
ತೈಜಿನ್ (ಸೆ.01) ಜಾಗತಿಕ ಮಟ್ಟದಲ್ಲಿ SCO ಶೃಂಗಸಭೆ ಭಾರಿ ಸದ್ದು ಮಾಡುತ್ತಿದೆ.ಚೀನಾದ ತೈಜಿನ್‌ನಲ್ಲಿ ನಡೆಯುತ್ತಿರುವ SCO ಶೃಂಗಸಭೆಯಲ್ಲಿ ಪ್ರಧಾನಿ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದಾರೆ. ವಿಶೇಷ ಅಂದರೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಖಡಕ್ ಸಂದೇಶ ನೀಡಿದ್ದಾರೆ. ವಿಶೇಷ ಅಂದರೆ ಮೂರು ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಮೂರು ಬೇರೆ ಬೆರೆ ಸಂದೇಶ ನೀಡಿದ್ದಾರೆ. ಈ ಮೂಲಕ ಒಂದು ವೇದಿಕೆಯಿಂದ ಜಗತ್ತಿಗೆ ಭಾರತದ ನಿಲುವು ಹಾಗೂ ಬದ್ಧತೆ ಕುರಿತು ಸ್ಪಷ್ಟಪಡಿಸಿದ್ದಾರೆ. ಮೋದಿ ತಮ್ಮ ಭಾಷಣದಲ್ಲಿ ಡೋನಾಲ್ಡ್ ಟ್ರಂಪ್‌ಗೆ ಸಂದೇಶ ನೀಡಿದ್ದರೆ, ಚೀನಾಗೆ ಕೆಲ ಘಟನೆಗಳನ್ನು ನೆನಪಿಸಿದ್ದಾರೆ. ಇತ್ತ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
SCO ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೈಕುಲುಕಿ ಬಳಿಕ ಪುಟಿನ್ ಕಾರಿನಲ್ಲಿ ಮೋದಿ ಪ್ರಯಾಣಿಸಿದ್ದಾರೆ. ಕಾರಿನಲ್ಲಿ ಪುಟಿನ್ ಜೊತೆ 45 ನಿಮಿಷ ಕಾಲ ಮಾತುಕತೆ ನಡೆಸಿದ್ದಾರೆ. ರಷ್ಯಾ ಜೊತೆ ಮೋದಿ ಮಾತುಕತೆ, ಆತ್ಮೀಯ ಸಂಬಂಧ ನೇರವಾಗಿ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿ, ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳ ಕುರಿತು ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಪುಟಿನ್ ಜೊತೆಗೆ ಲಿಮೋಸಿನ್ ಕಾರಿನಲ್ಲಿ ಮೋದಿ ಪಯಣ, 6200 ಕೆಜಿ ತೂಕದ ಈ ವಾಹನದಲ್ಲಿದೆ ಗರಿಷ್ಠ ಭದ್ರತೆ
ಪ್ರಧಾನಿ ತಮ್ಮ ಭಾಷಣದಲ್ಲಿ ಯಾವುದೇ ರಾಷ್ಟ್ರದ ಹೆಸರು ಹೇಳದೆ ಚೀನಾಗೆ ರಿಮೈಂಡರ್ ಕೊಟ್ಟಿದ್ದಾರೆ. ಸಂಪರ್ಕ ಹಾಗೂ ಸಾರ್ವಭೌಮತ್ವ ಕುರಿತು ಮಾತನಾಡಿದ ಮೋದಿ, ಚೀನಾ ಹಾಗೂ ಪಾಕಿಸ್ತಾನ ಗಡಿಯಲ್ಲಿ ನಡೆಸುತ್ತಿರುವ ಕಾರಿಡಾರ್ ಕಾಮಗಾರಿ ದೇಶದ ಸೌರ್ವಭೌಮತ್ವಕ್ಕೆ ಧಕ್ಕೆಯಾಗಲಿದೆ. ದೇಶದ ಮೇಲಿನ ನಂಬಿಕೆ ಕಳೆದುಕೊಳ್ಳಲಿದೆ ಎಂದು ನೆನಪಿಸಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಸೇರಿದಂತೆ ಪಾಕಿಸ್ತಾನದ ನಿಯೋಗದ ಎದರೇ ಪ್ರಧಾನಿ ಮೋದಿ ಭಯೋತ್ಪಾದಕತೆ ವಿರುದ್ದ ಗುಡುಗಿದ್ದಾರೆ. ವಿಶ್ವವೇ ಭಯೋತ್ಪಾದಕತ ವಿರುದ್ಧವಾಗಿದೆ ಎಂದಿದ್ದಾರೆ. ಇಷ್ಟೇ ಅಲ್ಲ SCO ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳು ಪೆಹಲ್ಗಾಂ ಉಗ್ರ ದಾಳಿಯನ್ನು ಖಂಡಿಸಿದೆ. ಪಾಕಿಸ್ತಾನ ಉಗ್ರರನ್ನು ಪೋಷಿಸುವುದು, ಗಡಿಯೊಳಗೆ ಉಗ್ರರ ನುಸುಳಿಸಿ ಭಾರತದಲ್ಲಿ ವಿದ್ವಂಸಕ ಕೃತ್ಯಗಳನ್ನು ನಿಲ್ಲಿಸುವುದಿಲ್ಲವೋ ಅಲ್ಲೀವರೆಗೆ ಭಾರತ ಯಾವುದೇ ವ್ಯವಹಾರಗಳನ್ನು ಉಗ್ರ ಪೋಷಣೆ ರಾಷ್ಟ್ರದ ಜೊತೆ ಇಟ್ಟುಕೊಳ್ಳುವುದಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ