ಮುಸಲ್ಮಾನರ ಪುಣ್ಯ ಕ್ಷೇತ್ರ ಮದೀನಾದಲ್ಲಿ ಭೀಕರ ಅಪಘಾತ: 35 ಸಾವು, ಹಲವರಿಗೆ ಗಾಯ!

By Web DeskFirst Published Oct 17, 2019, 4:50 PM IST
Highlights

ಮುಸಲ್ಮಾನರ ಪುಣ್ಯ ಕ್ಷೇತ್ರ ಮದೀನಾದಲ್ಲಿ ಭೀಕರ ಅಪಘಾತ| 350 ಮಂದಿ ವಿದೇಶಿಗರು ಸಾವು, ನಾಲ್ವರಿಗೆ ಗಾಯ| ಕೇಸ್ ದಾಖಲು, ತನಿಖೆ ಆರಂಭ

ಸೌದಿ ಅರೇಬಿಯಾದ ಪಶ್ಚಿಮ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 35 ಮಂದಿ ವಿದೇಶಿಗರು ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿವೆ. 

ಅಪಘಾತಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರು ಮದೀನಾದ ಅಲ್ ಅಖಲ್ ಪ್ರದೇಶದಲ್ಲಿ ನಿಯಂತ್ರಣ ಕಳೆದುಕೊಂಡ ಬಸ್ ಒಂದು ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಸುಮಾರು 35 ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಬಸ್ ನಲ್ಲಿ ಸೌದಿ ನಾಗರಿಕರು ಸೇರಿದಂತೆ ಏಷ್ಯಾದ ಹಲವು ರಾಷ್ಟ್ರದ ಜನರು ಪ್ರಯಾಣಿಸುತ್ತಿದ್ದರು ಎಂದಿದ್ದಾರೆ.

ಉಮ್ರಾಹ್‌ ಯಾತ್ರೆ ತೆರಳಿದ್ದ 82 ಕನ್ನಡಿಗರು ಅತಂತ್ರ!

ಮದೀನಾದ ಪೊಲೀಸ್ ಆಯುಕ್ತರು ಈ ಕುರಿತು ಪ್ರತಿಕ್ರಿಯಿಸಿದ್ದು, 'ಸೌದಿ ಅರೇಬಿಯಾದ ಪಶ್ಚಿಮ ಭಾಗದಲ್ಲಿರುವ ನಗರದಲ್ಲಿ ಬುಧವಾರದಂದು ಈ ದುರ್ಘಟನೆ ಸಂಭವಿಸಿದೆ. ಖಾಸಗಿ ಬಸ್ ಹಾಗೂ ಲೋಡರ್ ನಡುವೆ ಸಂಭವಿಸಿದ ಈ ಅಪಘಾತದಲ್ಲಿ ಹಲವರು ಮೃತಪಟ್ಟಿದ್ದು, ಗಾಯಾಳುಗಳನ್ನು ಇಲ್ಲಿನ ಅಲ್ ಹಮನಾ ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಟ್ವೀಟ್ ಮಾಡಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಸೂಚಿಸಿದ್ದಾರೆ.

Anguished by the news of a bus crash near Mecca in Saudi Arabia. Condolences to the families of those who lost their lives. Praying for a quick recovery of the injured.

— Narendra Modi (@narendramodi)

ಅಧಿಕಾರಿಗಳು ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಅಪಘಾತ ಸಂಭವಿಸಲು ಕಾರಣವೇನು ಎಂಬ ಕುರಿತು ತನಿಖೆ ಆರಂಭವಾಗಿದೆ.

click me!