ಪ್ರಮಾಣದಲ್ಲಿ ಗುಂಡು ತಗುಲಿರುವ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ ಸೀಕ್ರೆಟ್ ಎಜೆಂಟ್ಸ್  ಟ್ರಂಪ್ ಅವರನ್ನ ರಕ್ಷಣೆ ಮಾಡಿದೆ. ಘಟನೆ ಬಗ್ಗೆ ಸೀಕ್ರೆಟ್ ಎಜೆಂಟ್ಸ್ ವಿಚಾರಣೆ ಆರಂಭಿಸಿದೆ. 

Tap to resize

Latest Videos

undefined

ಜನಸಂಖ್ಯೆ: ಭಾರತದ ನಂ.1 ಪಟ್ಟ ಕಾಯಂ- ಈ ಶತಮಾನವಿಡೀ ಸನಿಹಕ್ಕೆ ಯಾವ ದೇಶವೂ ಬರೋದಿಲ್ಲ

ಕಾರ್ಯಕ್ರಮ ನಡೆಯುತ್ತಿದ್ದ 200-300 ಯಾರ್ಡ್ ದೂರದಿಂದ ಗುಂಡಿನ ದಾಳಿ ನಡೆದಿದೆ. ಎತ್ತರದ ಕಟ್ಟಡದ ಮೇಲೆ ಕುಳಿತು ಏರ್ ಗನ್ ಮೂಲಕ ದಾಳಿ ನಡೆಸಲಾಗಿದೆ. ಒಟ್ಟು ಎಂಟು ಸುತ್ತಿನ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಒಬ್ಬ ಸಾರ್ವಜನಿಕ ಹತ್ಯೆಯಾಗಿರೋ ಮಾಹಿತಿ ಲಭ್ಯವಾಗಿದೆ.

ಘಟನೆ ಬಳಿಕ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಪ್ರತಿಕ್ರಿಯೆ ನೀಡಿದ್ದು,  ನನ್ನ ಬಲ ಕಿವಿಯ ಮೇಲಿನ ಭಾಗದ ಮೇಲೆ ಗುಂಡು ಹಾರಿ ಹೋಗಿದೆ. ಸ್ಯದ ನಾನು ಸುರಕ್ಷಿತವಾಗಿದ್ದೇನೆ ಎಂದು ಹೇಳಿದ್ದಾರೆ.

click me!