ಭಾರತದಿಂದ ಅಗ್ಗದ ದರದ ರೇಬಿಸ್‌ ನಿರೋಧದ ಲಸಿಕೆ ಬಂದ್‌: ಪಾಕ್‌ ಸಂಕಷ್ಟಕ್ಕೆ

By Kannadaprabha NewsFirst Published Oct 16, 2019, 12:40 PM IST
Highlights

ಭಾರತ ಮತ್ತು ಚೀನಾ ದೇಶದಿಂದ ರಫ್ತಾಗುತ್ತಿದ್ದ ಅಗ್ಗದ ದರದ ರೇಬಿಸ್‌ ನಿರೋಧಕ ಲಸಿಕೆ ಪೂರೈಕೆ ಸ್ಥಗಿತ | ಪಾಕಿಸ್ತಾನ ಎದುರಿಸುತ್ತಿದೆ ಸಂಕಷ್ಟ | 

ಕರಾಚಿ (ಅ. 16): ಭಾರತ ಮತ್ತು ಚೀನಾ ದೇಶದಿಂದ ರಫ್ತಾಗುತ್ತಿದ್ದ ಅಗ್ಗದ ದರದ ರೇಬಿಸ್‌ ನಿರೋಧಕ ಲಸಿಕೆ ಪೂರೈಕೆ ಸ್ಥಗಿತಗೊಂಡಿರುವುದು ಪಾಕಿಸ್ತಾನಕ್ಕೆ ಭಾರೀ ಸಂಕಷ್ಟ ತಂದೊಡ್ಡಿದೆ. ಭಾರತ ಮತ್ತು ಚೀನಾದ ಲಸಿಕೆಗಳು 1000 ರು.ಗೆ ಲಭ್ಯವಾಗುತ್ತಿದ್ದರೆ, ಯುರೋಪ್‌ ದೇಶಗಳ ಲಸಿಕೆಗೆ 70000 ರು. ಆಗುತ್ತದೆ.

ಬೀಚ್ ನಲ್ಲಿ ಬಿಕಿನಿ ತೊಟ್ಟು ಓಡಾಡ್ತಿದ್ದವಳು ಜೈಲು ಸೇರಿದಳು, ಯಾಕಂತೆ!

ಈ ಭಾರೀ ವೆಚ್ಚವು ನಾಯಿ ಕಡಿತದ ನಿಯಂತ್ರಣದ ವಿಷಯದಲ್ಲಿ ಪಾಕಿಸ್ತಾನಕ್ಕೆ ಭಾರೀ ಸಮಸ್ಯೆಯಾಗಿದೆ. ಪಾಕಿಸ್ತಾನದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರವೇ ರೇಬಿಸ್‌ ನಿರೋಧಕ ಔಷಧ ಮಾರಾಟಕ್ಕೆ ಲಭ್ಯವಿದೆ. ಇದೀಗ ಅಗ್ಗದ ದರದ ಔಷಧಿ ಪೂರೈಕೆ ಬಂದ್‌ ಆದ ಬಳಿಕ ಆಸ್ಪತ್ರೆಯಲ್ಲಿ ಔಷಧಿ ಕೊರತೆ ಕಾಣಿಸಿಕೊಂಡಿದೆ.
 

click me!