ಸೌದಿಯಲ್ಲಿ 11 ಇಸ್ಲಾಮಿಕ್‌ ದೇಶಗಳಿಗೆ ಯೋಗ ಶಿಬಿರ: ಕಟ್ಟಾ ಇಸ್ಲಾಮಿಕ್‌ ದೇಶದಲ್ಲಿ ಮೊದಲ ಬಾರಿ ಶಿಬಿರ

By Kannadaprabha NewsFirst Published Dec 28, 2022, 8:09 AM IST
Highlights

ಭಾರತದ ಕೆಲ ರಾಜ್ಯಗಳಲ್ಲಿ ಯೋಗವನ್ನು ಶಿಕ್ಷಣದ ಒಂದು ಭಾಗವಾಗಿ ಮಾಡಲು ಮುಂದಾಗಿದ್ದಕ್ಕೆ ಧಾರ್ಮಿಕ ಕಾರಣ ನೀಡಿ ಆಕ್ಷೇಪಗಳು ವ್ಯಕ್ತವಾದ ಹೊತ್ತಲ್ಲೇ, ಕಟ್ಟಾ ಇಸ್ಲಾಮಿಕ್‌ ನಿಯಮಗಳು ಜಾರಿಯಲ್ಲಿರುವ ಸೌದಿ ಅರೇಬಿಯಾದಲ್ಲಿ ಯೋಗವನ್ನು ಪ್ರಚುರಪಡಿಸುವ ಕೆಲಸಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಜೆಡ್ಡಾ (ಡಿಸೆಂಬರ್ 28, 2022): ಮೊಹಮ್ಮದ್‌ ಬಿನ್‌ ಸಲ್ಮಾನ್‌ (Mohammed Bin Salman) ಪ್ರಧಾನಿಯಾದ (Prime mInister) ಬಳಿಕ ಶಿಕ್ಷಣ ಮತ್ತು ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದಂತೆ ಹಲವು ಸುಧಾರಣಾವಾದಿ ಕ್ರಮಗಳಿಗೆ ಸಾಕ್ಷಿಯಾಗಿರುವ ಸೌದಿ ಅರೇಬಿಯಾ (Saudi Arabia), ಇದೀಗ ತನ್ನ ಮತ್ತು ಪಕ್ಕದ ಅರಬ್‌ ದೇಶಗಳಲ್ಲಿ (Arab Countries) ಯೋಗವನ್ನು (Yoga) ಹೆಚ್ಚು ಪ್ರಚುರಗೊಳಿಸುವ ಸಲುವಾಗಿ ಜೆಡ್ಡಾದಲ್ಲಿ (Jeddah) 8 ದಿನಗಳ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಅರಬ್‌ ದೇಶವೊಂದರಲ್ಲಿ ಇತರೆ ಇಸ್ಲಾಮಿಕ್‌ ರಾಷ್ಟ್ರಗಳನ್ನು (Islamic Countries) ಆಹ್ವಾನಿಸಿ ಇಂಥ ಶಿಬಿರ ಆಯೋಜಿಸುತ್ತಿರುವುದು ಇದೇ ಮೊದಲು. ಈ ಶಿಬಿರದಲ್ಲಿ 11 ಅರಬ್‌ ದೇಶಗಳು ಭಾಗಿಯಾಗಿವೆ ಎಂಬುದು ವಿಶೇಷ.
ಭಾರತದ ಕೆಲ ರಾಜ್ಯಗಳಲ್ಲಿ ಯೋಗವನ್ನು ಶಿಕ್ಷಣದ ಒಂದು ಭಾಗವಾಗಿ ಮಾಡಲು ಮುಂದಾಗಿದ್ದಕ್ಕೆ ಧಾರ್ಮಿಕ ಕಾರಣ ನೀಡಿ ಆಕ್ಷೇಪಗಳು ವ್ಯಕ್ತವಾದ ಹೊತ್ತಲ್ಲೇ, ಕಟ್ಟಾ ಇಸ್ಲಾಮಿಕ್‌ ನಿಯಮಗಳು ಜಾರಿಯಲ್ಲಿರುವ ಸೌದಿ ಅರೇಬಿಯಾದಲ್ಲಿ ಯೋಗವನ್ನು ಪ್ರಚುರಪಡಿಸುವ ಕೆಲಸಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಸೌದಿ ಅರೇಬಿಯಾದ ಕ್ರೀಡಾ ಸಚಿವಾಲಯ ಆಯೋಜಿಸಿರುವ ಈ ಶಿಬಿರಕ್ಕೆ ‘ಅ​ರಬ್‌ ಯುವ ಸಬ​ಲೀ​ಕ​ರಣ ಕಾರ್ಯ​ಕ್ರ​ಮ’ ಎಂದು ಹೆಸರಿಡಲಾಗಿದೆ. ದೇಶದ ವಾಣಿಜ್ಯ ರಾಜ​ಧಾನಿ ಜೆಡ್ಡಾದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಯೋಗ ಸಂಬಂಧಿತ ಉಪ​ನ್ಯಾ​ಸ​ಗಳು ಹಾಗೂ ಪ್ರಾಯೋ​ಗಿಕ ತರ​ಬೇ​ತಿ​ ನೀಡಲಾಗುತ್ತಿದೆ. ಸೌದಿ ಅರೇಬಿಯಾದ ಮೊದಲ ಯೋಗಪಟು, ಪದ್ಮಶ್ರೀ ಪುರ​ಸ್ಕೃತೆ ನೌಫ್‌ ಅಲ್‌- ಮರ್ವಾಯಿ ಅವರು ಶಿಬಿರದಲ್ಲಿ ಯೋಗ​ದಿಂದಾ​ಗುವ ಲಾಭ​ದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. 

ಇದನ್ನು ಓದಿ: ಹೈಪರ್‌ಟೆನ್ಷನ್ ಕಡಿಮೆ ಮಾಡಲು ಯೋಗ ಮಾಡಿ

ಈ ಬಗ್ಗೆ ಮಾಹಿತಿ ನೀಡಿದ ಸೌದಿ ಯೋಗ ಸಮಿತಿಯ ಅಧ್ಯಕ್ಷರಾದ ನೌಫ್ ಅಲ್-ಮಾರ್ವಾಯಿ ಅವರು "ಅರಬ್ ಯುವ ಸಬಲೀಕರಣ ಕಾರ್ಯಕ್ರಮದೊಳಗೆ ಅರಬ್ ನಿಯೋಗಗಳಿಗೆ ಉಪನ್ಯಾಸ ಮತ್ತು ತರಬೇತಿ ಕಾರ್ಯಾಗಾರದಲ್ಲಿ ಸೌದಿ ಯೋಗ ಸಮಿತಿಯ ಭಾಗವಹಿಸುವಿಕೆ, ಪ್ರಾದೇಶಿಕ ಮಟ್ಟದಲ್ಲಿ ಯೋಗಾಭ್ಯಾಸದಲ್ಲಿ ಸಾಮ್ರಾಜ್ಯದ ನಾಯಕತ್ವವನ್ನು ದೃಢೀಕರಿಸುತ್ತದೆ ಮತ್ತು ಅದರ ಪರಿಣತಿಯನ್ನು ವರ್ಗಾಯಿಸಲು ಸೌದಿ ಯೋಗ ಸಮಿತಿಯ ಪ್ರಯತ್ನಗಳಲ್ಲಿ ಒಂದು" ಎಂದು ವಿವರಿಸಿದರು. 

ಒಟ್ಟಾರೆಯಾಗಿ, ಈ ಕಾರ್ಯಕ್ರಮವು ಯೋಗ ಸೇರಿದಂತೆ ಪ್ರದೇಶದಲ್ಲಿನ ಕ್ರೀಡೆ, ಸಾಂಸ್ಕೃತಿಕ ಮತ್ತು ಮನರಂಜನಾ ಬೆಳವಣಿಗೆಗಳಿಗೆ ಅರಬ್ ಯುವ ನಿಯೋಗಗಳನ್ನು ಪರಿಚಯಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: ಫ್ಲಾಟ್ ಫುಟ್ ಸಮಸ್ಯೆ ನಿವಾರಿಸಲು ಈ ವ್ಯಾಯಾಮ ತಪ್ಪದೇ ಮಾಡಿ

ಸೌದಿ ಅರೇಬಿಯಾದಲ್ಲಿ ಯೋಗವನ್ನು ಪರಿಚಯಿಸಿದ ಕೀರ್ತಿಗೆ ಪಾತ್ರರಾಗಿರುವ ನೌಫ್ ಅಲ್-ಮಾರ್ವಾಯಿ ಅವರು, "ನಮ್ಮ ಧ್ಯೇಯವೆಂದರೆ ಅಭ್ಯಾಸಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ಸಮಾಜದ ಎಲ್ಲಾ ವಿಭಾಗಗಳ ಜೀವನ ವಿಧಾನವಾಗಿ ಅದರ ಅಭ್ಯಾಸಕ್ಕಾಗಿ ಜಾಗೃತಿ ಮತ್ತು ಉತ್ಸಾಹವನ್ನು ಹರಡಲು ಅವರನ್ನು ಪ್ರೇರೇಪಿಸುವುದು, ಈವೆಂಟ್‌ಗಳು ಮತ್ತು ಉಪಕ್ರಮಗಳನ್ನು ಹೆಚ್ಚಿಸುವುದು ಮತ್ತು ಪ್ರೋತ್ಸಾಹಿಸುವುದು’’ ಎಂದೂ ಹೇಳಿದರು.

ಯಾವ ದೇಶಗಳು ಭಾಗಿ..?
ಯುಎಇ, ಒಮಾನ್‌, ಈಜಿಪ್ಟ್, ಟ್ಯುನೀಶಿಯಾ, ಮೊರಾಕ್ಕೋ, ಅಲ್ಜೀರಿಯಾ, ಲಿಬಿಯಾ, ಯೆಮೆನ್‌, ಪ್ಯಾಲೆ​ಸ್ತೀನ್‌ ಹಾಗೂ ಮೌರಿ​ಟಾ​ನಿಯಾ ದೇಶ​ಗಳ ಗಣ್ಯರು ಕಾರ್ಯ​ಕ್ರ​ಮ​ದಲ್ಲಿ ಭಾಗಿ​ಯಾ​ಗಿ​ದ್ದರು. ಡಿಸೆಂಬರ್‌ 22 ರಂದು ಆರಂಭ​ವಾದ ಈ ಕಾರ್ಯ​ಕ್ರಮ ಡಿಸೆಂಬರ್‌ 30ರವ​ರೆಗೆ ನಡೆ​ಯ​ಲಿ​ದೆ.

ಇದನ್ನೂ ಓದಿ: Yoga Tips : ಮಧುಮೇಹಿಗಳು ಈ ಯೋಗ ಮಾಡಿದ್ರೆ ಹೆಚ್ಚುತ್ತೆ ಸಮಸ್ಯೆ

click me!