ತೂಕ ಇಳಿಸಿಕೊಳ್ಳಲು ಹೋಗಿ ಜೀವಂತ ಅಸ್ಥಿಪಂಜರವಾದ ಸುಂದರಿ; ಈಕೆ ದೇಹದಲ್ಲಿ ಹುಡುಕಿದರೂ ಪಾವ್ ಕೆಜಿ ಮಾಂಸವಿಲ್ಲ!

Published : Jul 13, 2024, 03:36 PM ISTUpdated : Jul 13, 2024, 03:40 PM IST
ತೂಕ ಇಳಿಸಿಕೊಳ್ಳಲು ಹೋಗಿ ಜೀವಂತ ಅಸ್ಥಿಪಂಜರವಾದ ಸುಂದರಿ; ಈಕೆ ದೇಹದಲ್ಲಿ ಹುಡುಕಿದರೂ ಪಾವ್ ಕೆಜಿ ಮಾಂಸವಿಲ್ಲ!

ಸಾರಾಂಶ

ಇಲ್ಲೊಬ್ಬ ಯುವತಿ ತಾನು ತೆಳ್ಳಗೆ ಕಾಣಬೇಕೆಂದು ಆಹಾರ ಪಥ್ಯ ಮಾಡಿ ಜೀವಂತ ಅಸ್ತಿಪಂಜರವಾಗಿದ್ದಾಳೆ. ಈಕೆ ಕೇವಲ 25 ಕೆ.ಜಿ. ತೂಕವಿದ್ದು, ಈಕೆಯ ಮೈಯಲ್ಲಿ ಹುಡುಕಿದರೂ ಪಾವ್ ಕೆಜಿ (250 ಗ್ರಾಂ) ಮಾಂಸ ಸಿಗುವುದಿಲ್ಲ.

ಸಾಮಾನ್ಯವಾಗಿ ಸ್ವಲ್ಪ ದಡೂತಿ ಆಗಿದ್ದವರು, ಹೊಟ್ಟೆ ಬೊಜ್ಜು ಇರುವವರ ತೂಕ ಇಳಿಸಿಕೊಳ್ಳಲು ಆಸೆ ಪಡುವುದು ಸಹಜ. ಇದಕ್ಕಾಗಿ ಊಟವನ್ನು ಬಿಟ್ಟು ವಿವಿಧ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಆದರೆ, ಇಲ್ಲೊಬ್ಬ ಯುವತಿ ತಾನು ತೆಳ್ಳಗೆ ಕಾಣಬೇಕೆಂದು ಕಠಿಣ ಆಹಾರ ಪಥ್ಯ ಮಾಡಿ ಜೀವಂತ ಅಸ್ತಿಪಂಜರವಾಗಿದ್ದಾಳೆ. ಈಕೆಯ ಮೈಯಲ್ಲಿ ಹುಡುಕಿದರೂ ಪಾವ್ ಕೆಜಿ ( 250 grams) ಮಾಂಸವಿಲ್ಲ.

ಇತ್ತೀಚಿನ ದಿನಗಳಲ್ಲಿ ಹಳ್ಳಿ, ಪಟ್ಟಣ, ನಗರ ಸೇರಿದಂತೆ ಎಲ್ಲರ ಜೀವನ ಶೈಲಿಯೂ ಬದಲಾಗಿದ್ದು, ಸಾಮಾನ್ಯ ಮಟ್ಟಕ್ಕಿಂತ ದಪ್ಪಗಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಹಳ್ಳಿ, ಪಟ್ಟಣಗಳಲ್ಲಿ ಳಗ್ಗೆದ್ದು ಜಮೀನಿನ ಕೆಲಸಕ್ಕೆ ಹೋಗುವುದು ಬಿಟ್ಟು ವಾಕಿಂಗ್ ಮಾಡಲು ಹೋಗುವವರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಹೀಗಾಗಿ, ಬಹುತೇಕರು ತೆಳ್ಳಗಾಗುವ ಆಸೆಯಯನ್ನು ಹೊಂದಿರುವವರೇ ಆಗಿದ್ದಾರೆ. ಇದಕ್ಕಾಗಿ ಆಹಾರ ಪಥ್ಯ, ದೈಹಿಕ ಕಸರತ್ತು, ಜಿಮ್, ಮಾತ್ರೆ ಸೇವನೆ, ಸರ್ಜರಿ ಸೇರಿ ಇತ್ಯಾದಿ ಪ್ರಯತ್ನಗಳನ್ನೂ ಮಾಡಿರುತ್ತಾರೆ. ಇದರಲ್ಲಿ ಕೆಲವರು ಯಶಸ್ವಿಯೂ ಆಗಿರುತ್ತಾರೆ. ಆದರೆ, ಇಲ್ಲೊಬ್ಬ ಮಹಿಳೆ ತೆಳ್ಳಗಾಗುವ ಝಯಾಲಿಗೆ ಬಿದ್ದು ಜೀವಂತ ಅಸ್ತಿಪಂಜರವಾಗಿದ್ದಾಳೆ.

ಅಪರ್ಣಾ ನಿಧನದ ಬೆನ್ನಲ್ಲಿಯೇ ಬೆಂಗಳೂರು ನಮ್ಮ ಮೆಟ್ರೋ ಮಾರ್ಗದಲ್ಲಿ ಹೊಸ ಮಹಿಳೆಯ ಧ್ವನಿ!

ಹೌದು, ಈಕೆ ಇನ್ನೂ ಹರೆಯದ ವಯಸ್ಸಿನ ಯುವತಿ. ಮದುವೆ ಮಕ್ಕಳು ಏನೂ ಇಲ್ಲ. ಈಕೆ ವಾಸವಿರುವುದು ಚೀನಾದ ಗ್ವಾಂಗ್‌ಡಾಂಗ್ ಪ್ರಾಂತ್ಯದ ಗುವಾಂಗ್‌ಝೌ ಎಂಬಲ್ಲಿ. ಈಕೆಯ ಹೆಸರು ಬೇಬಿ ಟಿಂಗ್ಜಿ (Baby Tingzi). ಈಕೆ ಚೀನಾದ ಮಹಿಳೆಯರು ಇರುವಂತೆಯೇ ಸರಾಸರಿ 160 ಸೆಂ.ಮೀ ಎತ್ತರವಿದ್ದಾಳೆ. ಆದರೆ, ಈಕೆ ತೂಕ ಮಾತ್ರ ಕೇವಲ 25 ಕೆ.ಜಿ. ತೂಕವಿದ್ದಾಳೆ. ಆದರೆ, ಈ ತೂಕದಲ್ಲಿಯೂ ಮತ್ತಷ್ಟು ಕಡಿಮೆ ಮಾಡಿಕೊಳ್ಳುವ ಇಂಗಿತನವನ್ನು ಹೊಂದಿದ್ದು, ಅದಕ್ಕಾಗಿ ತಾನೇನು ಮಾಡಬೇಕು ಹೇಳಿ ಸ್ನೇಹಿತರೇ ಎಂದು ಸಾಮಾಜಿಕ ಜಾಲತಾಣದಲ್ಲಿ ಸಲಹೆಗಳನ್ನು ಕೇಳಿದ್ದಾಳೆ.

ಭಾರತದಲ್ಲಿ ಬ್ಯಾನ್ ಆಗಿರುವ ಟಿಕ್‌ಟಾಕ್‌ ಸಾಮಾಜಿಕ ಜಾಲತಾಣದ ಚೀನಾದ ಆವೃತ್ತಿಯಾದ ಡೌಯಿನ್‌ನಲ್ಲಿ ಬೇಬಿ ಟಿಂಗ್ಜಿ ಬರೋಬ್ಬರಿ 42,000ಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಅವರಲ್ಲಿ ಹೆಚ್ಚಿನವರು ಟಿಂಗ್ಜಿಯ ಆರೋಗ್ಯದ ಬಗ್ಗೆ ನಿರಂತರವಾಗಿ ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ. ಬೇಬಿ ಟಿಂಗ್ಜಿ ಅವರ ಕಾಳಜಿಯ ಸಲಹೆಗಳನ್ನು ದೂರವಿಟ್ಟು, ನಾನು ಇನ್ನೂ ತೆಳಗಾಗಬೇಕು ಅದಕ್ಕೇನಾದರೂ ಸಲಹೆಗಳನ್ನು ನೀಡಿ ಎಂದು ಕೇಳಿಕೊಂಡಿದ್ದಾಳೆ. ಜೊತೆಗೆ, ನನ್ನ ಅಸ್ಥಿಪಂಜರದಂತಹ ಸಿಲೂಯೆಟ್ ದೇಹವು ತನ್ನ ಜೀವನದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ತೆಳ್ಳಗಿನ ಮೈಕಟ್ಟು ಪ್ರದರ್ಶಿಸಲು ನಿರಂತರವಾಗಿ ತನ್ನ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾಳೆ.

ಬುಸುಗುಡುತ್ತಾ ಕಚ್ಚಲು ಬಂದ ವಿಷಕಾರಿ ಹಾವನ್ನು ಮಕಾಡೆ ಮಲಗಿಸಿದ ಮುಸ್ಲಿಂ ಬಾಬಾ!

ಬೇಬಿ ಟಿಂಗ್ಜಿ ಪೋಸ್ಟ್ ಮಾಡಿದ ಹಲವು ಪೋಟೋ ಹಾಗೂ ವಿಡಿಯೋಗಳಲ್ಲಿ ತುಂಡು ಬಟ್ಟೆ ಧರಿಸಿ ಡ್ಯಾನ್ಸ್ ಮಾಡಿದ್ದಾಳೆ. ಇದರಲ್ಲಿ ತನ್ನ ತೆಳ್ಳಗಿನ ದೇಹ, ಭುಜ, ಕಾಲುಗಳು ಮತ್ತು ತೋಳುಗಳನ್ನು ತೋರಿಸಿದ್ದಾಳೆ. ಜೊತೆಗೆ, ತನ್ನ ತೆಳ್ಳಗಿನ ದೇಹದ ಮೈಕಟ್ಟಿನಿಂದಲೇ ಅಭಿಮಾನಿಗಳನ್ನು ಹೆಚ್ಚಳ ಮಾಡಿಕೊಳ್ಳಲು ಪ್ರಯತ್ನ ಮುಂದುವರೆಸಿದ್ದಾಳೆ. ಚೀನಾದ ಟಿಕ್‌ಟಾಕ್‌ನಲ್ಲಿ ತನ್ನ ಫೋಟೋ ವೈರಲ್ ಆಗುತ್ತಿದ್ದಂತೆ, ಕೆಲವರು ಈಕೆಗೆ ಅನೋರೆಕ್ಸಿಯಾ ಎಂಬ ರೋಗಿವಿದೆ ಎಂದು ಕಾಮೆಂಟ್ ಮಾಡಿದ್ದು, ತುರ್ತು ವೈದ್ಯಕೀಯ ಸಹಾಯ ಪಡೆಯುವಂತೆ ಸಲಹೆ ಕೊಟ್ಟಿದ್ದಾರೆ. ಇನ್ನು ಈಕೆ ಡ್ಯಾನ್ಸ್ ವಿಡಿಯೋಗೆ ಅಸ್ಥಿಪಂಜರ ಡ್ಯಾನ್ಸ್ ಮಾಡುತ್ತಿದೆ, ನೀವು ಇನ್ನು ಕೆಲವೇ ಕ್ಷಣಗಳಲ್ಲಿ ಸಾಯುವ ರೋಗಿಯಂತೆ ಕಾಣುತ್ತಿದ್ದೀರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಕೃಪೆ: ಒಡಿಟಿ ಸೆಂಟ್ರಲ್ ವೆಬ್‌ಸೈಟ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತೀಯರ ಎಚ್‌-1ಬಿ ವೀಸಾ ಸಂದರ್ಶನ ದಿಢೀರ್‌ ರದ್ದು : ಕಿಡಿ
ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!