ಪತ್ನಿಯ ಇನ್‌ಸ್ಟಾಗ್ರಾಂ ಪೋಸ್ಟ್‌ನಿಂದ ಗಂಡ ಅರೆಸ್ಟ್

Published : Jul 13, 2024, 02:36 PM ISTUpdated : Jul 13, 2024, 02:51 PM IST
ಪತ್ನಿಯ ಇನ್‌ಸ್ಟಾಗ್ರಾಂ ಪೋಸ್ಟ್‌ನಿಂದ ಗಂಡ ಅರೆಸ್ಟ್

ಸಾರಾಂಶ

ಆಂಡ್ರೆಝಾ ಡಿ ಲಿಮಾ ಮಾಡಿದ ಇನ್‌ಸ್ಟಾಗ್ರಾಂ ಪೋಸ್ಟ್ ಮಾಹಿತಿ ಆಧರಿಸಿಯೇ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬ್ರೆಜಿಲ್: ಕಳೆದ ಎರಡು ವರ್ಷಗಳಿಂದ ಪೊಲೀಸರಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಡ್ರಗ್ ಕಿಂಗ್‌ಪಿನ್‌ನನ್ನು ಬಂಧಿಸಲಾಗಿದೆ. ರೊನಾಲ್ಡ್ ರೋಲ್ಯಾಂಡ್ ಬಂಧಿತ ಡ್ರಗ್ ಕಿಂಗ್‌ಪಿನ್. ರೊನಾಲ್ಡ್ ರೋಲ್ಯಾಂಡ್, ಪತ್ನಿ ಆಂಡ್ರೆಝಾ ಡಿ ಲಿಮಾ ಮತ್ತು ಇವರ ಮಗಳು  ಕಳೆದ ಎರಡು ವರ್ಷಗಳಿಂದ ನಾಪತ್ತೆಯಾಗಿದ್ದರು. ಇದೀಗ ಆಂಡ್ರೆಝಾ ಡಿ ಲಿಮಾ ಮಾಡಿದ ಇನ್‌ಸ್ಟಾಗ್ರಾಂ ಪೋಸ್ಟ್ ಮಾಹಿತಿ ಆಧರಿಸಿಯೇ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ತಮ್ಮ ಲೋಕೇಶನ್ ಶೇರ್ ಮಾಡಿಕೊಂಡಿದ್ದರಿಂದ ಪೊಲೀಸರಿಗೆ ಸ್ಥಳ ಗೊತ್ತಾಗಿತ್ತು.

ಡಿ ಲಿಮಾ ಬಿಕಿನಿ ವ್ಯವಹಾರ ಮಾಡಿಕೊಂಡಿದ್ದು, ವಿಲಾಸಿ ಜೀವನ ನಡೆಸುತ್ತಾ ಕೋಲೊಂಬಿಯಾ, ಫ್ರಾನ್ಸ್, ದುಬೈ, ಮಾಲ್ಡಿವ್ಸ್ ಅಂತ ವಿದೇಶ ಪ್ರಯಾಣ ಮಾಡುತ್ತಿರುತ್ತಾಳೆ. ರೆಸ್ಟೊರೆಂಟ್‌ನಲ್ಲಿ ಪತಿ ಜೊತೆ ಊಟ ಮಾಡುತ್ತಿರುವ ಫೋಟೋವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಳು. ಡೈಲಿ ಮೇಲ್ ವರದಿ ಪ್ರಕಾರ, ಬಂಧಿತ ರೊನಾಲ್ಡ್ ಬಳಿಯಿಂದ ಅಪಾರ ಪ್ರಮಾಣದ ನಗದು, ಆಭರಣಗಳು, ಬಂದೂಕು ಹಾಗೂ ಒಡೆತನದಲ್ಲಿದ್ದ ಐಷಾರಾಮಿ ಬೋಟ್, 34 ಕಾರ್ ಹಾಗೂ ವಿಮಾನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ರೊನಾಲ್ಡ್ ರೋಲ್ಯಾಂಡ್ ಮೆಕ್ಸಿಕೋದಲ್ಲಿಯ ಡ್ರಗ್ಸ್ ಸಾಗಾಟದಾರರ ಜೊತೆಯಲ್ಲಿಯೂ ಸಂಪರ್ಕ ಹೊಂದಿದ್ದನು ಎಂದು ಬ್ರೆಜಿಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಏಳೂವರೆ ಸಾವಿರ ಕೋಟಿಯ ವ್ಯವಹಾರ

ಕಳೆದ ಐದು ವರ್ಷಗಳಲ್ಲಿ ರೊನಾಲ್ಡ್ ರೋಲ್ಯಾಂಡ್ ಬರೋಬ್ಬರಿ $900 ಮಿಲಿಯನ್ (ರೂ. 7,500 ಕೋಟಿ) ಅಧಿಕ ವ್ಯವಹಾರ ಮಾಡಿದ್ದಾನೆ. ಇದೇ ಹಣದಿಂದಲೇ ಪತ್ನಿ ಬಿಕಿನಿ ಉದ್ಯಮ ನಡೆಸುತ್ತಿದ್ದಳು. ಈ ವ್ಯವಹಾರದ ಮೂಲಕ ಅಕ್ರಮ ಹಣದ ವಹಿವಾಟು ನಡೆಸಲಾಗುತ್ತಿತ್ತು. ಆರ್ಥಿಕವಾಗಿ ಹಿಂದುಳಿದ ಬಂಡವಾಳ ಕೊರತೆ ಹೊಂದಿರುವವರನ್ನು ಪಾಲುದಾರರನ್ನಾಗಿ ಮಾಡಿಕೊಳ್ಳುತ್ತಿದ್ದನು. ನಂತರ ಪಾಲುದಾರರ ಹೆಸರಿನಲ್ಲಿ ಕಾರ್, ವಿಮಾನ ಖರೀದಿ ಮಾಡುತ್ತಿದ್ದನು ಎಂದು ತನಿಖಾಧಿಕಾರಿ ರೂಯಿಜ್ ಹೇಳಿದ್ದಾರೆ.

ಒಂದೇ ಒಂದು ಗುರಿ ಸಾಧನೆಗೆ 20 ಬಾಯ್‌ಫ್ರೆಂಡ್‌ ಮಾಡ್ಕೊಂಡ ಚಾಲಾಕಿ ಯುವತಿ

ದೇಶಿ ಡ್ರಗ್ಸ್ ಡೀಲರ್ ಜೊತೆ ಸಂಪರ್ಕ 

ರೆಸ್ಟೋರೆಂಟ್‌ ಉದ್ಯೋಗಿಯಾಗಿದ್ದ ರೊನಾಲ್ಡ್ ರೋಲ್ಯಾಂಡ್, ಹತ್ತು ಮಿಲಿಯನ್‌ಗೂ ಅಧಿಕ ವ್ಯವಹಾರ ನಡೆಸುತ್ತಿದ್ದ ಕಂಪನಿಗಳಲ್ಲಿ ಪಾಲುದಾರನಾಗಿದ್ದನು. ಇಷ್ಟು ಮಾತ್ರವಲ್ಲ ರೊನಾಲ್ಡ್ ರೋಲ್ಯಾಂಡ್ ಪೈಲಟ್‌ ಆಗಿಯೂ ಕೆಲಸ ಮಾಡಿದ್ದಾನೆ. ಈ ವೇಳೆ ದಕ್ಷಿಣ ಮತ್ತು ಮಧ್ಯ ಅಮೆರಿಕದಿಂದ ಮೆಕ್ಸಿಕೊಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತು ಸಾಗಾಟ ಮಾಡಿದ್ದನು. ಈ ಸಂದರ್ಭದಲ್ಲಿ ವಿದೇಶಿ ಡ್ರಗ್ಸ್ ಡೀಲರ್ ಜೊತೆ ಸಂಪರ್ಕ ಸಾಧಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಐಷಾರಾಮಿ ಕಾರ್‌ಗಳಲ್ಲಿ ಪ್ರಯಾಣ

2019ರಲ್ಲಿಯೂ ಸೋಶಿಯಲ್ ಮೀಡಿಯಾದಲ್ಲಿ ರೊನಾಲ್ಡ್ ಫೋಟೋ ರಿವೀಲ್ ಆಗಿತ್ತು. ಮಿನಾಸ್ ಗೆರೈಸ್‌ನ ಉಬರ್‌ಲ್ಯಾಂಡಿಯಾ ನಗರದಿಂದ ಕಾಂಡೋಮಿನಿಯಂಗೆ ಸ್ಥಳಾಂತರಗೊಳ್ಳುವಾಗ ರೊನಾಲ್ಡ್ ಚಲನೆಯ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಒಮ್ಮೆ $91,500 ಮೌಲ್ಯದ ಕಾರ್, ಮತ್ತೊಮ್ಮೆ  $183,000, ಮಗದೊಮ್ಮೆ  $146,000 ಮೌಲ್ಯದ ಕಾರ್‌ನಲ್ಲಿ ಪ್ರಯಾಣಿಸಿದ್ದನು. ರೊನಾಲ್ಡ್ ಮುಖದ ಮೇಲೆ ಕಲೆಗಳಿದ್ದವು. ಕಾಸ್ಮೆಟಿಕ್ ಸರ್ಜರಿಯಿಂದ ಮುಖದ ಮೇಲಿನ ಕಲೆಗಳೆಲ್ಲಾ ಹೋಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿದೇಶದಲ್ಲಿ ಉದ್ಯೋಗ ಆಮಿಷ: ನಂಬಿ ಬಂದವರಿಗೆ ಹನಿಟ್ರ್ಯಾಪ್ ಕೆಲಸ: ಭಾರತೀಯರ ಬಳಸಿ ಭಾರತೀಯರಿಗೆ ನಾಮ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ
ಅಮೆರಿಕಾದ ಬಳಿಕ ಈಗ ಮೆಕ್ಸಿಕೋದಿಂದಲೂ ಭಾರತದ ಮೇಲೆ ಶೇ.50 ಸುಂಕ: ಜನವರಿ 1ರಿಂದಲೇ ಹೊಸ ತೆರಿಗೆ ಜಾರಿ