ಉಕ್ರೇನ್‌ ಸಾಮರ್ಥ್ಯ ಅರಿಯುವಲ್ಲಿ ರಷ್ಯಾ ಎಡವಟ್ಟು?

Published : Mar 09, 2022, 09:48 AM IST
ಉಕ್ರೇನ್‌ ಸಾಮರ್ಥ್ಯ ಅರಿಯುವಲ್ಲಿ ರಷ್ಯಾ ಎಡವಟ್ಟು?

ಸಾರಾಂಶ

* ಉಕ್ರೇನಿ ಯೋಧರಿಂದ ಇಷ್ಟು ಪ್ರತಿರೋಧ ನಿರೀಕ್ಷಿಸಿದ ರಷ್ಯಾ: ಅಮೆರಿಕ * ಉಕ್ರೇನ್‌ ಸಾಮರ್ಥ್ಯ ಅರಿಯುವಲ್ಲಿ ರಷ್ಯಾ ಎಡವಟ್ಟು?  

ವಾಷಿಂಗ್ಟನ್‌(ಮಾ.09): ಉಕ್ರೇನಿನ ಪ್ರತಿರೋಧಿಸುವ ಸಾಮರ್ಥ್ಯವನ್ನು ಕಡಿಮೆ ಅಂದಾಜಿಸಿ ದಾಳಿ ಮಾಡಿದ್ದಕ್ಕಾಗಿ ರಷ್ಯಾದ ಸಾವಿರಾರು ಯೋಧರು ಬಲಿಯಾಗಿದ್ದಾರೆ ಎಂದು ಅಮೆರಿಕದ ಗುಪ್ತಚರ ದಳದ ಅಧಿಕಾರಿ ಮಂಗಳವಾರ ಅಭಿಪ್ರಾಯ ಪಟ್ಟಿದ್ದಾರೆ.

‘ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಉಕ್ರೇನ್‌ನನ್ನು ವಶಪಡಿಸಿಕೊಳ್ಳಲಾಗದ ರಷ್ಯಾದ ಸೇನಾ ವೈಫಲ್ಯದಿಂದ ಹತಾಶರಾಗಿದ್ದಾರೆ. ಉಕ್ರೇನ್‌ ಪ್ರತಿರೋಧ ಒಡ್ಡದೇ ಸುಲಭವಾಗಿ ಶರಣಾಗಬಹುದು ಎಂದು ಊಹಿಸಿದ ಅವರು ಯುದ್ಧ ಗೆಲ್ಲುತ್ತೇವೆ ಎಂದು ನಂಬಿದ್ದರು. ಆದರೆ ಉಕ್ರೇನಿನ ಮೇಲೆ ಯುದ್ಧ ಸಾರಿದ್ದಕ್ಕೆ ಜಾಗತಿಕ ನಿರ್ಬಂಧಗಳಿಗೆ ಒಳಗಾದ ರಷ್ಯಾ ಭಾರೀ ಬೆಲೆ ತೆರುತ್ತಿದ್ದು ಇದನ್ನೇ ಪುಟಿನ್‌ ತಮ್ಮ ಗೆಲುವೆಂದು ಪರಿಗಣಿಸಬಹುದು’ ಎಂದು ರಾಷ್ಟ್ರೀಯ ಗುಪ್ತಚರ ದಳದ ಮುಖ್ಯಸ್ಥ ಅರ್ವಿಲ್‌ ಹೈನ್ಸ್‌ ವ್ಯಂಗ್ಯವಾಡಿದ್ದಾರೆ.

‘ರಷ್ಯಾ ಅಣ್ವಸ್ತ್ರವನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟಿದ್ದಾಗಿ ಘೋಷಿಸಿತ್ತು, ಆದರೆ ರಷ್ಯಾದ ಅಣ್ವಸ್ತ್ರ ಪಡೆಗಳಲ್ಲಿ ಯಾವುದೇ ಅಸಾಮಾನ್ಯ ಕಂಡುಬಂದಿಲ್ಲ. ಸದ್ಯ ಯುದ್ಧವನ್ನು ಗಮನಿಸಿದರೆ ರಷ್ಯಾ ಇಡೀ ಉಕ್ರೇನ್‌ನನ್ನು ವಶಪಡಿಸಿಕೊಳ್ಳಲು ಮುಂದಾಗಬಹುದೇ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ’ ಎಂದಿದ್ದಾರೆ.

ಯುದ್ಧದಲ್ಲಿ ರಷ್ಯಾದ 12 ಸಾವಿರ ಯೋಧರು ಬಲಿ

 

ರಷ್ಯಾ ಉಕ್ರೇನ್‌ ಯುದ್ಧ ಆರಂಭವಾಗಿ 2 ವಾರಗಳಲ್ಲಿ ರಷ್ಯಾದ 12 ಸಾವಿರ ಯೋಧರು ಉಕ್ರೇನ್‌ನ ಪ್ರತಿದಾಳಿಗೆ ಬಲಿಯಾಗಿದ್ದಾರೆ. ಜೊತೆಗೆ ಫೆ.24ರಿಂದ ಮಾ.7ರವರೆಗೆ ರಷ್ಯಾದ 303 ಟ್ಯಾಂಕ್‌ಗಳು, 1,036 ಮಿಲಿಟರಿ ವಾಹನಗಳು, 120 ಫಿರಂಗಿಗಳು, 56 ರಾಕೇಟ್‌ ಲಾಂಚರ್‌ಗಳು, 27 ಯುದ್ಧ ವಿಮಾನ ನಾಶಪಡಿಸಬಲ್ಲ ವ್ಯವಸ್ಥೆ, 48 ವಿಮಾನಗಳು, 80 ಹೆಲಿಕಾಪ್ಟರ್‌ಗಳು, 3 ಯುದ್ಧ ಹಡಗುಗಳು, 60 ಇಂಧನ ಟ್ಯಾಂಕ್‌ಗಳು, 7 ಡ್ರೋನ್‌ಗಳನ್ನು ನಾಶ ಮಾಡಲಾಗಿದೆ. ಅಲ್ಲದೇ ರಷ್ಯಾ ಸೇನೆಯ ಜನರಲ್‌ ಅವರನ್ನು ಖಾರ್ಕೀವ್‌ನಲ್ಲಿ ನಡೆದ ಪ್ರತಿದಾಳಿಯ ವೇಳೆ ಹತ್ಯೆ ಮಾಡಲಾಗಿದೆ ಎಂದು ಹೇಳಿದೆ.

12000: ರಷ್ಯಾ ಯೋಧರು ಬಲಿ

303: ಟ್ಯಾಂಕ್‌ಗಳು ನಾಶ

1,036: ಮಿಲಿಟರಿ ವಾಹನಗಳು ನಾಶ

120: ಫಿರಂಗಿಗಳು ನಾಶ

56: ರಾಕೇಟ್‌ ಲಾಂಚರ್‌ಗಳು ನಾಶ

27: ಯುದ್ಧ ವಿಮಾನ ನಾಶಪಡಿಸಬಲ್ಲ ವ್ಯವಸ್ಥೆ ನಾಶ

48: ವಿಮಾನಗಳು ನಾಶ

80: ಹೆಲಿಕಾಪ್ಟರ್‌ಗಳು ನಾಶ

3: ಯುದ್ಧ ಹಡಗುಗಳು ನಾಶ

60: ಇಂಧನ ಟ್ಯಾಂಕ್‌ಗಳು ನಾಶ

7 ಡ್ರೋನ್‌ಗಳು ನಾಶ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?