ಬಾಂಗ್ಲಾ ವಿದ್ಯಾರ್ಥಿಗಳ ರಕ್ಷಣೆ: ಮೋದಿಗೆ ಥ್ಯಾಂಕ್ಸ್ ಹೇಳಿದ ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ

By Suvarna NewsFirst Published Mar 9, 2022, 12:51 PM IST
Highlights
  • ಉಕ್ರೇನ್‌ನಲ್ಲಿ ಸಿಲುಕಿದ್ದ 9 ಬಾಂಗ್ಲಾ ವಿದ್ಯಾರ್ಥಿಗಳ ರಕ್ಷಣೆ
  • ಬಾಂಗ್ಲಾ ವಿದ್ಯಾರ್ಥಿಗಳನ್ನು ರಕ್ಷಿಸಿದ ಭಾರತೀಯ ಅಧಿಕಾರಿಗಳು
  • 9 ಬಾಂಗ್ಲಾ ತಲಾ ಒಂದು ನೇಪಾಳಿ, ಪಾಕ್‌ ಪ್ರಜೆಯ ರಕ್ಷಣೆ

ನವದೆಹಲಿ(ಮಾ.9): ಯುದ್ಧ ಪೀಡಿತ ಉಕ್ರೇನ್‌ನಿಂದ 9 ಬಾಂಗ್ಲಾದೇಶಿಯರನ್ನು ರಕ್ಷಿಸಿದ್ದಕ್ಕಾಗಿ ಬಾಂಗ್ಲಾದೇಶ (Bangladesh) ಪ್ರಧಾನಿ ಶೇಖ್ ಹಸೀನಾ (Sheikh Hasina) ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ. ರಷ್ಯಾದ ಆಕ್ರಮಣದ ನಂತರ ಭಾರತ ಸರ್ಕಾರ ತನ್ನ ಪ್ರಜೆಗಳ ರಕ್ಷಣೆಗೆ ಆಪರೇಷನ್ ಗಂಗಾ (Operation Ganga) ಹೆಸರಿನ ಕಾರ್ಯಾಚರಣೆ ನಡೆಸಿ ಉಕ್ರೇನ್‌ನಲ್ಲಿ ಸಿಲುಕಿದ್ದ ಸಾವಿರಾರು ವಿದ್ಯಾರ್ಥಿಗಳನ್ನು ಭಾರತಕ್ಕೆ ಸ್ಥಳಾಂತರಿಸಿತ್ತು. ಈ ಕಾರ್ಯಾಚರಣೆಯಲ್ಲಿ ಕೇವಲ ಭಾರತೀಯ ವಿದ್ಯಾರ್ಥಿಗಳು ಮಾತ್ರವಲ್ಲದೇ ನೆರೆಯ ಸಣ್ಣಪುಟ್ಟ ರಾಷ್ಟ್ರಗಳ ವಿದ್ಯಾರ್ಥಿಗಳನ್ನು ಭಾರತ ರಕ್ಷಿಸಿದೆ. ಈ ಕಾರ್ಯಾಚರಣೆಯಲ್ಲಿ ಬಾಂಗ್ಲಾದೇಶದ ಒಂಬತ್ತು ನಾಗರಿಕರನ್ನು ಕೂಡ ರಕ್ಷಿಸಲಾಗಿದ್ದು, ಯುದ್ಧ ಪೀಡಿತ ಉಕ್ರೇನ್‌ನಿಂದ ತಮ್ಮ ದೇಶದ ಪ್ರಜೆಗಳನ್ನು ಸ್ಥಳಾಂತರಿಸಿದ್ದಕ್ಕಾಗಿ ಭಾರತದ ಪ್ರಧಾನಿ ಮೋದಿ ಅವರಿಗೆ ಬಾಂಗ್ಲಾ  ಪ್ರಧಾನಿ ಶೇಖ್ ಹಸೀನಾ ಧನ್ಯವಾದ ಅರ್ಪಿಸಿದ್ದಾರೆ.

ಎರಡು ವಾರಗಳ ಹಿಂದೆ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದಾಗಿನಿಂದಲೂ ಭಾರತವು ತನ್ನ ಪ್ರಜೆಗಳ ರಕ್ಷಣಾ ಕಾರ್ಯಾಚರಣೆ ನಡೆಸುತ್ತಲೇ ಇದೆ. ಈ ಕಾರ್ಯಾಚರಣೆಯ ಅಡಿಯಲ್ಲಿ ನೇಪಾಳ (Nepal), ಪಾಕ್‌ ಹಾಗೂ ಟ್ಯುನೀಷಿಯಾದ (Tunisia) ವಿದ್ಯಾರ್ಥಿಗಳನ್ನು ಸಹ ರಕ್ಷಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Prime Minister of Bangladesh Sheikh Hasina thanks PM Narendra Modi for rescuing its 9 nationals from Ukraine under ‘Operation Ganga’. Nepalese, Tunisian students were also rescued under this operation: Government sources

(file photos) pic.twitter.com/lXcMt8zu4A

— ANI (@ANI)

 

ಇಂದು ಮುಂಜಾನೆ ಯುದ್ಧಪೀಡಿತ ಉಕ್ರೇನ್‌ನಿಂದ ರಕ್ಷಿಸಲ್ಪಟ್ಟ ವಿದ್ಯಾರ್ಥಿನಿಯೊರ್ವಳು ಕೂಡ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾಳೆ. ಪಾಕ್ನ ವಿದ್ಯಾರ್ಥಿನಿ ಅಸ್ಮಾ ಶಫೀಕ್, ತನ್ನನ್ನು ರಕ್ಷಿಸಿದ್ದಕ್ಕಾಗಿ ಭಾರತ ಸರ್ಕಾರ, ಪ್ರಧಾನಿ, ಭಾರತದ ರಾಯಭಾರ ಕಚೇರಿ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಳು. 

Operation Ganga: ಈವರೆಗೂ 17,900 ಭಾರತೀಯರು ತಾಯ್ನಾಡಿಗೆ ವಾಪಸ್

ಫೆಬ್ರವರಿ 28 ರಂದು, ಪ್ರಧಾನಿ ಕಾರ್ಯಾಲಯವು ಉಕ್ರೇನ್‌ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿತು. ಇದರಲ್ಲಿ ಅವರು ಉಕ್ರೇನ್‌ನಲ್ಲಿ ಸಿಲುಕಿರುವ ನೆರೆಯ ದೇಶಗಳ ವಿದ್ಯಾರ್ಥಿಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಜನರಿಗೆ ಭಾರತೀಯ ಅಧಿಕಾರಿಗಳು ಸಹಾಯ ಮಾಡುತ್ತಾರೆ ಎಂದು ಹೇಳಿದರು. ಭಾರತದ ಧ್ಯೇಯವಾಕ್ಯ 'ವಸುಧೈವ ಕುಟುಂಬಕಂ' ಇಡೀ ಜಗತ್ತು ಒಂದೇ ಕುಟುಂಬ ಎಂಬ ವಿಚಾರದಿಂದ ಪ್ರಭಾವಿಸಲ್ಪಟ್ಟಿರುವ ಪ್ರಧಾನಿ, ಉಕ್ರೇನ್‌ನಲ್ಲಿ ಸಿಲುಕಿರುವ ನೆರೆಯ ದೇಶಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಜನರಿಗೆ ಭಾರತ ಸಹಾಯ ಮಾಡುತ್ತದೆ ಮತ್ತು ಅವರು ಸಹಾಯವನ್ನು ಪಡೆಯಬಹುದು ಎಂದು ಹೇಳಿದರು.

ಆಪರೇಷನ್‌ ಗಂಗಾದಲ್ಲಿ ರಕ್ಷಿಸಲ್ಪಟ್ಟ ಪಾಕಿಸ್ತಾನಿ ವಿದ್ಯಾರ್ಥಿನಿ... ಮೋದಿ ಬಗ್ಗೆ ಹೇಳಿದ್ದಿಷ್ಟು
 

ಯುದ್ಧ ಪೀಡಿತ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸುವ ವಿಚಾರದಲ್ಲಿ ಭಾರತವು ಈ ಹಿಂದೆಯೂ ಹಲವಾರು ದೇಶಗಳಿಗೆ ನೆರವು ನೀಡಿದೆ. 2015 ರಲ್ಲಿ ದಿವಂಗತ ಸುಷ್ಮಾ ಸ್ವರಾಜ್ (Sushma Swaraj) ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದಾಗ,  ಯೆಮೆನ್‌ನಿಂದ (Yemen) ಭಾರತವು 4714 ಭಾರತೀಯರನ್ನು ಮಾತ್ರವಲ್ಲದೆ 48 ದೇಶಗಳ 1947 ಜನರನ್ನು ರಕ್ಷಿಸಿತ್ತು. ಜನರಲ್ (ನಿವೃತ್ತ) ವಿ.ಕೆ .ಸಿಂಗ್ (VK Singh) ಅವರು ಯೆಮೆನ್‌ನಿಂದ ಸ್ಥಳಾಂತರಿಸುವ ಈ ರಾಹತ್‌ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿದ್ದರು. 

ಸಮರಪೀಡಿತ ಉಕ್ರೇನ್‌ನ ಸುಮಿ ನಗರದಲ್ಲಿ ಸಿಲುಕಿ ಪರದಾಡುತ್ತಿದ್ದ ಎಲ್ಲ ಭಾರತೀಯರನ್ನು ರಕ್ಷಿಸಲಾಗಿದೆ. ಸುಮಿಯಲ್ಲಿದ್ದ ಎಲ್ಲ 694 ಭಾರತೀಯ ವಿದ್ಯಾರ್ಥಿಗಳನ್ನು ಹಾಗೂ ಇತರರನ್ನು ರಕ್ಷಿಸಿ ಕರೆತರಲಾಗಿದೆ. 

click me!