ಊಟಕ್ಕೆ ಮೊದಲು ರಫ್ ಅಂತ ಬಾರಿಸ್ತಿದ್ದ ಹೊಟೇಲ್‌: ಗ್ರಾಹಕರಿಗೆ ನೀಡ್ತಿತ್ತು ಏಟಿಗೂ ಬಿಲ್: ಈಗ ಬಂದ್

By Anusha Kb  |  First Published Dec 7, 2023, 3:37 PM IST

ಹೊಟೇಲ್‌ಗಳಿಗೆ ಬಹುತೇಕರು ಭೋಜನ ಸೇವನೆಗೆ ಹೋಗುತ್ತಾರೆ. ಆದರೆ ಈ Shachihoka-ya ಹೊಟೇಲ್‌ಗೆ ಎಲ್ಲರೂ ಸುಂದರ ಹುಡುಗಿಯರ ಕೈನಿಂದ ಏಟು ತಿನ್ನುವುದಕ್ಕಾಗಿಯೇ ಹೋಗುತ್ತಿದ್ದರು. ಆದರೆ ಈಗ ಆ ಹೊಟೇಲ್ ಅನ್ನು ಮುಚ್ಚಿಸಲಾಗಿದೆ.


ಟೊಕಿಯೋ: ಜಪಾನ್‌ನಲ್ಲಿ ಸುಂದರವಾಗಿರುವ ಹುಡುಗಿಯರ ಕೈನಿಂದ ಏಟು ತಿನ್ನುವುದಕ್ಕಾಗಿಯೇ ಡಿಮಾಂಡ್ ಮೇಲೆ ಸ್ಥಾಪಿಸಲಾಗಿದ್ದ ಹೊಟೇಲ್‌ವೊಂದನ್ನು ಈಗ ಮುಚ್ಚಿಸಲಾಗಿದೆ. ಹೊಟೇಲ್‌ಗಳಿಗೆ ಬಹುತೇಕರು ಭೋಜನ ಸೇವನೆಗೆ ಹೋಗುತ್ತಾರೆ. ಆದರೆ ಈ ಹೊಟೇಲ್‌ಗೆ ಎಲ್ಲರೂ ಸುಂದರ ಹುಡುಗಿಯರ ಕೈನಿಂದ ಏಟು ತಿನ್ನುವುದಕ್ಕಾಗಿಯೇ ಹೋಗುತ್ತಿದ್ದರು. ಆದರೆ ಈಗ ಆ ಹೊಟೇಲ್ ಅನ್ನು ಮುಚ್ಚಿಸಲಾಗಿದೆ.  ಜಪಾನ್‌ನ ನಗೊಯ್ ನಗರದಲ್ಲಿದ್ದ ಈ ಸಚಿಹೊಕ -ಯ (Shachihoka-ya) ಹೆಸರಿನ ಹೊಟೇಲ್‌ ಊಟಕ್ಕೆ ಮೊದಲು ಗ್ರಾಹಕರಿಗೆ ಅವರ ಇಷ್ಟದಂತೆ ಕೆನ್ನೆಗೆ ಬಾರಿಸುತ್ತಿತ್ತು.

ನ್ಯೂಯಾರ್ಕ್‌ ಪೋಸ್ಟ್ ವರದಿ ಪ್ರಕಾರ, ಈ ಸಚಿಹೊಕ -ಯ ಹೊಟೇಲ್‌ನಲ್ಲಿ ಗ್ರಾಹಕರ ಒಪ್ಪಿಗೆ ಮೇರೆಗೆ ಅವರ ಕೆನ್ನೆಗೆ ಬಾರಿಸಲಾಗುತ್ತಿತ್ತು. ವಿಚಿತ್ರ ಎಂದರೆ ಯಾರೂ ಸುಮ್ಮಸುಮ್ಮನೇ ಹೊಡೆಯುತ್ತಿರಲಿಲ್ಲ, ಈ ಏಟಿಗೂ ನೀವು ಹಣ ಪಾವತಿ ಮಡಬೇಕಿತ್ತು. ಹಣ ಪಾವತಿ (Payment) ಮಾಡಿದ ನಂತರವಷ್ಟೇ ಯಾರಿಗೆ ಬಿಸಿ ಬಿಸಿ ಕಜ್ಜಾಯ ಬೇಕೋ ಅವರಿಗೆ ಮಾತ್ರ ಹೊಟೇಲ್ ಸಿಬ್ಬಂದಿ ಊಟ ನೀಡುವುದಕ್ಕೂ ಮೊದಲು ತಮ್ಮ ಬಳಿ ಇದ್ದ ಸುಂದರ ವೈಟ್ರೆಸ್‌ಗಳನ್ನು ಕೆನ್ನೆಗೆ ಬಾರಿಸಲು ಕಳುಹಿಸುತ್ತಿದ್ದರು.  

Tap to resize

Latest Videos

undefined

ಗುಡ್‌ಬೈ ಹೇಳ್ತಿದೆ ಬೆಂಗಳೂರಿನ 70 ವರ್ಷ ಹಳೆಯ ನ್ಯೂ ಕೃಷ್ಣ ಭವನ್‌, ರುಚಿಕರ ತಿನಿಸು ಸವಿಯೋಕೆ ಇನ್ನೆರಡೇ ದಿನ ಬಾಕಿ

ಇತ್ತೀಚೆಗೆ @bangkoklad ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರೊಬ್ಬರು ಈ ಹೊಟೇಲ್‌ನಲ್ಲಿ ವೈಟ್ರೆಸ್ ಒಬ್ಬರು ಗ್ರಾಹಕರ ಕೆನ್ನೆಗೆ ಬಾರಿಸುವ ವೀಡಿಯೋವನ್ನು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ (social Media) ಸಾಕಷ್ಟು ವೈರಲ್ ಆಗಿತ್ತು. ಇದಾದ ನಂತರ ಸಚಿಹೊಕ -ಯ ಹೊಟೇಲ್ ಟ್ವಿಟ್ಟರ್‌ನಲ್ಲಿ ಈ 'ಬಿಸಿ ಬಿಸಿ ಕಜ್ಜಾಯ'ದ (ಕಪಾಳಮೋಕ್ಷ ಮಾಡುವ ಸೇವೆ)  ಸೇವೆ ಈಗ ಇಲ್ಲ ಈ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದೆ. 

ಈ ಸಚಿಹೊಕ -ಯ (Shachihoka-ya) ಹೊಟೇಲ್ ಈಗ ಬಾರಿಸುವ ಸೇವೆಯನ್ನು ನೀಡುತ್ತಿಲ್ಲ, ಈ ಸೇವೆಗೆ ಸಿಕ್ಕಿದ ಪ್ರಚಾರವನ್ನು ನಾವು ಮೆಚ್ಚುತ್ತೇವೆ. ಹೊಟೇಲ್‌ನಲ್ಲಿ ಗ್ರಾಹಕರ ಕೆನ್ನೆಗೆ ಬಾರಿಸಿದ ಹಳೆ ವೀಡಿಯೋಗಳು ಹೀಗೆ ಈಗ ವೈರಲ್ ಆಗುತ್ತವೇ ಎಂದು ನಾವು ನಿರೀಕ್ಷಿರಲಿಲ್ಲ, ಹೀಗಾಗಿ ಈಗ ನೀವು ಏಟು ತಿನ್ನುವ ಅನುಭವ ಪಡೆಯಬೇಕು ಎಂಬ ಉದ್ದೇಶದಿಂದ ಈ ಹೊಟೇಲ್‌ಗೆ (Japan Hotel) ಬರುವುದಿದ್ದರೆ ಈ ವಿಚಾರ ನಿಮ್ಮ ಗಮನಕ್ಕೆ ಇರಲಿ ಎಂದು ನವಂಬರ್ 29 ರಂದು ಈ ಸಚಿಹೊಕ -ಯ ಹೊಟೇಲ್ ಟ್ವಿಟ್ಟರ್‌ನಲ್ಲಿ ತಿಳಿಸಿದೆ. 

ಗಂಡನನ್ನು ಸ್ವೀಟ್ ಹಾರ್ಟ್ ಎಂದ್ಲು ವೈಟ್ರೆಸ್, ರಣಚಂಡಿಯಾದ್ಲು ಪಕ್ಕದಲ್ಲಿದ್ದ ಹೆಂಡ್ತಿ!

ಅಂದಹಾಗೆ ಈ ಹೊಟೇಲ್ ಈ ಕಪಾಳಮೋಕ್ಷ ಸೇವೆಗೆ (Slaps) 200 ಜಪಾನೀಸ್ ಯೆನ್ (170 ಭಾರತೀಯ ರೂಪಾಯಿ)ಅನ್ನು ಶುಲ್ಕವಾಗಿ ಪಡೆಯುತ್ತಿತ್ತು. ಅಲ್ಲದೇ ಗ್ರಾಹಕರು ನಮಗೆ ಇಂತಹವರ ಕೈನಿಂದಲೇ ಏಟು ತಿನ್ನಬೇಕು ಎಂದು ಬಯಸಿದರೆ ಈ 300 ಯೆನ್ ಅನ್ನು 500 ಯೇನ್‌ಗೆ (285 ರೂಪಾಯಿ) ಹೆಚ್ಚಿಸುತ್ತಿದ್ದರು. ಈ ಹೊಟೇಲ್ ಮಹಿಳೆಯರು ಪುರುಷರು ಎನ್ನದೇ ಸ್ಥಳೀಯರು ಪ್ರವಾಸಿಗರಿಂದಲೂ ಫೇಮಸ್ ಆಗಿತ್ತು. ಅಲ್ಲದೇ ಬಹುತೇಕ ಏಟು ತಿಂದು ಎಲ್ಲರೂ ಇಲ್ಲಿ ಖುಷಿ ಪಡುತ್ತಿದ್ದರು. ಅಲ್ಲದೇ ತಮಗೆ ಹೀಗೆ ಬಿಸಿಬಿಸಿಯಾಗಿ ಕಿವಿ ಕೆಂಪಾಗುವಂತೆ ಬಾರಿಸಿದ ಹೊಟೇಲ್ ಸಿಬ್ಬಂದಿಗೆ ಧನ್ಯವಾದ ಹೇಳುತ್ತಿದ್ದರು. 

ಈ ಹೊಟೇಲ್‌ 2012ರಲ್ಲಿ ಆರಂಭವಾಗಿತ್ತು.  ಆದರೆ ಈ ಹೊಟೇಲ್ ವ್ಯಾಪಾರವಿಲ್ಲದೇ ಮುಚ್ಚುವ ಹಂತದಲ್ಲಿತ್ತು. ಆದರೆ ಈ ವಿಲಕ್ಷಣವಾದ ಕೆನ್ನೆಗೆ ಬಾರಿಸುವ ಸಾಹಸವನ್ನು ಪರಿಚಯಿಸಿದ ನಂತರ ಈ ಹೊಟೇಲ್‌ನಲ್ಲಿ ವ್ಯಾಪಾರ ಹೆಚ್ಚಾಯ್ತು. ಎಷ್ಟು ಹೆಚ್ಚಾಯ್ತೆಂದರೆ ಕೆನ್ನೆಗೆ ಬಾರಿಸುವುದಕ್ಕಾಗಿಯೇ ಹೊಟೇಲ್ ಸಿಬ್ಬಂದಿಯನ್ನು ನೇಮಕ ಮಾಡುವಷ್ಟರ ಮಟ್ಟಿಗೆ ಹೊಟೇಲ್‌ನಲ್ಲಿ ವ್ಯವಹಾರ ಹೆಚ್ಚಾಯ್ತು ಎಂದು ನ್ಯೂಯಾರ್ಕ್ ಪೋಸ್ಟ್ (Newyork Post) ವರದಿ ಮಾಡಿದೆ. ಆದರೆ ಈಗ ಈ ಹೊಟೇಲ್‌ ಈ ಸೇವೆಯನ್ನು ಸ್ಥಗಿತಗೊಳಿಸಿದೆ. 

click me!